ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ ಡಿಸೆಂಬರ್‌ನಲ್ಲಿ ಸಿಡಬ್ಲೂö್ಯಸಿ ತಂಡ ಭೇಟಿ ನೀಡಲಿದ್ದು, ಜಲಾಶಯದ ಎಲ್ಲ 33 ಗೇಟ್‌ಗಳನ್ನು ಬದಲಾವಣೆಗೆ ಅವರ ಅಭಿಪ್ರಾಯ ಪಡೆದು ಮುಂದುವರೆಯಲು ಶುಕ್ರವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ತುಂಗಭದ್ರಾ ಜಲಾಶಯದ ಎಲ್ಲ 33 ಕ್ರಸ್ಟ್ಗೇಟ್‌ಗಳನ್ನು ಬದಲಾಯಿಸುವ ಅಗತ್ಯವಿದೆ ಎಂಬುದನ್ನು ಮನಗಂಡಿರುವ ತುಂಗಭದ್ರ ಮಂಡಳಿ, ನಗರದ ಟಿಬಿಬಿ ಕಚೇರಿಯಲ್ಲಿ ಟಿಬಿಬಿ ಅಧ್ಯಕ್ಷ ಎಸ್.ಎನ್.ಪಾಂಡೆ ಅಧ್ಯಕ್ಷತೆಯಲ್ಲಿ ನಡೆದ ಮಂಡಳಿ ಸಭೆ ನಡೆದಿದೆ. ಹೊಸ ಗೇಟ್ ಅಳವಡಿಕೆ, ಸಿಬ್ಬಂಧಿಗಳ ವೇತನ ಹಾಗೂ ನಿವೃತ್ತಿ ನೌಕರರ ಪಿಂಚಣಿ, ಟಿಬಿಬಿ ಜಮೀನು ಸೇರಿದಂತೆ ಇತರೆ ಅನಿವಾರ್ಯತೆಗಳ ಕುರಿತು ಸಭೆಯಲ್ಲಿ ತಿರ್ಮಾನ ನಡೆದಿದೆ. ಸಿಡಬ್ಲೂö್ಯಸಿ ವರದಿ ಪಡೆದು, ಜನುವರಿ ತಿಂಗಳ ಒಳಗೆ 33 ಗೇಟ್ ಅವಡಿಕೆ ಕೆಲಸಗಳು ಆರಂಬವಾಗಲಿದೆ.
ಈ ಕುರಿತು ಪರಿಣಿತರಿಂದ ಅಧ್ಯಯನ ನಡೆಸಿ, ಸಿಡಬ್ಲುಸಿ ಅಭಿಪ್ರಾಯ ಪಡೆಯಲಿದೆ. ಡಿಸೆಂಬರ್ ತಿಂಗಳಲ್ಲಿ ರಾಷ್ಟಿçÃಯ ಅಣೆಕಟ್ಟು ಪ್ರಾಧಿಕಾರದ ಅಧಿಕಾರಿಗಳು ಜಲಾಶಯಕ್ಕೆ ಭೇಟಿ ನೀಡಿ ಅಧ್ಯಯನ ನಡೆಸಿ ವರದಿ ನೀಡಲಿದ್ದಾರೆ. ಆನಂತರ ಮುಂದಿನ ಜನವರಿ ಒಳಗಾಗಿ ಗೇಟ್ ವಿನ್ಯಾಸ ನೀಡಲಿದ್ದಾರೆ. ಆ ಬಳಿಕ ಕ್ರಿಯಾ ಯೋಜನೆ ರೂಪಿಸಿ ಪರಿಶೀಲಿಸಿ, ಟೆಂಡರ್ ಪ್ರಕ್ರಿಯೆ ಮತ್ತು ಇತರೆ ಸಿದ್ದತೆಗಳನ್ನು ಮಾಡುವ ಕುರಿತು ಚರ್ಚೆ ನಡೆದಿದೆ.
ಕೇಂದ್ರ ಸರ್ಕಾರದ ಜಂಟಿ ಕಾರ್ಯದರ್ಶಿ ರಿಚಾ ಮಿಶ್ರಾ ಹಾಗೂ ತೆಲಂಗಾಣದಿAದ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡಿದ್ದರು. ರಾಜ್ಯದ ನೀರಾವರಿ ಇಲಾಖೆಯ ಕಾರ್ಯದರ್ಶಿ ಕುಲಕರ್ಣಿ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯದ ನೀರಾವರಿ ಮುಖ್ಯ ಎಂಜಿನಿಯರ್ ಮತ್ತು ಕಾರ್ಯದರ್ಶಿಗಳು, ಟಿಬಿಬಿ ಕಾರ್ಯದರ್ಶಿ ಓಆರ್‌ಕೆ ರೆಡ್ಡಿ, ಮುನಿರಾಬಾದ್ ಮುಖ್ಯ ಎಂಜಿನಿಯರ್ ಹನುಮಂತಪ್ಪ ದಾಸರ್, ಎಸ್‌ಇ ಬಸವರಾಜ್, ರವಿಚಂದ್ರ ಇತರರಿದ್ದರು.
ಸಭೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಗೇಟ್ ಬದಲಿಸಲ ಸಮ್ಮತಿಸಿ, ಬೋರ್ಡ್ ಕೆಲಸಗಳಿಗೆ ತನ್ನ ಪಾಲಿನ ಅನುದಾನ ನೀಡುವುದಾಗಿ ಹೇಳಿದೆ. ಆದರೆ, ಇದಕ್ಕೆ ಚಕಾರವೆತ್ತಿರುವ ಆಂಧ್ರ ಮತ್ತು ತೆಲಂಗಾಣ ಸರ್ಕಾರಗಳ ಪ್ರತಿನಿಧಿಗಳು, ವರದಿಗೆ ಸಿಡಬ್ಲುಸಿ ಒಪ್ಪಿಗೆ ನೀಡಿದರೆ ತಮ್ಮ ರಾಜ್ಯಗಳ ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ನಿರ್ಧರಿಸುವುದಾಗಿ ಹೇಳಿವೆ. ಇನ್ನೂ ನವಲಿ ಸಮನಾಂತರ ಜಲಾಶಯ ನಿರ್ಮಾಣದ ಕುರಿತು ನಡೆದ ಚರ್ಚೆಗೆ ಆಂಧ್ರಪ್ರದೇಶ ಆಸಕ್ತಿ ತೋರಿದರೂ, ತೆಲಂಗಾಣ ಸರ್ಕಾರ ಚಕಾರ ಎತ್ತಿದೆ ಎಂದು ಮೂಲಗಳು ತಿಳಿಸಿವೆ.