ನ್ಯೂಸ್

ಅಭಿವೃದ್ಧಿ ಕಾರ್ಯಗಳಲ್ಲಿ ತೆಲಂಗಾಣ ನಂ. 1; ಮಹಿಳೆಯರ ಸುರಕ್ಷತೆಗೆ ಆದ್ಯತೆ, ಸರ್ಕಾರಿ ಆರೋಗ್ಯ ಸೇವೆಯಲ್ಲಿ ಮುಂದು..

Webdesk - Ravikanth

ಹೈದರಾಬಾದ್: ಜನರ ಅಭಿವೃದ್ಧಿ ಕಾರ್ಯಗಳನ್ನು ಸಾಧಿಸುವಲ್ಲಿ ತೆಲಂಗಾಣ ರಾಜ್ಯ ದೇಶದ ಮೂಂಚೂಣಿ ರಾಜ್ಯಗಳಲ್ಲಿ ಒಂದಾಗಿದೆ. ವಿದ್ಯುತ್ ಸರಬರಾಜಿನಲ್ಲಿ ತೆಲಂಗಾಣ ದೇಶದಲ್ಲೇ ನಂಬರ್ ಒನ್ ಆಗಿದೆ ಎಂದು ನೀತಿ ಆಯೋಗವೇ ಹೇಳಿರುವುದು ಇದಕ್ಕೆ ಪುಷ್ಟಿ ನೀಡುತ್ತದೆ. ಕಲ್ಯಾಣ ಕಾರ್ಯಕ್ರಮಗಳಲ್ಲೂ ಅಗ್ರ ಸ್ಥಾನದಲ್ಲಿ ನಿಂತಿದೆ ಕೆ. ಚಂದ್ರಶೇಖರ ರಾವ್ ನೇತೃತ್ವದ ತೆಲಂಗಾಣ ರಾಜ್ಯ ಸರ್ಕಾರ. ಗ್ರಾಮೀಣ ಅಭಿವೃದ್ಧಿಯಲ್ಲೂ ದೇಶದಲ್ಲಿ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ.

ಲಾಭದಾಯಕ ಬೆಳೆಗಳನ್ನು ಬೆಳೆಸುವಲ್ಲಿ ತೆಲಂಗಾಣ ಇಡೀ ದೇಶಕ್ಕೆ ಮಾದರಿಯಾಗಿದೆ. 5,000 ಎಕರೆಗಳ ಕ್ಲಸ್ಟರ್ ಸ್ಥಾಪಿಸಿದೆ. ಸಾಕಷ್ಟು ಸಂಖ್ಯೆಯಲ್ಲಿ ಕೃಷಿ ವಿಸ್ತರಣಾ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ರೈತರಿಗೆ ನೆರವಾಗುತ್ತಿದೆ.

ಆರೋಗ್ಯ ಸೇವೆಯಲ್ಲೂ ಮೊದಲು: ನಾಗರಿಕರಿಗೆ ಸರ್ಕಾರಿ ಆರೋಗ್ಯ ಸೇವೆ ಒದಗಿಸುವಲ್ಲಿ ತೆಲಂಗಾಣ ಮುಂಚೂಣಿಯಲ್ಲಿದೆ ಎಂದು ನೀತಿ ಆಯೋಗವೇ ಪ್ರಮಾಣೀಕರಿಸಿರುವುದು ರಾಜ್ಯದ ಘನತೆಯನ್ನು ಹೆಚ್ಚಿಸಿದೆ. ಜಾಗತಿಕವಾಗಿ ಸುಗಮ ಜೀವನ ನಡೆಸಬಲ್ಲ ನಗರಗಳ ಪೈಕಿ ತೆಲಂಗಾಣ ರಾಜಧಾನಿ ಹೈದರಾಬಾದ್ ನಂಬರ್ ಒನ್ ನಗರವಾಗಿದೆ ಎಂದು ಜೆಎಲ್​ಎಲ್ ಹೇಳಿದೆ.

