ನ್ಯೂಸ್

ವಿದ್ಯಾರ್ಥಿಗೆ 23 ಬಾರಿ ಕಾಪಾಳಮೋಕ್ಷ ಮಾಡಿದ ಶಿಕ್ಷಕಿ; ಪ್ರಕರಣ ದಾಖಲು!

ಮೋಹನ್​ ಶೆಟ್ಟಿ

ಬೆಂಗಳೂರು: 4ನೇ ತರಗತಿ ವಿದ್ಯಾರ್ಥಿಗೆ 23 ಬಾರಿ ಕಪಾಳಮೋಕ್ಷ(Slapping) ಮಾಡಿದ ಪ್ರಾಥಮಿಕ ಶಾಲಾ ಶಿಕ್ಷಕಿ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

ಬಾಲಕನ ಪೋಷಕರು ನೀಡಿರುವ ಮಾಹಿತಿ ಅನುಸಾರ, ಶಾಲೆಯ ಶಿಕ್ಷಕಿ ನಮ್ಮನ್ನು ಭೇಟಿ ಮಾಡಬೇಕೆಂದು ತಮ್ಮ ಮಗನ ಬಳಿ ಹೇಳಿ ಕಳುಹಿಸಿದ್ದರು, ಇದಕ್ಕೆ ನಾವು ಬರಹದ ಮೂಲಕ ಹೇಳಲು ಹೇಳಿದ್ದೆವು. ಆದ್ರೆ, ಇದಕ್ಕೆ ಕೋಪಗೊಂಡು ಶಿಕ್ಷಕಿ ಮಗುವಿಗೆ ಮನಬಂದಂತೆ ಕಪಾಳಮೋಕ್ಷ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಘಟನೆಯ ವಿವರ: ವಿದ್ಯಾರ್ಥಿಗೆ ನೀನು ಸರಿಯಾಗಿ ಹೊಂ ವರ್ಕ್ ಮಾಡುವುದಿಲ್ಲ ಎಂದು ನಿಮ್ಮ ತಂದೆ-ತಾಯಿಗೆ ಹೇಳಬೇಕು. ಅವರನ್ನು ಕರೆದುಕೊಂಡು ಬಾ ಎಂದು ಹೇಳಿದ್ದಾರೆ. ಇದನ್ನು ಬಾಲಕ ತನ್ನ ಪೋಷಕರಿಗೆ ತಿಳಿಸಿದಾಗ, ನಿಮ್ಮ ಶಿಕ್ಷಕಿಗೆ ಬರಹದ ಮೂಲಕ ನಮಗೆ ಬರುವುದಕ್ಕೆ ಹೇಳು ಎಂದು ಹೇಳಿ ಕಳುಹಿಸಿದ್ದಾರೆ. ಮರು ದಿನ ತಂದೆ-ತಾಯಿ ಹೇಳಿದಂತೆ ಶಿಕ್ಷಕಿಗೆ ವಿದ್ಯಾರ್ಥಿ ತಿಳಿಸಿದ್ದಾನೆ. ಇದಕ್ಕೆ ಕೆಂಡಾಮಂಡಲವಾದ ಶಿಕ್ಷಕಿ ಬಾಲಕನ ಕಪಾಳಕ್ಕೆ 23 ಬಾರಿ ಹೊಡೆದಿದ್ದಾರೆ.

ಸದ್ಯ ಪೋಷಕರ ದೂರಿನ ಅನ್ವಯ ಪೊಲೀಸರು ಈ ಪ್ರಕರಣವನ್ನು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ,(ಏಜೆನ್ಸೀಸ್).