ಹೊಸಪೇಟೆ: ಶಿವಮೊಗ್ಗ ಜಿಲ್ಲೆಯ ತುಂಗಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಭಾನುವಾರ ಹೆಚ್ಚುವರಿ ನೀರು ನದಿಗೆ ಹರಿಬಿಟ್ಟಿದ್ದು, ತ್ರಿವಳಿ ರಾಜ್ಯಗಳ ಜೀವನಾಡಿ ಟಿಬಿಡ್ಯಾಂಗೆ ಕೆಲ ದಿನದಲ್ಲಿ ಒಳಹರಿವು ಹೆಚ್ಚಾಗುವ ಸಾಧ್ಯತೆಯಿದೆ.
ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದ ಪರಿಣಾಮ ತುಂಗಾ ನದಿ ಒಳಹರಿವು ಹೆಚ್ಚಾಗಿದ್ದು ತುಂಗಾ ಜಲಾಶಯ ಗರಿಷ್ಠ ಮಟ್ಟ ತಲುಪಿ, ಅಂದಾಜು 10 ಸಾವಿರ ಕ್ಯೂಸೆಕ್ ನೀರ ನದಿಗೆ ಹರಿಸಲಾಗಿದೆ. ಇದರಿಂದಾಗಿ ತುಂಗಭದ್ರಾ ಜಲಾಶಯಕ್ಕೆ ಕೆಲವೇ ದಿನದಲ್ಲಿ ಒಳಹರಿವಿನಲ್ಲಿ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿಯ ಉಪ ನದಿಯಾದ ವರದಾ ನದಿಯಿಂದ ಕೂಡ ನೀರು ಹರಿದು ಬರುತ್ತಿದೆ. ಸೋಮವಾರ 6595 ಕ್ಯೂಸೆಕ್ ಒಳಹರಿವಿದೆ. ತುಂಗಾ ಜಲಾಶಯದಿಂದ ಹರಿದು ಬರುತ್ತಿರುವ ನೀರು ಸೇರಿದರೆ, ಅಂದಾಜು 15 ರಿಂದ 20 ಸಾವಿರ ಕ್ಯೂಸೆಕ್ ಆಗುವ ಸಾಧ್ಯತೆಯಿದೆ. ಇನ್ನೂ ಮಳೆ ಮುಂದು ವರೆದರೆ ಇನಷ್ಟು ಒಳಹರಿವು ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಟಿಬಿಬಿ ಮೂಲಗಳು ತಿಳಿಸಿವೆ.
ತುಂಗಭದ್ರಾ ಜಲಾಶಯದ ಒಳ ಹರಿವು 6595 ಕ್ಯೂಸೆಕ್ ಇರುವ ಹಿನ್ನೆಲೆಯಲ್ಲಿ 105.788 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 11.243 ಟಿಎಂಸಿ ನೀರು ಈಗಾಗಲೇ ಸಂಗ್ರಹಗೊAಡಿದೆ. ಕಳೆದ 24 ಗಂಟೆಯಲ್ಲಿ ಜಲಾಶಯಕ್ಕೆ ಅಂದಾಜು ಒಂದು ಟಿಎಂಸಿ ನೀರು ಹರಿದು ಬಂದಿದೆ. ಇದೇ ರೀತಿ ಒಳಹರಿವು ಬಂದರೆ ಆದಷ್ಟು ಬೇಗ ಜಲಾಶಯ ಭರ್ತಿಯಾಗಲಿದೆ. ಜಲಾಶಯದ ಒಳ ಹರಿವು ಉತ್ತಮವಾಗಿರುವ ಹಿನ್ನೆಲೆಯಲ್ಲಿ ಜಲಾಶಯ ಬೇಗನೆ ತುಂಬುವ ಆಶಾಭಾವ ಕೂಡ ರೈತರಲ್ಲಿ ಮೂಡಿದೆ.
