ನ್ಯೂಸ್

ತಹಸೀಲ್ದಾರ್​ ಕಚೇರಿಗೆ ಜಿಲ್ಲಾಧಿಕಾರಿ ಭೇಟಿ, ಪರಿಶೀಲನೆ

ಹಾವೇರಿ: ನಗರದ ತಹಸೀಲ್ದಾರ್​ ಕಚೇರಿಗೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಸೋಮವಾರ ಭೇಟಿ ನೀಡಿ, ಕಚೇರಿಯ ಕಾರ್ಯ ವೈಖರಿ, ಪಾಕಿಂರ್ಗ್​ ವ್ಯವಸ್ಥೆ, ಸ್ವಚ್ಛತೆ ಕುರಿತು ಪರಿಶೀಲನೆ ನಡೆಸಿದರು.
ನಂತರ ಸಾರ್ವಜನಿಕ ಅವಹವಾಲುಗಳನ್ನು ಸ್ವೀಕರಿಸಿದ ಅವರು, ಕಾಲ ಮಿತಿಗೊಳಗೆ ಸಾರ್ವಜನಿಕರ ಅಜಿರ್ಗಳ ವಿಲೆಮಾಡುವಂತೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಸೂಚನೆ ನೀಡಿದರು.