ಎಜೆ-ಆಸ್ಟ್ರಿಕ್ಸ್-2026 ಉತ್ಸವವನ್ನು ಡಾ.ಟಿ.ಜಯಪ್ರಕಾಶ್ ರಾವ್ ಉದ್ಘಾಟಿಸಿದರು. ಡಾ.ಪಿ.ಮಹಾಬಲೇಶ್ವರಪ್ಪ, ಡಾ.ಆ್ಯಂಟನಿ ಪಿ.ಜೆ. ಮೊದಲಾದವರಿದ್ದರು. 
ನ್ಯೂಸ್

ನವೀನ ಚಿಂತನೆಗೆ ತಾಂತ್ರಿಕ ಉತ್ಸವಗಳು ಸಹಕಾರಿ

ಪ್ರಮುಖ ಮುಖ್ಯಾಂಶಗಳು

  • ನವೀನ ಚಿಂತನೆ, ತಂಡ ಮನೋಭಾವ ಬೆಳೆಸಲು ಸಹಕಾರಿ
  • ನಾಯಕತ್ವ ಗುಣಗಳ ಅಭಿವೃದ್ಧಿ
ಮಂಗಳೂರು: ತಾಂತ್ರಿಕ ಉತ್ಸವಗಳು ವಿದ್ಯಾರ್ಥಿಗಳಲ್ಲಿ ತಾಂತ್ರಿಕ ಸಾಮರ್ಥ್ಯ, ನವೀನ ಚಿಂತನೆ ಹಾಗೂ ತಂಡ ಮನೋಭಾವ ಬೆಳೆಸಲು ಸಹಕಾರಿಯಾಗುತ್ತವೆ ಎಂದು ಕಾಲೇಜು ಕ್ಯಾಂಪಸ್ ಡೈರೆಕ್ಟರ್ ಡಾ.ಟಿ.ಜಯಪ್ರಕಾಶ್ ರಾವ್ ಹೇಳಿದರು.
ಎ.ಜೆ. ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಜ್ಯಮಟ್ಟದ ಎರಡು ದಿನಗಳ ನಿರ್ವಹಣಾ, ತಾಂತ್ರಿಕ ಹಾಗೂ ಸಾಂಸ್ಕೃತಿಕ ಉತ್ಸವ ಎಜೆ-ಆಸ್ಟ್ರಿಕ್ಸ್ 2026 ಉದ್ಘಾಟಿಸಿ ಮಾತನಾಡಿದರು.
ವಿವಿಧ ಸ್ಪರ್ಧೆಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಪ್ರತಿಭೆ, ನಾಯಕತ್ವ ಗುಣ ಹಾಗೂ ಕೌಶಲಗಳನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಲು ಇದು ಉತ್ತಮ ವೇದಿಕೆ ಎಂದರು.
ಪ್ರಭಾರ ಪ್ರಾಂಶುಪಾಲ ಡಾ.ಪಿ.ಮಹಾಬಲೇಶ್ವರಪ್ಪ ಮಾತನಾಡಿ, ಇಂತಹ ಉತ್ಸವಗಳು ವಿದ್ಯಾರ್ಥಿಗಳ ಸೃಜನಶೀಲತೆ, ಸಂವಹನ ಕೌಶಲ ಹಾಗೂ ನಾಯಕತ್ವ ಗುಣಗಳನ್ನು ಅಭಿವೃದ್ಧಿಪಡಿಸಲು ಮಹತ್ವದ ಪಾತ್ರವಹಿಸುತ್ತವೆ ಎಂದರು.
ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಎ.ಜೆ.ಶೆಟ್ಟಿ, ಉಪಾಧ್ಯಕ್ಷ  ಪ್ರಶಾಂತ್ ಶೆಟ್ಟಿ ಶುಭಹಾರೈಸಿದರು.
ಉಪ ಪ್ರಾಂಶುಪಾಲ ಡಾ.ಆ್ಯಂಟನಿ ಪಿ.ಜೆ. ಉಪಸ್ಥಿತರಿದ್ದರು. ಎಂಬಿಎ ವಿಭಾಗ ಮುಖ್ಯಸ್ಥ ಡಾ.ಬ್ರೂಸ್ ಮ್ಯಾಥ್ಯೂ ಸ್ವಾಗತಿಸಿದರು. ಎಂಬಿಎ ವಿಭಾಗ ಸಂಯೋಜಕರು, ಉಪನ್ಯಾಸಕಿ ಡಾ.ರಶ್ಮಿತಾ ಕೋಟ್ಯಾನ್ ದಿಕ್ಸೂಚಿ ಭಾಷಣ ಮಾಡಿದರು. ವಿದ್ಯಾರ್ಥಿ ಸಂಯೋಜಕ  ಶ್ರೇಯಸ್ ವಂದಿಸಿದರು. ಅನುಸೂಯಾ ಕಾರ್ಯಕ್ರಮ ನಿರೂಪಿಸಿದರು.