ಸಾಂದರ್ಭಿಕ ಚಿತ್ರ 
ನ್ಯೂಸ್

ರಸ್ತೆ ಬದಿ ಟೀ ಮಾರುವವನಿಂದ 15 ಲಕ್ಷ ರೂ. ಸುಲಿಗೆ! ಹಣ ಬಂದಿದ್ದು ಎಲ್ಲಿಂದ?

ಬೆಂಗಳೂರು: ವೃತ್ತಿ ಆಧಾರಿತವಾಗಿ ಒಬ್ಬರಲ್ಲಿ ಹಣ ಎಷ್ಟಿದೆ ಎಂದು ಊಹಿಸಲಾಗದು ಎನ್ನುವುದಕ್ಕೆ ಇದೇ ಉತ್ತಮ ಉದಾಹರಣೆ. ರಸ್ತೆ ಬದಿಯಲ್ಲಿ ಟೀ ಮಾರುವ ಚಾಯ್‍ವಾಲಾನನ್ನು ಕಿಡ್ನ್ಯಾಪ್‍ ಮಾಡಿ ಬರೋಬ್ಬರಿ 15 ಲಕ್ಷ ರೂ.ಗಳನ್ನು ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ರಸ್ತೆ ಬದಿ ಟೀ ಮಾರುತ್ತಿದ್ದವನನ್ನು ಕಿಡ್ನಾಪ್ ಮಾಡಿ 15 ಲಕ್ಷ ಸುಲಿಗೆ ಮಾಡಿದ ಪ್ರಕರಣದ ಆರೋಪಿಗಳನ್ನು ಇದೀಗ ಸೆರೆ ಹಿಡಿಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ತಿಕ್ ,ರಾಹುಲ್ ಎಂಬುವವರನ್ನು ಸೇರಿ 8 ಜನರನ್ನು ಬಂಧನಕ್ಕೆ ಒಳಪಡಿಸಲಾಗಿದೆ.

ಸ್ನೇಹಿತರೇ ಶತ್ರುಗಳು!

ತಿಲಕ್ ಮಣಿಕಂಠ ಎಂಬುವವರು ತಿಲಕ್ ಆಗಸ್ಟ್ 1 ರಂದು ಗೋವಾಗೆ ತೆರಳಿ ಕ್ಯಾಸಿನೊದಲ್ಲಿ 25 ಲಕ್ಷ ಗೆದ್ದಿದ್ದರು.ತಿಲಕ್‍ ಬಳಿ ಹಣ ಇರುವ ವಿಚಾರ ಸ್ನೇಹಿತರು ಹೇಗೋ ತಿಳಿದುಕೊಂಡಿದ್ದರು. ಆ ಹಣಕ್ಕೆ ಆಸೆ ಪಟ್ಟ ಸ್ನೇಹಿತರು, ದರೋಡೆಗೆ ಇಳಿದಿದ್ದು ದುರಂತ. ಆಗಸ್ಟ್ 5ರಂದು ತಿಲಕ್‍ ಸ್ನೇಹಿತರು, ಕಿಡ್ನಾಪ್ ಮಾಡಿದ್ದು 15 ಲಕ್ಷ ಸುಲಿಗೆ ಮಾಡಿದ್ದರು. ನಂತರ 6ರಂದು ತಿಲಕ್‍ರನ್ನು ಬಿಟ್ಟು ಕಳಿಸಿದ್ದರು.

ಎಷ್ಟೇ ತಪ್ಪಿಸಿಕೊಂಡ್ರೂ ಪೊಲೀಸರು ಬಿಡಬೇಕಲ್ವಾ?

ಸ್ವತಂತ್ರರಾದ ತಿಲಕ್ ಮೊದಲು ಮಾಡಿದ್ದು ಹನುಮಂತನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಹಣದ ಜತೆಗೆ ಆರೋಪಿಗಳು ಎಸ್ಕೇಪ್ ಆಗಿದ್ದರು. ಇವರು ಪೊಲೀಸರಿಂದ ತಪ್ಪಿಸಿಕೊಳ್ಳಲು ಗೋವಾ, ಬಾಂಬೆ ಸೇರಿದಂತೆ ಎಲ್ಲಾ ಕಡೆ ತೆರಳಿ ತಲೆಮರೆಸಿಕೊಂಡಿದ್ದರು. ಆದರೆ ಪೊಲೀಸರು ಬಿಡಬೇಕಲ್ಲವೇ? ಕೊನೆಗೆ ಶಿರಡಿಯಲ್ಲಿ ಪೊಲೀಸರ ಕೈಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸದ್ಯ ಪೊಲೀಸರು ಆರೋಪಿಗಳಿಂದ 10 ಲಕ್ಷ ರೂ. ಹಣ ವಶಕ್ಕೆ ಪಡೆದಿದ್ದಾರೆ.