ನ್ಯೂಸ್

30 ವರ್ಷದ ನಂತರ ಡ್ಯಾಂ ಬದಲಿಸಬೇಕು: ಕನ್ನಯ್ಯ ನಾಯ್ಡು

ಮಂಜುನಾಥ

ಹೊಸಪೇಟೆ: ಹರಿಯುವ ನೀರಿನಲ್ಲಿ ಎಲಿಮೆಂಟ್ ಅಳವಡಿಕೆ ಮೊದಲ ಪ್ರಯತ್ನ ಯಶಸ್ಸಾಗಿದೆ ಎಂದು ಡ್ಯಾಂ ಗೇಟ್ ತಜ್ಞ ಕನ್ನಯ್ಯ ನಾಯ್ಡು ಹೇಳಿದರು.

ನಗರದ ಟಿಬಿಡ್ಯಾಂನ ಚಕ್ರವನದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಎರಡು ವರ್ಷಗಳ ಹಿಂದೆ ನಾನು ಜಲಾಶಯಕ್ಕೆ ಬಂದಿದ್ದೆ. ಈ ಮೊದಲೇ ಸ್ಟಾಪ್ ಲಾಗ್ ಗೇಟ್ ಅಳವಡಿಕೆ ಮಾಡೋದಕ್ಕೆ ಹೇಳಿದ್ದೆ. ಅಗ ಅಧಿಕಾರಿಗಳು ಎಲ್ಲಾ ಸರಿ ಇದೆ ಅಂತಾ ಹೇಳಿದರು. ಅಂದು ಮುಂದು ಮುನ್ನೆಚ್ಚರಿಕೆ ತಗೆದುಕೊಂಡಿದಿದ್ದರೆ ಈ ಘಟನೆಗೆ ಕಾರಣ ಆಗುತ್ತಿರಲಿಲ್ಲ. ಘಟನೆ ವಿಷಯ ತಿಳಿದ ನಂತರ ಮೂರು ರಾಜ್ಯಗಳ ನೀರಾವರಿ ಹಾಗೂ ಡ್ಯಾಂ ಅಧಿಕಾರಿಗಳ ಜತೆ ಸ್ಟಾಪ್ ಲಾಗ್ ಗೇಟ್ ಅಳವಡಿಕೆಗೆ ಚರ್ಚೆ ಮಾಡಿ ಸಿಡಬ್ಲೂಸಿ ಅಪ್ರೂವಲ್ ತಗೊಂಡೆವು. ಶುಕ್ರವಾರ ರಾತ್ರಿ ನೀರಿನಲ್ಲಿ ಎಲಿಮೆಂಟ್ ಅಳವಡಿಕೆ ಯಶಸ್ಸು ಆಗಿದೆ. ಶನಿವಾರ ಎರಡು ಎಲಿಮೆಂಟ್ ಅಳವಡಿಕೆ ಮಾಡುತ್ತೇವೆ. ಸೋಮವಾರಕ್ಕೆ ಮಿಕ್ಕಿದ್ದು ಕೆಲಸ ಮುಗಿಯುತ್ತೆ. ಜಲಾಶಯ ಒಂದು 100 ವರ್ಷ ಬಾಳಿಕೆ ಬರುತ್ತೆ. ಕ್ರಸ್ಟ್ ಗೇಟ್ ಗಳು 50 ವರ್ಷ ಗೇಟ್ ಬಾಳಿಕೆ ಬರುತ್ತೆ. ಸದ್ಯ ಟಿಬಿಡ್ಯಾಂ ಗೇಟ್ 70 ವರ್ಷ ಆಗಿದೆ. ಗೇಟ್ ಬದಲಿಸಿದರೆ, ಇನ್ನು 30 ವರ್ಷ ಭದ್ರ. ನಂತರ ಜಲಾಶಯ ಬದಲಿಸಬೇಕಿದೆ ಎಂದರು.

ಘಟನೆ‌ ನಂತರ ಬಂದ ಸಿಎಂ ಸಿದ್ದರಾಮಯ್ಯ ಬಂದಾಗ ಹೇಗಾದರೂ ಮಾಡಿ ನೀರು ನಿಲ್ಲಿಸಿ ಎಂದು ಮನವಿ ಮಾಡಿದರು. ಆಗ ಅವರಿಗೆ ಅಭಯ ನೀಡಿದೆ. ಸ್ಟಾಪ್ ಲಾಗ್ ಗೇಟ್ ಅಳವಡಿಸೋಕೆ ಬೃಹತ್ ಕ್ರೇನ್ ಗಳು ಬೇಕಿತ್ತು. ಆ ಸಲಕರಣೆ ಇರೋದು ಜಿಂದಾಲ್ ನಲ್ಲಿ ಮಾತ್ರ. ಆದರೂ ನಮಗೆ ಎರಡು ದಿನ ವ್ಯರ್ಥ ಆಯ್ತು. ಮೇಲೆ ಸ್ಕೈ ವಾಕ್ ಹಾಗೂ ಕೌಂಟರ್ ಭೀಮ್ ತೆಗೆಯೋಕೆ ಕೇಂದ್ರದ ಅನುಮತಿ ಸಿಗಲಿಲ್ಲ. ಆಗ ಮುಖ್ಯಮಂತ್ರಿಯಿಂದ ಅನುಮತಿ ಪಡೆದು ಕೆಲಸ ಮತ್ತೆ ಆರಂಭ ಮಾಡಿ ಯಶಸ್ಸು ಕಂಡಿದ್ದೆವೆ. ಸೋಮವಾರದೊಳಗೆ ಎಲ್ಲಾ ಕೆಲಸ ಮುಗಿಸ್ತೇವೆ. ರೈತರಿಗೆ ಎರಡು ಬೆಳೆ ನೀರು ಹಾಗೂ ಕುಡಿಯೋದಕ್ಕೆ ನೀರು ಲಭ್ಯವಾಗಿದೆ. 105 ಟಿಎಂಸಿ ನೀರು ಸಂಗ್ರಹ ಆಗುತ್ತದೆ. ಯಾವುದೇ ಆತಂಕ ಬೇಡ ಎಂದರು.