  • ಮಹಿಳೆಯರ ಸುರಕ್ಷತೆ ವಿಚಾರದಲ್ಲಿ ಅತೀವ ಕಾಳಜಿ ವಹಿಸುವ ಸರ್ಕಾರವಾಗಿದ್ದು ಸಿಸಿಟಿವಿ ಸ್ಥಾಪನೆಯಲ್ಲಿ ಒಂದನೇ ಸ್ಥಾನದಲ್ಲಿದೆ.
  • ಅತಿ ಸಣ್ಣ ನೀರಾವರಿಗೆ ಹೆಚ್ಚು ಸಬ್ಸಿಡಿ.
  • ಕಾಳೇಶ್ವರಂ -ನೀರಾವರಿಯಲ್ಲಿ ನಂಬರ್ ಒನ್ ಸ್ಥಾನದಲ್ಲಿದೆ.
  • ಮಿಷನ್ ಕಾಕತೀಯದಡಿ ದಾಖಲೆ ಪ್ರಮಾಣದಲ್ಲಿ ಕೆರೆಗಳ ಪುನರುಜ್ಜೀವನಗೊಳಿಸಲಾಗಿದೆ.
  • ಎಲ್ಲ ಮನೆಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಮಿಷನ್ ಭಗೀರಥದಲ್ಲಿ ಒಂದನೇ ಸ್ಥಾನದಲ್ಲಿದೆ.
  • ಪತ್ರಕರ್ತರಿಗೆ ನೆರವು
  • ಪತ್ರಕರ್ತರು ಮತ್ತು ವಕೀಲರಿಗೆ ನೆರವು ಒದಗಿಸುವಲ್ಲಿ ತೆಲಂಗಾಣ ದೇಶದಲ್ಲಿ ಮೊದಲ ಸ್ಥಾನದಲ್ಲಿದೆ.
  • ಪತ್ರಕರ್ತರು, ಹೋಂ ಗಾರ್ಡ್​ಗಳು, ಕಟ್ಟಡ ಕಾರ್ವಿುಕರು ಮತ್ತು ಚಾಲಕರ ಅಪಘಾತ ವಿಮೆಯ 5 ಲಕ್ಷ ರೂಪಾಯಿಗಳ ಕವರೇಜ್​ನಲ್ಲಿ ನಂಬರ್ ಒನ್.
  • ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ನೆರವು ಒದಗಿಸುವಲ್ಲಿಯೂ ತೆಲಂಗಾಣ ನಂಬರ್ ಒನ್ .
  • ನೈಸರ್ಗಿಕ ವಿಕೋಪ ಸಂತ್ರಸ್ತರಿಗೆ ಹೆಚ್ಚು ಪರಿಹಾರ ನೀಡಿಕೆ.
  • ಸಾರ್ವಜನಿಕ ಕಲ್ಯಾಣ ಯೋಜನೆಗಳಿಗಾಗಿ ಪ್ರತಿ ವರ್ಷ 50,000 ಕೋಟಿ ರೂಪಾಯಿ ವೆಚ್ಚ.
  • ಸುಸ್ಥಿರ ಅಭಿವೃದ್ಧಿ ಸಾಧನೆಯ ಮೂರು ರಾಜ್ಯಗಳಲ್ಲಿ ತೆಲಂಗಾಣವೂ ಒಂದೆಂದು ನೀತಿ ಆಯೋಗ ಘೋಷಿಸಿದೆ.
  • ಸಿಂಗರೇಣಿ ಕಲ್ಲಿದ್ದಲು ಗಣಿ ಕಾರ್ವಿುಕರಿಗೆ ಲಾಭದಲ್ಲಿ ಶೇಕಡ 29 ನೀಡಿಕೆ.
  • ಗೃಹ ರಕ್ಷಕ ದಳ ಸಿಬ್ಬಂದಿಗೆ ಪ್ರಸ್ತುತ 21,000 ರೂಪಾಯಿ ವೇತನವಿದ್ದು ಪ್ರತಿ ವರ್ಷ 1,000 ರೂಪಾಯಿ ಏರಿಕೆ ಮಾಡಲಾಗುತ್ತದೆ.
  • ಗರ್ಭಿಣಿಯರಿಗೆ ಹೆಚ್ಚು ನೆರವು ನೀಡಿಕೆ.
  • ಹೆಚ್ಚೆಚ್ಚು ಜನರಿಗೆ ದೃಷ್ಟಿ ಪರೀಕ್ಷೆ.
  • ಶಾಸಕರ ಕ್ಷೇತ್ರ ಅಭಿವೃದ್ಧಿಗೆ 3 ಕೋಟಿ ರೂಪಾಯಿ ನೀಡಿಕೆ.
  • ಕೈಗಾರಿಕೆಗಳ ಸ್ಥಾಪನೆಗೆ ಉತ್ತೇಜನ ನೀಡಲು ಕಡಿಮೆ ಸಮಯದಲ್ಲಿ ಕೈಗಾರಿಕಾ ಪರ್ವಿುಟ್ ನೀಡಿಕೆ.
  • ಕೈಮಗ್ಗ ಕಾರ್ವಿುಕರು ಮತ್ತು ಮೀನುಗಾರ ಕುಟುಂಬಗಳಿಗೆ ಹೆಚ್ಚು ಪರಿಹಾರ.