ನ್ಯೂಸ್

ಶಿಕ್ಷಕನೊಂದಿಗೆ ಲವ್​ನಲ್ಲಿ ಬಿದ್ದ ಯುವತಿ; ಮೃತಪಟ್ಟಿದ್ದ ಹೆಂಡತಿಯ ಇನ್​ಸ್ಟಾಗ್ರಾಂನಿಂದ ಸಿಗ್ತು ಲವ್​ ಸ್ಟೋರಿಗೆ ಟ್ವಿಸ್ಟ್​!

ವಾಷಿಂಗ್ಟನ್: ನೂರು ಸುಳ್ಳು ಹೇಳಿ ಒಂದು ಮದುವೆ ಮಾಡು ಎನ್ನುತ್ತಾರೆ. ಆದರೆ ಅನೇಕ ಲವ್ ಸ್ಟೋರಿಗಳಲ್ಲೇ ಸಾವಿರಾರು ಸುಳ್ಳುಗಳಿರುತ್ತವೆ. ಅದೇ ರೀತಿ ಆನ್​ಲೈನ್​ ಮೂಲಕ ಪ್ರೀತಿಯ ಬಲೆಗೆ ಬಿದ್ದವಳು ಒದ್ದಾಡಿದ ಕಥೆಯಿದು.

ಸಿಸ್ಸಿ ಹ್ಯಾಂಕ್‌ಶಾ ಹೆಸರಿನ ಯುವತಿ ಟಿಂಡರ್​ ಆ್ಯಪ್​ ಸೇರಿದ್ದಳು. ಅದರಲ್ಲಿ 25 ವರ್ಷದ ಶಿಕ್ಷಕನೊಬ್ಬನ ಪರಿಚಯ ಅವಳಿಗಾಗಿದೆ. ಆತನೊಂದಿಗೆ ಸ್ನೇಹ ಬೆಳೆಸಿದ ಅವಳು, ಆತನ ಜೀವನದ ಬಗ್ಗೆ ಕೇಳಿದ್ದಾಳೆ. ಆಗ ಆತ ತನಗೆ ಅದಾಗಲೇ ಮದುವೆಯಾಗಿದ್ದು, ಮಗನಿದ್ದಾನೆ. ಆದರೆ ಹೆಂಡತಿ ಸತ್ತು ಹೋಗಿದ್ದಾಳೆ ಎಂದು ತಿಳಿಸಿದ್ದಾನೆ. ಆತನ ಬಗ್ಗೆ ಬೇಸರವಾದ ಹುಡುಗಿ ಕನಿಕರ ಬೆಳೆಸಿಕೊಂಡಿದ್ದಾಳೆ. ನಿಧಾನವಾಗಿ ಆತನತ್ತ ಪ್ರೀತಿ ಹುಟ್ಟಿದೆ.

ಈ ಮಧ್ಯೆ ಶಿಕ್ಷಕನ ಹೆಂಡತಿಯ ಬಗ್ಗೆ ಇನ್ನಷ್ಟು ತಿಳಿದುಕೊಳ್ಳುವ ನಿಟ್ಟಿನಲ್ಲಿ ಆಕೆ ಇನ್​ಸ್ಟಾಗ್ರಾಂನಲ್ಲಿ ಆತನ ಹೆಂಡತಿಯ ಖಾತೆಗಾಗಿ ಹುಡುಕಾಡಿದ್ದಾಳೆ. ಆಗ ಆಕೆಗೆ ಶಾಕ್​ ಆಗಿದೆ. ಶಿಕ್ಷಕ ಹೇಳಿದ ರೀತಿಯಲ್ಲಿ ಆತನ ಹೆಂಡತಿ ಸತ್ತಿರಲಿಲ್ಲ, ಆಕೆ ಇತ್ತೀಚೆಗೆ ಫೋಟೋ ಪೋಸ್ಟ್​ ಮಾಡಿರುವುದೂ ಅಲ್ಲಿ ಕಂಡಿದೆ. ತಕ್ಷಣ ಸಿಟ್ಟಿಗೆದ್ದ ಯುವತಿ ಶಿಕ್ಷಕನಿಗೆ ಈ ಬಗ್ಗೆ ಪ್ರಶ್ನಿಸಿದಾಗ ಆತ ತಾನು ಸುಳ್ಳು ಹೇಳಿದ್ದಾಗಿ ಒಪ್ಪಿಕೊಂಡನಂತೆ. ಈ ವಿಚಾರವನ್ನು ಸಿಸ್ಸಿ ತನ್ನ ಟಿಕ್​ಟಾಕ್​ ಖಾತೆಯಲ್ಲಿ ವಿಡಿಯೋ ಮೂಲಕ ಹಂಚಿಕೊಂಡಿದ್ದಾಳೆ. (ಏಜೆನ್ಸೀಸ್)