ನ್ಯೂಸ್

ತೆರಿಗೆ ಪಾಲು ಹಂಚಿಕೆಯಲ್ಲಿ ಅನ್ಯಾಯ; ನವದೆಹಲಿಯಲ್ಲಿ ವಕೀಲರೊಂದಿಗೆ ಕೃಷ್ಣ ಬೈರೇಗೌಡ ಸಭೆ

ಬೆಂಗಳೂರು: ತೆರಿಗೆ ಪಾಲು ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ಅನ್ಯಾಯವಾಗುತ್ತಿದೆ ಎಂದು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.

ಇನ್ನೊಂದೆಡೆ ಇದೇ ವಿಷಯವನ್ನು ಚುನಾವಣಾ ಅಸ್ತವನ್ನಾಗಿ ಮಾಡಿಕೊಂಡಿದೆ. ಬಹಿರಂಗ ಹೋರಾಟದ ಜತೆಗೆ ಕಾನೂನು ಸಮರವನ್ನೂ ಸಾರಿದೆ. ತೆರಿಗೆ ಪಾಲಿನಲ್ಲಿ ಆಗುತ್ತಿರುವ ವಂಚನೆಯ ಬಗ್ಗೆ ಸರ್ವೋಚ್ಛ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ಈ ರಿಟ್ ಅರ್ಜಿ ಕುರಿತು

ಹಿರಿಯ ವಕೀಲರೊಂದಿಗೆ ಚರ್ಚಿಸಲು ಕಂದಾಯ ಸಚಿವ ಕೃಷ್ಣ ಬೈರೇಗೌಡ ಎರಡು ದಿನ ನವ ದೆಹಲಿಯಲ್ಲಿ ತಂಗಲಿದ್ದಾರೆ. ಏ.21 ರಂದು ನವದೆಹಲಿಗೆ ಭೇಟಿ ನೀಡಲಿರುವ ಅವರು, ಏ.22 ರಂದು ಹಿರಿಯ ವಕೀಲರೊಂದಿಗೆ ಚರ್ಚಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.