ಗಬ್ಬೂರು ಶ್ರೀ ಬೂದಿಬಸವೇಶ್ವರ ಜಾತ್ರೆಯಲ್ಲಿ ಕ್ಷಯರೋಗದ ಬಗ್ಗೆ ಜಾಗೃತಿ ಮೂಡಿಸಲಾಯಿತು. ವೈದ್ಯಾಧಿಕಾರಿ ಸಿದ್ದರಾಮೇಶ, ತಾಲೂಕು ಕ್ಷಯರೋಗ ಮೇಲ್ವಿಚಾರಕ ರವಿ ಶುಕ್ಲ, ಆರೋಗ್ಯ ಇಲಾಖೆ ಸಿಬ್ಬಂದಿ ಸುಧಾ, ರವೀಂದ್ರ, ಸುನೀಲ್, ರಾಮಕೃಷ್ಣ ಇದ್ದರು. 
ನ್ಯೂಸ್

ಟಿಬಿ ಬಗ್ಗೆ ಭಯಬೇಡ ಎಚ್ಚರಿಕೆ ಇರಲಿ

Kopala - Desk - Eraveni

ದೇವದುರ್ಗ: ಕ್ಷಯ ನಿರ್ಮೂಲನೆಗೆ ಸರ್ಕಾರ 100 ದಿನಗಳ ಕ್ಷಯಮುಕ್ತ ಭಾರತ ಅಭಿಯಾನ ಹಮ್ಮಿಕೊಂಡಿದೆ. ರೋಗಿಗಳು ಟಿಬಿ ಬಗ್ಗೆ ಭಯಪಡದೆ ಎಚ್ಚರ ವಹಿಸಿ ವೈದ್ಯರ ಸೂಚನೆ ಪಾಲಿಸಬೇಕು ಎಂದು ಗಬ್ಬೂರು ಪಿಎಚ್‌ಸಿ ವೈದ್ಯಾಧಿಕಾರಿ ಸಿದ್ದರಾಮೇಶ್ವರ ಹೇಳಿದರು.

ತಾಲೂಕಿನ ಗಬ್ಬೂರು ಶ್ರೀ ಬೂದಿಬಸವೇಶ್ವರ ಜಾತ್ರೆಯಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ 100 ದಿನಗಳ ಕ್ಷಯಮುಕ್ತ ಭಾರತ ಅಭಿಯಾನದಲ್ಲಿ ಶುಕ್ರವಾರ ಮಾತನಾಡಿದರು. ಕ್ಷಯರೋಗ ನಿರ್ಮೂಲನೆ ಮಾಡಬಹುದಾದ ಕಾಯಿಲೆಯಾಗಿದೆ. ರೋಗದ ಬಗ್ಗೆ ಆತಂಕ ಪಡದೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ತೆಗೆದುಕೊಳ್ಳಬೇಕು.

ಸತತ ಕೆಮ್ಮು, ಕಫ, ನಿರಂತರ ಜ್ವರ, ಕಡಿಮೆ ತೂಕ ಸೇರಿ ಇತರ ಆರೋಗ್ಯ ಸಮಸ್ಯೆ ಕಂಡುಬಂದರೆ ತಕ್ಷಣವೇ ತಪಾಸಣೆ ಮಾಡಿಸಿ ಚಿಕಿತ್ಸೆ ಪಡೆಯಬೇಕು. ಪೌಷ್ಟಿಕ ಆಹಾರ ಸೇವೆ, ನಿಯಮಿತ ಔಷಧ ಪಡೆದು ವೈದ್ಯರ ಸಲಹೆ ಪಾಲಿಸಿದರೆ ರೋಗದಿಂದ ಮುಕ್ತರಾಗಬಹುದು ಎಂದರು. ತಾಲೂಕು ಕ್ಷಯರೋಗ ಮೇಲ್ವಿಚಾರಕ ರವಿ ಶುಕ್ಲ, ಆರೋಗ್ಯ ಇಲಾಖೆ ಸಿಬ್ಬಂದಿ ಸುಧಾ, ರವೀಂದ್ರ, ಭೀಮೇಶ, ಸುನೀಲ್, ರಾಮಕೃಷ್ಣ, ಅಂಬರೀಷ್, ಹರೀಶ, ದಶರಥ, ಭೀಮಣ್ಣ ಇತರರಿದ್ದರು.