ಚೀನಾ: ಚೀನಾದಲ್ಲಿ ಹದಿಹರೆಯದ ಹುಡುಗನೊಬ್ಬ ಮೋಟಾರ್‌ಸೈಕಲ್ ಖರೀದಿಸಲು 1 ಮಿಲಿಯನ್ yuan ($139,000) ಮೌಲ್ಯದ ಆಸ್ತಿಯನ್ನು ಅರ್ಧ ಬೆಲೆಗೆ ಮಾರಾಟ ಮಾಡಿದ್ದಾನೆ ಎಂದು ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ (SCMP) ನಲ್ಲಿ ವರದಿಯಾಗಿದೆ. ಆದರೆ ಕೊನೆಗೆ ಈ ಮಾರಾಟ ರದ್ದುಗೊಳಿಸಲಾಗಿದೆ. ಮಧ್ಯ ಚೀನಾದ ಹೆನಾನ್ ಪ್ರಾಂತ್ಯದಲ್ಲಿ ಈ ಘಟನೆ ನಡೆದಿದ್ದು, ನ್ಯಾಯಾಲಯದ ಮುಂದೆ ವಿಷಯ ಮಂಡಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. Xiaohua ಎಂಬ ಯುವಕ ಮತ್ತು ಇಬ್ಬರು ಆಸ್ತಿ ವಿತರಕರ ನಡುವಿನ ಒಪ್ಪಂದದ ಪೇಪರ್‌ಗಳನ್ನು ನ್ಯಾಯಾಲಯವು ಪರಿಶೀಲಿಸಿದ್ದು, ಅದು ಲೀಗಲ್ ಆಗಿತ್ತು ಎಂದು ಹೇಳಲಾಗಿದೆ.
ಘಟನೆಯ ವಿವರ
ಪೋಷಕರು ಮೋಟಾರ್ ಸೈಕಲ್ ಖರೀದಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಅಜ್ಜನಿಂದ ಪಿತ್ರಾರ್ಜಿತವಾಗಿ ಬಂದ ಆಸ್ತಿಯನ್ನು ಮಾರಾಟ ಮಾಡಲು ಯುವಕ ನಿರ್ಧರಿಸಿದ್ದಾನೆ. ಆ ನಂತರ ಪೋಷಕರಿಗೆ ತಿಳಿಸದೆ ಆಸ್ತಿ ಏಜೆಂಟರನ್ನು ಸಂಪರ್ಕಿಸಿದ್ದಾನೆ. ಅದನ್ನು $ 72,000 ಗೆ ಮಾರಾಟ ಮಾಡಲು ಒಪ್ಪಿಕೊಳ್ಳಲಾಗಿದೆ. ಆಸ್ತಿ ಏಜೆಂಟ್ ಅದನ್ನು ಲಾಭಕ್ಕಾಗಿ ಮತ್ತೊಂದು ಏಜೆಂಟರಿಗೆ ಮಾರಾಟ ಮಾಡಿದ್ದಾನೆ ಎಂದು ವರದಿಯಾಗಿದೆ. Xiaohua ಅವರ ತಾಯಿ ಒಪ್ಪಂದದ ಬಗ್ಗೆ ತಿಳಿದಾಗ, ಆಸ್ತಿ ಏಜೆಂಟರನ್ನು ಸಂಪರ್ಕಿಸಿ, ಒಪ್ಪಂದವನ್ನು ರದ್ದುಗೊಳಿಸುವಂತೆ ವಿನಂತಿಸಿಕೊಂಡಿದ್ದಾರೆ. ಆದರೆ ಅವರು ನಿರಾಕರಿಸಿದಾಗ, ಯುವಕನ ಪೋಷಕರು ಕಾನೂನು ಹೋರಾಟದ ಮೊರೆ ಹೋಗಿದ್ದಾರೆ.
Xiaohua ಅವರ ನಡವಳಿಕೆಯ ಬಗ್ಗೆ ನ್ಯಾಯಾಲಯವು ಆಶ್ಚರ್ಯವನ್ನು ವ್ಯಕ್ತಪಡಿಸಿದರೆ, ಅವರ ತಾಯಿ ಇದು ಅನ್ಯಾಯವಾಗಿ ನಡೆದ ವ್ಯಾಪಾರ ಎಂದು ಒತ್ತಾಯಿಸಿದ್ದಾರೆ.
ನಂತರ ನ್ಯಾಯಾಧೀಶರು ಮಾರಾಟ ಪತ್ರವನ್ನು ಪರಿಶೀಲಿಸಿ, ಹದಿಹರೆಯದವರು ಮತ್ತು ಆಸ್ತಿ ಏಜೆಂಟ್ಗಳ ನಡುವಿನ ಸಂಭಾಷಣೆಯನ್ನು ಆಲಿಸಿದ್ದಾರೆ. ಕೊನೆಗೆ ಯುವಕನಿಗೆ ಆಸ್ತಿಯ ಮಾರುಕಟ್ಟೆ ಮೌಲ್ಯದ ಬಗ್ಗೆ ತಿಳಿದಿರುವುದಿಲ್ಲ ಮತ್ತು ಆಸ್ತಿ ಏಜೆಂಟ್ ಆಸ್ತಿಯನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲು ವಂಚಿಸಿದ್ದಾನೆ ಎಂಬ ತೀರ್ಮಾನಕ್ಕೆ ಬರಲಾಗಿದೆ. ಆ ನಂತರ ನ್ಯಾಯಾಲಯವು ಮಾರಾಟ ರದ್ದುಗೊಳಿಸಿ, ಆಸ್ತಿಯ ಮಾಲೀಕತ್ವವನ್ನು Xiaohua ಗೆ ನೀಡಿದೆ.