ಯುಎಸ್ಎ: ಆಘಾತಕಾರಿ ಘಟನೆಯೊಂದರಲ್ಲಿ ಶಿಕ್ಷಕಿಯೊಬ್ಬಳು (Teacher) ಅಪ್ರಾಪ್ತ ವಯಸ್ಕ ವಿದ್ಯಾರ್ಥಿಯೊಂದಿಗೆ ಸಂಪರ್ಕ ಬೆಳೆಸಿ ಮಗುವಿಗೆ ಜನ್ಮ ನೀಡಿರುವ ಘಟನೆ ಅಮೆರಿಕದ ನ್ಯೂಜೆರ್ಸಿಯಲ್ಲಿ ನಡೆದಿದೆ. ಘಟನೆ ಸಂಬಂಧ ಶಿಕ್ಷಕಿಯನ್ನು ಪೊಲೀಸರು ಬಂಧಿಸಿದ್ದು, ಆಕೆಯನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಘಟನೆ ಕುರಿತಾಗಿ ಪ್ರಕಟಣೆ ಹೊರಡಿಸಿರುವ ನ್ಯೂಜೆರ್ಸಿ ಪೊಲೀಸರು. ಆರೋಪಿ ಲಾರಾ ಕ್ಯಾರನ್ ನ್ಯೂಜೆರ್ಸಿಯಲ್ಲಿರುವ ಎಲಿಮೆಂಟರಿ ಸ್ಕೂಲ್ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. 2016ರಲ್ಲಿ ಸಂತ್ರಸ್ತ ಬಾಲಕನ ಕುಟುಂಬಸ್ಥರು ಪರಿಚಯವಾಗಿದಗ್ದು, ಇಬ್ಬರ ಕುಟುಂಬಸ್ಥರ ನಡುವೆ ಆತ್ಮೀಯತೆ ಬೆಳೆದಿದ್ದು, ಆಗಿಂದಾಗೆ ಸಂತ್ರಸ್ತ ಮತ್ತು ಆತನ ಸಹೋದರಿ ಶಿಕ್ಷಕಿಯ (Teacher) ಮನೆಯಲ್ಲಿ ವಾಸ್ತವ್ಯ ಹೂಡುತ್ತಿದ್ದರು.
ತಮ್ಮ ಮನೆಯಲ್ಲಿ ವಿದ್ಯಾರ್ಥಿ ವಾಸ್ತವ್ಯ ಹೂಢುತ್ತಿದ್ದ ವಿಚಾರವನ್ನೇ ದುರುಪಯೋಗ ಪಡಿಸಿಕೊಂಡ ಶಿಕ್ಷಕಿ ಆತನ ಜೊತೆಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದ್ದು, 2019ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಶಿಕ್ಷಕಿ ಮಗುವಿಗೆ ಜನ್ಮ ನೀಡಿದಾಗ ಬಾಲಕ 13 ವರ್ಷದವನಾಗಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಕಳೆದ ವರ್ಷ ಡಿಸೆಂಬರ್ನಲ್ಲಿ ಶಿಕ್ಷಕಿ ಫೇಸ್ಬುಕ್ನಲ್ಲಿ ಮಗುವಿನ ಫೋಟೋವನ್ನು ಪೋಸ್ಟ್ ಮಾಡಿದ್ದು, ತಮ್ಮ ಮಗನಲ್ಲಿ ಮಗುವಿನ ಹೋಲಿಕೆಯನ್ನು ಗಮನಿಸಿದ ಸಂತ್ರಸ್ತನ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದಾಗ ವಿಚಾರ ಬೆಳಕಿಗೆ ಬಂದಿದೆ.
ಶಿಕ್ಷಕಿಯನ್ನು (Teacher) ವಶಕ್ಕೆ ಪಡೆದಿರುವ ಪೊಲೀಸರು ಸಂತ್ರಸ್ತ ಹಾಗೂ ಆತನ ಕುಟುಂಬಸ್ಥರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದು, ಆರೋಪಿ ವಿರುದ್ಧ ಲೈಂಗಿಕ ದೌರ್ಜನ್ಯ, ಬಾಲಕನ ಯೋಗಕ್ಷೇಮಕ್ಕೆ ಅಪಾಯವನ್ನುಂಟು ಮಾಡಿದ ಆರೋಪಗಳ ಮೇಲೆ ಪ್ರಕರಣ ದಾಖಲಿಸಿಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ.