ನ್ಯೂಸ್

Singareni Workers: ಆ ಗಣಿ ಕಾರ್ಮಿಕರಿಗೆ ಭರ್ಜರಿ ಬೋನಸ್.. ತಲಾ 93 ಸಾವಿರ ರೂ.ಗೂ ಅಧಿಕ!

ಹೈದರಾಬಾದ್​: ಸಿಂಗರೇಣಿ ಕಲ್ಲಿದ್ದಲು ಗಣಿ ಕಾರ್ಮಿಕರಿಗೆ(Singareni Workers) ತೆಲಂಗಣ ಸರ್ಕಾರ ದೀಪಾವಳಿ ಪ್ರಯುಕ್ತ ಭರ್ಜರಿ ಬೋನಸ್​ ನೀಡಿದೆ.

ಪ್ರತಿವರ್ಷ ಆಡಳಿತ ಮಂಡಳಿಯು ಕಾರ್ಮಿಕರಿಗೆ ಪರ್ಫಾರ್ಮೆನ್ಸ್ ಲಿಂಕ್ಡ್ ರಿವಾರ್ಡ್ (ಪಿಎಲ್ ಆರ್) ಅಡಿಯಲ್ಲಿ ಬೋನಸ್ ನೀಡುತ್ತಿದ್ದು, ಈ ವರ್ಷ ಪ್ರತಿ ಕಾರ್ಮಿಕನಿಗೆ ಕನಿಷ್ಠ 93,750 ರೂ. ನೀಡಿದೆ. ಈ ನಿಟ್ಟಿನಲ್ಲಿ ರೇವಂತ್​ ರೆಡ್ಡಿ ಸರ್ಕಾರ 358 ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದೆ.

ಇದೇ ಶುಕ್ರವಾರ (ಅಕ್ಟೋಬರ್ 25) ಕಾರ್ಮಿಕರ ಖಾತೆಗೆ ಹಣ ಜಮೆಯಾಗಲಿದೆ ಸಂಸ್ಥೆಯ 42 ಸಾವಿರ ಕಾರ್ಯಕರ್ತರು ಈ ಬೋನಸ್‌ ಪ್ರಯೋಜನ ಪಡೆಯುತ್ತಾರೆ ಎಂದು ಉಪ ಮುಖ್ಯಮಂತ್ರಿ ಭಟ್ಟಿ ವಿಕ್ರಮಾರ್ಕ ಸ್ಪಷ್ಟಪಡಿಸಿದ್ದಾರೆ.

ಇದೇ 2024ರ ಸೆ.29ರಂದು ಕೋಲ್ ಇಂಡಿಯಾ ಅಧಿಕಾರಿಗಳು ದೆಹಲಿಯಲ್ಲಿ ರಾಷ್ಟ್ರೀಯ ಕಾರ್ಮಿಕ ಸಂಘಟನೆಗಳ ಜತೆ ಮಾತುಕತೆ ನಡೆಸಿದ್ದು, ಕಾರ್ಮಿಕರಿಗೆ 1 ಲಕ್ಷ ರೂ.ಬೋನಸ್​ ನೀಡುವಂತೆ ಒತ್ತಾಯಿಸಿದ್ದವು. ಕಳೆದ ವರ್ಷ ಪ್ರತಿ ಕಾರ್ಮಿಕನಿಗೆ 85 ಸಾವಿರದ 500 ರೂಪಾಯಿ ನೀಡಲಾಗಿತ್ತು. ಈ ಬಾರಿ 93,750 ರೂ.ಗಳನ್ನು ನೀಡುವುದಾಗಿ ಆಡಳಿತ ಮಮಡಳಿ ನಿರ್ಧಾರಕ್ಕೆ ಬಂದಿದೆ

ಇನ್ನು 2023-24ನೇ ಸಾಲಿನಲ್ಲಿ ಸಿಂಗರೇಣಿ ಕಂಪನಿ 4701 ಕೋಟಿ ರೂ.ಗಳ ಲಾಭವನ್ನು ಘೋಷಿಸಿದೆ. ಈ ಪೈಕಿ 796 ಕೋಟಿ ರೂ.ಗಳನ್ನು ಕಾರ್ಮಿಕರಿಗೆ ನೀಡಲಾಗಿದೆ.