INDvsAFG 
ನ್ಯೂಸ್

INDvsAFG: ಅಫ್ಘಾನಿಸ್ತಾನ ಸರಣಿಗೆ ಟೀಂ ಇಂಡಿಯಾ ಪ್ರಕಟ: ರಿಷಭ್‌ ಪಂತ್‌ಗೆ ಶಾಕ್‌, ಹೊಸ ಮುಖಗಳಿಗೆ ಅವಕಾಶ

ನವದೆಹಲಿ: ಅಫ್ಘಾನಿಸ್ತಾನ ವಿರುದ್ಧ (INDvsAFG) ನಡೆಯಲಿರುವ ಏಕೈಕ ಟೆಸ್ಟ್‌ ಹಾಗೂ ಮೂರು ಪಂದ್ಯಗಳ ಏಕದಿನ ಸರಣಿಗೆ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ (BCCI) ತಂಡವನ್ನು ಪ್ರಕಟಿಸಿದೆ. ODI ತಂಡದಿಂದ ವಿಕೆಟ್‌ಕೀಪರ್‌ ಬ್ಯಾಟರ್‌ ರಿಷಭ್‌ ಪಂತ್‌ ( Rishabh Pant )ಅವರನ್ನು ಕೈಬಿಟ್ಟಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಮತ್ತೊಂದೆಡೆ ಯುವ ಆಟಗಾರರಾದ ಪ್ರಿನ್ಸ್​​ ಯಾದವ್​​( Prince Yadav ) ಮತ್ತು Gurnoor Brar ಮೊದಲ ಬಾರಿಗೆ ಟೀಂ ಇಂಡಿಯಾದ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಟೀಂ ಇಂಡಿಯಾವನ್ನುನ ಶುಭ್ಮಾನ್​​ ಗಿಲ್​​( Shubman Gill) ಮುನ್ನಡೆಸಲಿದ್ದು, ಹಿರಿಯ ಆಟಗಾರರಾದ ರೋಹಿತ್​​ ಶರ್ಮಾ ಮತ್ತು ವಿರಾಟ್​​ ಕೊಹ್ಲಿ ಅವರಿಗೆ ಮತ್ತೆ ಅವಕಾಶ ನೀಡಲಾಗಿದೆ. Shreyas Iyer ಉಪನಾಯಕನಾಗಿ ಆಯ್ಕೆಯಾಗಿದ್ದಾರೆ. KL Rahul ಹಾಗೂ Ishan Kishan ವಿಕೆಟ್‌ಕೀಪರ್‌ಗಳಾಗಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಇತ್ತೀಚಿನ ಐಪಿಎಲ್‌ ಸೀಸನ್‌ನಲ್ಲಿ ರಿಷಭ್‌ ಪಂತ್‌ ನಿರೀಕ್ಷಿತ ಪ್ರದರ್ಶನ ನೀಡದಿರುವುದು ಅವರ ಕೈಬಿಡುವಿಕೆಗೆ ಪ್ರಮುಖ ಕಾರಣ ಎಂದು ವರದಿಗಳು ಹೇಳಿವೆ. ಕಳೆದ ಕೆಲ ತಿಂಗಳಿನಿಂದ ODI ಕ್ರಿಕೆಟ್‌ನಲ್ಲಿ ಅವರ ಫಾರ್ಮ್‌ ಕೂಡ ಚರ್ಚೆಗೆ ಕಾರಣವಾಗಿತ್ತು. ಇದೇ ವೇಳೆ Ishan Kishan ಉತ್ತಮ ಪ್ರದರ್ಶನದ ಮೂಲಕ ಆಯ್ಕೆದಾರರ ಗಮನ ಸೆಳೆದಿದ್ದಾರೆ.
ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿರುವುದು ಈ ಸರಣಿಯ ವಿಶೇಷವಾಗಿದೆ. ಯುವ ವೇಗಿ Prince Yadav ಮತ್ತು ಆಲ್‌ರೌಂಡರ್‌ Gurnoor Brar ಮೊದಲ ಬಾರಿಗೆ ODI ತಂಡದಲ್ಲಿ ಸ್ಥಾನ ಪಡೆದಿದ್ದಾರೆ. Harsh Dubey ಕೂಡ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿದ್ದು, ಯುವ ಆಟಗಾರರಿಗೆ ಅವಕಾಶ ನೀಡುವ ಮೂಲಕ ಭವಿಷ್ಯದ ತಂಡ ಕಟ್ಟಲು ಆಯ್ಕೆ ಸಮಿತಿ ಮುಂದಾಗಿದೆ ಎನ್ನಲಾಗುತ್ತಿದೆ.
ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಏಕದಿನ ಸರಣಿ ಜೂನ್‌ 14ರಿಂದ ಆರಂಭವಾಗಲಿದೆ. ಧರ್ಮಶಾಲಾ, ಲಖನೌ ಮತ್ತು ಚೆನ್ನೈನಲ್ಲಿ ಪಂದ್ಯಗಳು ನಡೆಯಲಿವೆ. ಟೆಸ್ಟ್‌ ಪಂದ್ಯ ಜೂನ್‌ 6ರಿಂದ ಮುಲ್ಲನ್‌ಪುರದಲ್ಲಿ ನಡೆಯಲಿದೆ,(ಏಜೆನ್ಸೀಸ್​).