ನ್ಯೂಸ್

ತಕ್ಕ ಪಾಠ ಕಲಿಸಿ; ಪತ್ನಿಯ ಕಿರುಕುಳಕ್ಕೆ ಬೇಸತ್ತು Video ಮಾಡಿಟ್ಟು ಪ್ರಾಣಬಿಟ್ಟ ವ್ಯಕ್ತಿ

ಗಾಂಧಿನಗರ: ದೇಶವ್ಯಾಪಿ ತೀವ್ರ ಸಂಚಲನ ಸೃಷ್ಟಿಸಿದ್ದ ಟೆಕ್ಕಿ ಅತುಲ್ ಸುಭಾಷ್​, ದೆಹಲಿ ಮೂಲದ ಕೆಫೆ ಮಾಲೀಕ ಪುನೀತ್​ ಆತ್ಮಹತ್ಯೆ ಪ್ರಕರಣಗಳು ಮಾಸುವ ಮುನ್ನವೇ ಇದೀಗ ಗುಜರಾತ್​ನ್ ಬೊಟಾಡ್​ ಜಿಲ್ಲೆಯಲ್ಲಿ ವ್ಯಕ್ತಿಯೋರ್ವ ಪತ್ನಿಯ ಕಿರುಕುಳಕ್ಕೆ ಬೇಸತ್ತು ವಿಡಿಯೋ (Video) ಮಾಡಿಟ್ಟು ಪ್ರಾಣಕಳೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.

ಪತ್ನಿ ತನಗೆ ನೀಡುತ್ತಿರುವ ಕಿರುಕುಳದ ಬಗ್ಗೆ ವ್ಯಕ್ತಿ ವಿಡಿಯೋ (Video) ಮಾಡಿರುವ ವ್ಯಕ್ತಿಯು ಆಕೆಗೆ ತಕ್ಕ ಪಾಠ ಕಲಿಸುವಂತೆ ಮನವಿ ಮಾಡಿದ್ದಾನೆ. ವ್ಯಕ್ತಿಯ ವಿಡಿಯೋ ಆಧರಿಸಿ ಪೊಲೀಸರು ಆತನ ಪತ್ನಿಯ ವಿರುದ್ಧ ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಘಟನೆ ಕುರಿತು ಮಾತನಾಡಿರುವ ಬೊಟಾಡ್​ ಗ್ರಾಮಾಂತರ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು, ಕೌಟುಂಬಿಕ ಕಲಹದಿಂದಾಗಿ ಮೃತ ವ್ಯಕ್ತಿಯ ಪತ್ನಿ ಆಕೆಯ ತವರು ಮನೆಗೆ ಹೋಗಿದ್ದರು. ಆತ ಪತ್ನಿಯ ತವರು ಮನೆಗೆ ತೆರಳಿ ತನ್ನೊಟ್ಟಿಗೆ ಬರುವಂತೆ ಮನವಿ ಮಾಡಿದ್ದಾನೆ. ಆಕೆ ಒಪ್ಪದಿದ್ದಾಗ ಮನೆಗೆ ವಾಪಸ್​ ಬಂದು ವಿಡಿಯೋ (Video) ರೆಕಾರ್ಡ್​ ಮಾಡಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮೃತರ ತಂದೆ ನೀಡಿದ ದೂರನ್ನು ಆಧರಿಸಿ ಆತನ ಪತ್ನಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 108 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸಂಬಂಧ ತನಿಖೆ ಮುಂದುವರಿದಿದೆ ಎಂದು ಬೊಟಾಡ್​ ಗ್ರಾಮಾಂತರ ಠಾಣೆಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.