ಮೆಕ್ಸಿಕೋ: ಹೇಳಲು ಪದಗಳೇ ಸಾಲದಂತಹ ಭಾವುಕ ವಿಡಿಯೋಗಳನ್ನು ಹಲವು ಬಾರಿ ನಾವು ಸಾಮಾಜಿಕ ಜಾಲತಾಣದಲ್ಲಿ ವೀಕ್ಷಣೆ ಮಾಡಿದ್ದೇವೆ. ಅಂಥದ್ದೇ ಮತ್ತೊಂದು ವಿಡಿಯೋ ಇದೀಗ ಜಾಲತಾಣದಲ್ಲಿ ವೈರಲ್ ಆಗಿದ್ದು, ಮೃತಪಟ್ಟ ಟೀಮ್ಮೇಟ್ ಕೊನೆಯ ಗೋಲ್ ಹೊಡೆಯಲು ಸ್ನೇಹಿತರು ಒಟ್ಟಿಗೆ ಫುಟ್ಬಾಲ್ ಆಡಿದ ಮನಕಲಕುವ ಘಟನೆ ನಡೆದಿದೆ.
ಮೆಕ್ಸಿಕೋದಲ್ಲಿ ಸೆರೆಹಿಡಿದ ವಿಡಿಯೋ ಇದಾಗಿದೆ. ಟ್ವಿಟರ್ ಬಳಕೆದಾರ ಅಲೆಕ್ಸ್ ಸ್ಟೋನ್ ಎಂಬಾತ ವಿಡಿಯೋ ಪೋಸ್ಟ್ ಮಾಡಿದ್ದು, 16 ವರ್ಷದ ಬಾಲಕ ಮೆಕ್ಸಿಕೋದಲ್ಲಿ ಕೊಲೆಯಾದ. ಆತನ ಟೀಮ್ಮೇಟ್ಸ್ ಪ್ರತಿದಿನ ಆತ ಫುಟ್ಬಾಲ್ ಆಡುತ್ತಿದ್ದ ಸ್ಥಳಕ್ಕೆ ಮೃತದೇಹವನ್ನು ಕೊಂಡೊಯ್ದು, ಕೊನೆಯ ಗೋಲು ಹೊಡೆಯ ಸಹಾಯ ಮಾಡಿದರು. ಈ ರೀತಿಯನ್ನು ಎಂದೂ ನೋಡಿಲ್ಲ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಸಾಕುನಾಯಿಯನ್ನು ಕರೆದೊಯ್ಯಲು ಬಾಡಿಗೆ ವಿಮಾನದಲ್ಲಿ ಬೆಂಗಳೂರಿಗೆ ಬಂದು ಮರಳಿದರು!
ವಿಡಿಯೋದಲ್ಲಿ ಏನಿದೆ?: 54 ಸೆಕೆಂಡಿನ ವಿಡಿಯೋದಲ್ಲಿ ಫುಟ್ಬಾಲ್ ಕೋರ್ಟ್ನಲ್ಲಿ ಸ್ನೇಹಿತನ ಮೃತದೇಹ ಇರುವ ಕೆಫಿನ್ ಇಟ್ಟಿರುತ್ತಾರೆ. ಓರ್ವ ಬಾಲ್ ಅನ್ನು ಮತ್ತೋರ್ವನಿಗೆ ಪಾಸ್ ಮಾಡಿದಾಗ ಆತನ ಚೆಂಡನ್ನು ಕೆಫಿನ್ ಕಡೆಗೆ ಒದೆಯುತ್ತಾನೆ. ಕೆಫಿನ್ಗೆ ತಾಗಿದ ಬಾಲ್ ಸೀದ ಗೋಲಿನೊಳಗೆ ಹೋಗುತ್ತದೆ. ಬಳಿಕ ಎಲ್ಲರೂ ಸಂತೋಷದಿಂದ ಬಂದ ಕೆಫಿನ್ ಅನ್ನು ತಬ್ಬಿಕೊಂಡು ಅಗಲಿದ ಟೀಮ್ಮೇಟ್ಗೆ ಕಂಬನಿ ಮಿಡಿಯುತ್ತಾರೆ. ಈ ವೇಳೆ ಅಲ್ಲಿ ನೆರೆದಿದ್ದ ಗುಂಪು ಚಿಯರ್ ಮಾಡಿರುವುದನ್ನು ಹಿನ್ನೆಲೆ ಧ್ವನಿಯಲ್ಲಿ ಕೇಳಬಹುದಾಗಿದೆ.
16 ವರ್ಷದ ಮೆಕ್ಸಿಕನ್ ಹುಡುಗನ ಹೆಸರು ಅಲೆಕ್ಸಾಂಡರ್ ಮಾರ್ಟಿನೆಜ್, ಆತನನ್ನು ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಮೃತದೇಹವನ್ನು ಫುಟ್ಬಾಲ್ ಸ್ಟೇಡಿಯಂಗೆ ತೆಗೆದುಕೊಂಡು ಹೋಗಿ ಅಂತಿಮ ನಮನ ಸಲ್ಲಿಸಿದ ಬಳಿಕ ಗುರುವಾರ ಅಂತ್ಯಕ್ರಿಯೆ ನೆರವೇರಿಸಲಾಯಿತು. (ಏಜೆನ್ಸೀಸ್) ಇದನ್ನೂ ಓದಿ: VIDEO| ಶೂ ಧರಿಸಿಕೊಂಡು ಶಿವನ ವಿಗ್ರಹ ಪೀಠದ ಮೇಲೆ ಟಿಕ್ಟಾಕ್ ಮಾಡಿದ ನಾಲ್ವರ ಬಂಧನ