ಮುಂಬೈ: ಅಮೆರಿಕಕ್ಕೆ ತೆರಳುತ್ತಿದ್ದ ಏರ್ ಇಂಡಿಯಾ(Air India flight) ವಿಮಾನವೊಂದು ತಾಂತ್ರಿಕ ದೋಷ ಹಿನ್ನೆಲೆ ಇಂದು(ಅ. 22) ಬೆಳಗ್ಗೆ ಮುನ್ನೆಚ್ಚರಿಕೆ ಕ್ರಮವಾಗಿ ಮುಂಬೈ ವಿಮಾನ ನಿಲ್ದಾಣಕ್ಕೆ ವಾಪಸ್ ಆಗಿದ್ದು, ಸುರಕ್ಷಿತವಾಗಿ ಲ್ಯಾಂಡಿಂಗ್ ಆಗಿದೆ ಎಂದು ವರದಿಯಾಗಿದೆ.
ಇಂದು ಮುಂಬೈನಿಂದ ನ್ಯೂಯಾರ್ಕ್ಗೆ ಹೊರಟಿದ್ದ AI191 ವಿಮಾನದಲ್ಲಿ ಶಂಕಿತ ತಾಂತ್ರಿಕ ದೋಷದಿಂದಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಟೇಕಾಫ್ ಆದ ಕೆಲ ಗಂಟೆಗಳಲ್ಲಿ ಸಿಬ್ಬಂದಿ ಮುಂಬೈಗೆ ವಿಮಾನವನ್ನು ವಾಪಸ್ ಹಿಂತಿರುಗಿಸಿ ಸುರಕ್ಷಿತವಾಗಿ ಲ್ಯಾಂಡಿಂಗ್ ಮಾಡಲಾಗಿದೆ ಎಂದು ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ತಿಳಿಸಿದೆ
ವಿಮಾನ ಲ್ಯಾಂಡ್ ಆದ ಬಳಿಕ ತಪಾಸಣೆ ನಡೆಸಲಾಗಿದೆ. ಹಾಗೆಯೇ ಮುಂಬೈ ಮತ್ತು ನ್ಯೂಯಾರ್ಕ್ ನಡುವೆ ಕಾರ್ಯನಿರ್ವಹಿಸುತ್ತಿದ್ದ AI191 ಮತ್ತು AI144 ವಿಮಾನಗಳನ್ನು ರದ್ದುಗೊಳಿಸಲಾಯಿತು. ಮುಂಬೈನಲ್ಲಿ ತೊಂದರೆಗೊಳಗಾದ ಪ್ರಯಾಣಿಕರಿಗಾಗಿ ಹೋಟೆಲ್‌ಗಳು ಮತ್ತು ಪರ್ಯಾಯ ವಿಮಾನಗಳನ್ನು ಕಾಯ್ದಿರಿಸಲಾಗಿದೆ ಎಂದು ಏರ್ ಇಂಡಿಯಾ ಹೇಳಿದೆ. ಹಾಗೆಯೇ ನ್ಯೂಯಾರ್ಕ್ನಲ್ಲಿರುವ ಪ್ರಯಾಣಿಕರಿಗೂ ಸಹ ಸೂಚಿಸಲಾಗಿದೆ. (ಏಜೆನ್ಸೀಸ್)