ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ- 2023ರ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರಿನ ಏಳು ಕ್ಷೇತ್ರಗಳ ಮೇಲುಸ್ತುವಾರಿ ಆಗಿ ತೆಲಂಗಾಣ ರಾಜ್ಯದ ಎಡಿಜಿಪಿ ಡಾ.ಸೌಮ್ಯ ಮಿಶ್ರಾ ನೇಮಕಗೊಂಡಿದ್ದಾರೆ.
ಬೆಂಗಳೂರಿನ ಯಲಹಂಕ, ಬ್ಯಾಟರಾಯನಪುರ, ಯಶವಂತಪುರ, ದಾಸರಹಳ್ಳಿ, ಮಹದೇವಪುರ, ಬೆಂಗಳೂರು ದಕ್ಷಿಣ ಮತ್ತು ಆನೇಕಲ್ ವಿಧಾನಸಭಾ ಕ್ಷೇತ್ರಗಳ ಮೇಲುಸ್ತುವಾರಿಯಾಗಿ ಅವರು ಕಾರ್ಯನಿರ್ವಹಿಸಲಿರುವರು.
ಇದನ್ನೂ ಓದಿ: ರಾಹುಲ್ ಗಾಂಧಿ ಕಾಲಿಟ್ಟು ಹೋದಲ್ಲಿ ಬಿಜೆಪಿಗೆ ಜಯ: ನನ್ನ ಗೆಲುವಿಗೂ ಅವರು ಬಂದು ಹೋಗಲಿ ಎಂದ ಬಿಜೆಪಿ ಅಭ್ಯರ್ಥಿ
ಈ ಏಳು ವಿಧಾನಸಭಾ ಕ್ಷೇತ್ರಗಳಲ್ಲಿನ ಕಾನೂನು ಸುವ್ಯವಸ್ಥೆಯ ಮೇಲುಸ್ತುವಾರಿ ನಿಭಾಯಿಸಲಿರುವ ಸೌಮ್ಯ, ವಿಧಾನಸಭಾ ಚುನಾವಣೆ ಸಂಬಂಧಿತ ಅಕ್ರಮ ಮತ್ತು ದೂರುಗಳ ಮೇಲೆ ನಿಗಾ ಇರಿಸಲಿದ್ದಾರೆ. ಆ ಮೂಲಕ ಸುಗಮ ಚುನಾವಣೆ ನಡೆಯುವಂತೆ ಕ್ರಮಕೈಗೊಳ್ಳಲಿದ್ದಾರೆ.