ಗುಜರಾತ್: ಗುಜರಾತ್‌ನ ಅಮ್ರೇಲಿ ಪಟ್ಟಣದಲ್ಲಿ 15 ವರ್ಷದ ಬಾಲಕಿ ಶುಕ್ರವಾರ ಪರೀಕ್ಷಾ ಹಾಲ್‌ಗೆ ಪ್ರವೇಶಿಸುವಾಗ ಹೃದಯ ಸ್ತಂಭನದಿಂದ ಪ್ರಾಣ ಬಿಟ್ಟದ್ದಾಳೆ ಎನ್ನಲಾಗಿದೆ.
ಸಾಕ್ಷಿ ರಾಜೋಸರ(15) ಮೃತ ಬಾಲಕಿ. ಅಮ್ರೇಲಿ ಪಟ್ಟಣದಲ್ಲಿ ನಿವಾಸಿಯಾಗಿದ್ದಾರೆ. ಹೃದಯ ಸ್ತಂಭನದಿಂದ ಆಕೆ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.
ನಡೆದಿದ್ದೇನು?: 9ನೇ ತರಗತಿ ವಿದ್ಯಾರ್ಥಿನಿ ಸಾಕ್ಷಿ ರಾಜೋಸರ ಬೆಳಗ್ಗೆ ಶಾಂತಬಾ ಗಜೇರಾ ಶಾಲೆಯ ತರಗತಿಯಲ್ಲಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾಳೆ. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಆಕೆಯನ್ನು ಶೀಘ್ರದಲ್ಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಬಾಲಕಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ. ವಿದ್ಯಾರ್ಥಿನಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಎಕ್ಸಾಂ ಬರೆಯಲು ಪರೀಕ್ಷೆಯ ಹಾಲ್‌ಗೆ ಬರೆಯೋಕೆ ಹೋದ ಬಾಲಕಿ ಹೃದಯ ಸ್ತಂಭನದಿಂದ ಬಲಿಯಾಗಿದ್ದಾಳೆಂದು ವರದಿ ತಿಳಿಸಿದೆ.
ಗುಜರಾತ್‌ನಲ್ಲಿ ಹೃದಯ ಸಮಸ್ಯೆಗೆ ಸಂಬಂಧಿಸಿದ ಹಲವಾರು ಸಾವುಗಳು ಕಳೆದ ಕೆಲ ತಿಂಗಳಲ್ಲಿ ದಾಖಲಾಗಿವೆ. ನವರಾತ್ರಿ ಆಚರಣೆಗಳಿಗೆ ಸಂಬಂಧಿಸಿದ 'ಗರ್ಬಾ' ಕಾರ್ಯಕ್ರಮಗಳಲ್ಲಿ ಸಹ ಹಲವರು ಬಲಿಯಾಗಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, ಗುಜರಾತ್ ರಾಜ್ಯ ಆರೋಗ್ಯ ಸಚಿವ ರುಶಿಕೇಶ್ ಪಟೇಲ್, ಪರಿಸ್ಥಿತಿಯನ್ನು ಪರಿಹರಿಸಲು ವೈದ್ಯಕೀಯ ತಜ್ಞರು, ನಿರ್ದಿಷ್ಟವಾಗಿ ಹೃದ್ರೋಗ ತಜ್ಞರೊಂದಿಗೆ ಸಭೆ ಕರೆದಿದ್ದಾರೆ.
ತಜ್ಞರು ಈ ಸಾವುಗಳ ಕಾರಣಗಳನ್ನು ಮತ್ತು ಸಂಭಾವ್ಯ ಪರಿಹಾರಗಳನ್ನು ಗುರುತಿಸಲು ಡೇಟಾವನ್ನು ಸಂಗ್ರಹಿಸಲು ಗುಜರಾತ್ ಆರೋಗ್ಯ ಸಚಿವರು ಮನವಿ ಮಾಡಿದ್ದಾರೆ.