ಕಳೆದ ಬಾರಿ ಜಲಾಶಯ 19ನೇ ಗೇಟ್ ಒಡೆದು ರೈತರಲ್ಲಿ ಆತಂಕ ಮೂಡಿತು. ಅದಕ್ಕೆ ಸ್ಟಾಪ್‌ಲಾಗ್ ಗೇಟ್ ಅಳವಡಿಸಿ 70 ಟಿಎಂಸಿಯಷ್ಟು ನೀರು ಉಳಿಸಲಾಯಿತು. ನಂತರ ಕೆಲ ದಿನಗಳಲ್ಲಿ ಜಲಾಶಯ ಸಂಪೂರ್ಣ ಭರ್ತಿಯಾಗಿ ರೈತರಲ್ಲಿ ಇನಷ್ಟು ಭರವಸೆ ಮೂಡಿಸಿತು. ಈ ಭಾರಿ ಪೂರ್ವ ಮುಂದಾಗರು ಉತ್ತಮ ಆಗಿರುವುದರಿಂದ ಜಲಾಶಯಕ್ಕೆ ಒಳ ಹೆಚ್ಚಿಗಿದೆ. ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಖುಷಿ ಹೆಚ್ಚಿದೆ. ಆದರೆ, ಜಲಾಶಯದ ಗೇಟ್‌ಗಳ ಆಯಸ್ಸು ಕಡಿಮೆಯಾದ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಈ ಭಾರಿ ಕೂಡ ದುರಂತ ನಡೆಯಾರದು ಎಂದು ಶೇ.80 ರಷ್ಟು ನೀರು ಉಳಿಸಿ ಉಳಿದ ನೀರು ನದಿಗೆ ಹರಿಸುವ ಯೋಜನೆ ಟಿಬಿಬಿಯ ಚಿಂತನೆಯಾಗಿದೆ.
ಕಳೆದ ಬಾರಿಗಿಂತ ಹೆಚ್ಚಿನ ನೀರು
ಸೋಮವಾರ ದಾಖಲಾದಂತೆ ಜಲಾಶಯದ ನೀರಿನ ಮಟ್ಟಗರಿಷ್ಠ 1633 ಅಡಿ ಇದ್ದು, ಮಟ್ಟ 1590.25 ಅಡಿಯಿದೆ. 6595 ಕ್ಯೂಸೆಕ್ ಒಳಹರಿವಿದೆ. 302 ಕ್ಯೂಸೆಕ್ ಹೊರಹರಿವು ಇತ್ತು. 11.243 ಟಿಎಂಸಿ ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 1577.44 ಅಡಿ ನೀರಿತ್ತು. ಒಳ ಹಾಗೂ ಹೊರ ಹರಿವು ಇರಲಿಲ್ಲ. ಕೇವಲ 3.353 ಟಿಎಂಸಿ ಇತ್ತು. ಕಳೆದ ಬಾರಿಗಿಂತ ಈ ಬಾರಿ ನೋಡಿದರೆ, ಈ ಬಾರಿ 7.890 ಟಿಎಂಸಿ ನೀರು ಹೆಚ್ಚಿದೆ.
ಈ ಬಾರಿ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಕಳೆದ ಏಪ್ರೀಲ್ ತಿಂಗಳಿAದಲೇ ಉತ್ತಮ ಮಳೆಯಾಗಿದ್ದು, ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಆರಂಭವಾಗಿದೆ. ತುಂಗಾ ನದಿಯಿಂದ ಕೂಡ ನದಿಗೆ ನೀರು ಹರಿಸಲಾಗಿದೆ. ಬೇಗ ಭರ್ತಿ ಆಗುವ ಸಾಧ್ಯತೆಯಿದೆ. ರೈತರಿಗೂ ನಿಗದಿತ ಸಮಯಕ್ಕೆ ನೀರು ಸಿಗಲಿದೆ. - ಎಂ.ಎಸ್.ದಿವಾಕರ, ಜಿಲ್ಲಾಧಿಕಾರಿ, ವಿಜಯನಗರ