School : ಶಿಕ್ಷಕಿಯೊಬ್ಬಳು ವಿದ್ಯಾರ್ಥಿಯ ಗುಪ್ತಾಂಗಕ್ಕೆ ಗಾಜಿನ ಕ್ಲೀನರ್ ಸಿಂಪಡಿಸಿದ ಆಘಾತಕಾರಿ ಘಟನೆ ಮುಂಬೈನ ನಲ್ಲಸೋಪರಾದ ಹೊವಾಡ್ರ್ ಇಂಗ್ಲಿಷ್ ಶಾಲೆಯಲ್ಲಿ ನಡೆದಿದೆ.
ಆರೋಪಿ ಶಿಕ್ಷಕಿಯನ್ನು ನಿಜಾವುದ್ದೀನ್ ಎಂದು ಗುರುತಿಸಲಾಗಿದೆ. ಈಕೆ 8 ವರ್ಷದ ಬಾಲಕನ ಖಾಸಗಿ ಭಾಗಕ್ಕೆ ಗಾಜಿನ ಕ್ಲೀನರ್ನ್ನು ಸಿಂಪಡಿಸಿರುವ ಘಟನೆ ಬೆಳಕಿಗೆ ಬಂದಿದೆ. ದುರ್ವಾಸನೆ ಬರುತ್ತಿದೆ ಎಂಬ ಕಾರಣಕ್ಕೆ ಈ ಕೃತ್ಯ ಎಸಗಿದ್ದಾಳೆ ಎಂದು ಸಂತ್ರಸ್ತ ವಿದ್ಯಾರ್ಥಿಯ ಪಾಲಕರು ಶಿಕ್ಷಿಕಯ ವಿರುದ್ಧ ದೂರು ದಾಖಲಿಸಿದ್ದಾರೆ. ಈ ಘಟನೆಯು ಪಾಲಕರು ಮತ್ತು ಸ್ಥಳಿಯರ ಆಕ್ರೋಶಕ್ಕೆ ಕಾರಣವಾಗಿದೆ.
ಹೊವಾರ್ಡ್ ಇಂಗ್ಲಿಷ್ ಶಾಲೆಯು ರಾಜ್ಯ ಶಿಕ್ಷಣ ಇಲಾಖೆಯ ಅಧೀನದಲ್ಲಿದ್ದು, ಔರಂಗಾಬಾದ್ ಮೂಲದ ಬೇರೆ ಶಾಲೆಯಿಂದ ಲೀವಿಂಗ್ ಸರ್ಟಿಫಿಕೇಟ್ ನೀಡುತ್ತಿರುವುದು ಬೆಳಕಿಗೆ ಬಂದಿದೆ. ಆ ವಿದ್ಯಾರ್ಥಿ 3 ವರ್ಷಗಳ ಕಾಲ ಅದೇ ಶಾಲೆಯುಲ್ಲಿ ವ್ಯಾಸಂಗ ಮಾಡಿದ್ದರಿಂದ ಈ ವಿಚಾರದ ಬಗ್ಗೆ ಗಂಭೀರ ಕಳವಳ ವ್ಯಕ್ತವಾಗಿದೆ. ವರದಿಯ ನಂತರ ಪಾಲ್ಘರ್ ಜಿಲ್ಲಾ ಪರಿಷತ್ ಘಟನೆ ಬಗ್ಗೆ ತಾಲೂಕು ಮಟ್ಟದ ತನಿಖೆಗೆ ಆದೇಶ ನೀಡಿದ್ದು, ಗಮನಾರ್ಹ ಬೆಳವಣಿಗೆಗಳ ನಂತರ, ಅಧಿಕಾರಿಗಳು ಶಾಲೆಗೆ ನೋಟಿಸ್ ನೀಡಿ ಶಾಲೆ ಮುಚ್ಚುವಂತೆ ಆದೇಶ ನೀಡಿದ್ದಾರೆ. ಇನ್ನು ನೋಟಿಸ್ ಹೊರತಾಗಿಯೂ ಶಾಲೆ ಮುಂದುವರೆಸಿದರೆ ಶಾಲೆಯ ವಿರುದ್ಧ ಎಫ್ಐಆರ್ ದಾಖಲಿಸುವುದಾಗಿ ತಿಳಿಸಿದ್ದಾರೆ.
ಈ ವಿಷಯದ ಬಗ್ಗೆ ಇಲಾಖೆಯು ಗಮನಹರಿಸಿರುವುದು ನನಗೆ ಖುಷಿಯಾಗಿದೆ. ನನ್ನ ಮಗನಿಗೆ ನ್ಯಾಯ ಸಿಗಲಿ ಮತ್ತೆ ಬೇರೆ ಯಾವುದೇ ಮಕ್ಕಳಿಗೆ ಈ ರೀತಿ ತೊಂದರೆ ಆಗಬಾರದೆಂದು ನಾನು ಬಯಸುತ್ತೇನೆ. ತನಿಖೆ ಮುಗಿಯಲಿ, ಅದರ ವರದಿಯನ್ನು ಅವಲಂಬಿಸಿ ನಾನು ಮುಂದುವರೆಯುತ್ತೇನೆ ಎಂದು ವಿದ್ಯಾರ್ಥಿಯ ತಾಯಿ ಸುದ್ದಿ ಮೂಲಗಳಿಗೆ ತಿಳಿಸಿದ್ದಾರೆ.
@unexplored_vasai ಎಂಬ ಇನ್‌ಸ್ಟಾಗ್ರಾಮ್ ಖಾತೆದಾರ ಇಡೀ ಘಟನೆಯನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದರಿಂದ ಈ ವಿಚಾರದ ಬಗ್ಗೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ. ಈ ವೇಳೆ ಶಿಕ್ಷಕರ ಕೃತ್ಯವನ್ನು ನೆಟ್ಟಿಗರು ಖಂಡಿಸಿ, ವಿದ್ಯಾರ್ಥಿಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. "ಶಿಕ್ಷಕರು ಈ ರೀತಿಯಾಗಿ ಯೋಚಿಸಿದರೆ ಹಾಗೂ ವರ್ತಿಸಿದರೆ, ಅವರು ಆ ಹುದ್ದೆಯಲ್ಲಿ ಸೇವೆ ಸಲ್ಲಿಸಲು ಅರ್ಹರಲ್ಲ" ಎಂದು ಒಬ್ಬ ಬಳಕೆದಾರ ತನ್ನ ಖಾತೆಯಲ್ಲಿ ಬರೆದುಕೊಂಡಿದ್ದಾನೆ. (ಏಜೆನ್ಸೀಸ್)