ನ್ಯೂಸ್

ತಾಂತ್ರಿಕ ದೋಷ; ಟೇಕ್ ಆಫ್ ಆದ ಕೆಲವೇ ನಿಮಿಷಗಳಲ್ಲಿ ಮತ್ತೆ ಕೆಳಗಿಳಿದ ಏರ್​ ಇಂಡಿಯಾ ಎಕ್ಸ್‌ಪ್ರೆಸ್| Air India

ಹೈದರಾಬಾದ್‌; ಥೈಲ್ಯಾಂಡ್‌ನ ಫುಕೆಟ್‌ಗೆ ತೆರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನವು ಇಂದು (19) ಬೆಳಗ್ಗೆ ಹೈದರಾಬಾದ್‌ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟ ಸ್ವಲ್ಪ ಸಮಯದ ನಂತರ ಮತ್ತೆ ಅದೇ ನಿಲ್ದಾಣಕ್ಕೆ ವಾಪಸ್​ ಆಗಿದೆ.

ಫ್ಲೈಟ್ಅವೇರ್ ದತ್ತಾಂಶದ ಪ್ರಕಾರ, ಬೋಯಿಂಗ್ 737 ಮ್ಯಾಕ್ಸ್ 8 (ನೋಂದಣಿ VT-BWA) ವಿಮಾನ IX110 ಬೆಳಗ್ಗೆ 6:41 ಕ್ಕೆ ಹೊರಟು ಮತ್ತೆ 16 ನಿಮಿಷಗಳ ಕಾಲ ಮೇಲೆ ಹಾರಿ ಮತ್ತೆ 6.57 ಕ್ಕೆ ವಾಪಸ್ಸು ಇಳಿದಿದೆ ಎನ್ನಲಾಗಿದೆ.

(ಏಜೆನ್ಸೀಸ್)

ಈ ಬದಲಾವಣೆಗೆ ಕಾರಣವೇನೆಂದು ವಿಮಾನಯಾನ ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳು ಇನ್ನೂ ಸ್ಪಷ್ಟ ಮಾಹಿತಿ ನೀಡಿಲ್ಲ.

ಇದಕ್ಕೆ ಪ್ರತಿಕ್ರಿಯಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್, ವಿಮಾನದ ಅಡಚಣೆಯಿಂದ ಉಂಟಾದ ಅನಾನುಕೂಲತೆಗೆ ನಾವು ಕ್ಷಮೆಯಾಚಿಸುತ್ತೇವೆ. ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ ಎಂಬುದನ್ನು ದಯವಿಟ್ಟು ಗಮನಿಸಿ, ಏಕೆಂದರೆ ನಮ್ಮ ಅತಿಥಿಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಪ್ರಮುಖ ಆದ್ಯತೆಯಾಗಿದೆ. ಸಮಸ್ಯೆಯನ್ನು ಪರಿಹರಿಸುವಲ್ಲಿ ನಾವು ಕೆಲಸ ಮಾಡುತ್ತಿದ್ದೇವೆ ಎಂದಿದ್ದಾರೆ.