ನ್ಯೂಸ್

ಭೀಕರ ಅಪಘಾತ: ತೋಟಕ್ಕೆ ಹೋಗುತ್ತಿದ್ದ ನಾಲ್ವರು ಕೂಲಿ ಕಾರ್ಮಿಕರ ದಾರುಣ ಸಾವು

theerthaswamy

ತೆಲಂಗಾಣ: ಟಾಟಾ ಏಸ್​​ಗೆ ಲಾರಿ ಡಿಕ್ಕಿಯಾಗಿ ನಾಲ್ವರು ಸಾವನ್ನಪ್ಪಿ, 21 ಮಂದಿ ಗಾಯಗೊಂಡಿರುವ ಘಟನೆ ತೆಲಂಗಾಣದ ಹನಮಕೊಂಡ ಜಿಲ್ಲೆಯ ಶಾಯಂಪೇಟ ವಲಯದ ಮಾಂದರಿಪೇಟ ಗ್ರಾಮದಲ್ಲಿ ನಡೆದಿದೆ.

ಪತ್ತಿಪಾಕ ಗ್ರಾಮದ ಕೂಲಿ ಕಾರ್ಮಿಕರು ಮೆಣಸಿನಕಾಯಿ ತೋಟಕ್ಕೆ ಕೆಲಸ ಮಾಡಲು ಮೊಗುಲ್ಲಪಲ್ಲಿಗೆ ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ. ಅಪಘಾತದಲ್ಲಿ ಮೂವರು ಮಹಿಳೆಯರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಒಬ್ಬರು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಮೃತರನ್ನು ಮಂಜುಳಾ (45), ರೇಣುಕಾ (48), ವಿಮಲಾ (50) ಎಂದು ಗುರುತಿಸಲಾಗಿದ್ದು, ಮತ್ತೊಂದು ಮೃತದೇಹದ ಗುರುತು ಪತ್ತೆಯಾಗಿಲ್ಲ. ಗಾಯಗೊಂಡ 21 ಮಂದಿಯನ್ನು ವಾರಂಗಲ್ ಎಂಜಿಎಂ ಆಸ್ಪತ್ರೆಗೆ ದಾಖಲಿಸಲಾಗಿದೆ.