ನ್ಯೂಸ್

ತನ್ನ ಮನೆಯನ್ನೇ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದ ತೇಜಸ್ವಿ ಯಾದವ್

ಪಟ್ನಾ; ಬಿಹಾರದ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಅವರು ತಮ್ಮ ಸರ್ಕಾರಿ ನಿವಾಸವನ್ನು ಕೋವಿಡ್ ಕೇರ ಸೆಂಟರ್ ಆಗಿ ಪರಿವರ್ತಿಸಿ ಸುದ್ದಿಯಾಗಿದ್ದಾರೆ. ಅವರು 100 ಹಾಸಿಗೆಗಳುಳ್ಳ ಕೇಂದ್ರವನ್ನು ಕೋವಿಡ್ ಆರೈಕೆಗಾಗಿ ಮೀಸಲಿರಿಸಿದ್ದಾರೆ.

ಅಲ್ಲದೇ ಈ ಆರೈಕೆ ಕೇಂದ್ರದಲ್ಲಿ ಆಕ್ಸಿಜನ್ ಸೌಲಭ್ಯ ಹಾಗೂ ಇನ್ನಿತರ ತುರ್ತು ಅವಶ್ಯಕತೆಗಳನ್ನು ಪೂರೈಸಲಾಗಿದೆ ಎಂದು ಎಎನ್ ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಎಲ್ಲ ಸರ್ಕಾರಿ ನಿವಾಸಗಳನ್ನು ಕೋವಿಡ್ ಆರೈಕೆ ಕೇಂದ್ರ ಮತ್ತು ಕ್ವಾರಂಟೈನ್ ಕೇಂದ್ರವನ್ನಾಗಿ ಪರಿವರ್ತಿಸಲು ಬಿಹಾರ್ ಸರ್ಕಾರಕ್ಕೆ ತೇಜಸ್ವಿ ಯಾದವ್ ಮನವಿ ಮಾಡಿದ್ದಾರೆ. ಆದರೆ ಬಿಹಾರ ಸರ್ಕಾರದಿಂದ ಇದಕ್ಕೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ತೇಜಸ್ವಿ ಯಾದವ್ ಆರೋಪಿಸಿದ್ದಾರೆ.

ಇನ್ನು ಬಿಹಾರದಲ್ಲೂ‌ ಕೂಡ ಕೋವಿಡ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಬುಧವಾರ 6584 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿವೆ. 111 ಜನ ಮೃತಪಟ್ಟಿದ್ದಾರೆ.