ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2016ರಲ್ಲಿ ಕೇವಲ -ಠಿ; 55,255 (750 ಡಾಲರ್) ತೆರಿಗೆ ಕಟ್ಟಿದ್ದಾರೆ. ಶ್ವೇತಭವನ ಪ್ರವೇಶಿಸಿದ ಮೊದಲ ವರ್ಷ ಕೂಡ ಅಷ್ಟೇ ಮೊತ್ತದ ತೆರಿಗೆ ಪಾವತಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕಳೆದ 15 ವರ್ಷದಲ್ಲಿ 10 ವರ್ಷ ಟ್ರಂಪ್ ಆದಾಯ ತೆರಿಗೆಯನ್ನೇ ಕಟ್ಟಿಲ್ಲ ಎನ್ನುವುದು ಬಹಿರಂಗವಾಗಿದೆ. ಗಳಿಸಿರುವುದ್ದಕ್ಕಿಂತ ಆಗಿರುವ ನಷ್ಟವೇ ಹೆಚ್ಚು ಎನ್ನುವುದು ಇದಕ್ಕೆ ಕಾರಣ ಎನ್ನಲಾಗಿದೆ. ಅಧ್ಯಕ್ಷೀಯ ಚುನಾವಣೆಗೆ ಕೆಲವು ವಾರ ಇರುವಾಗ ನ್ಯೂಯಾರ್ಕ್ ಟೈಮ್ಸ್ ಈ ತನಿಖಾ ವರದಿ ರಾಜಕೀಯ ವಿವಾದ ಸೃಷ್ಟಿಸುವ ಸಂಭವವಿದೆ.
ಸುಳ್ಳು ಸುದ್ದಿ ಎಂದ ಟ್ರಂಪ್: ಇದೊಂದು ಅಪ್ಪಟ ಸುಳ್ಳು ಸುದ್ದಿ ಎಂದು ಪ್ರತಿಕ್ರಿಯಿಸಿರುವ ಟ್ರಂಪ್, ಅಧ್ಯಕ್ಷರ ಖಾಸಗಿ ಹಣಕಾಸು ವ್ಯವಹಾರಗಳ ವಿವರಗಳನ್ನು ಬಹಿರಂಗ ಪಡಿಸುವುದು ಕಡ್ಡಾಯವಲ್ಲ. ಆದರೆ, ರಿಚರ್ಡ್ ನಿಕ್ಸನ್ ಕಾಲದಿಂದಲೂ ಅಧ್ಯಕ್ಷರು ತಮ್ಮ ಹಣಕಾಸು ವಿವರವನ್ನು ಸಾರ್ವಜನಿಕವಾಗಿ ಪ್ರಕಟಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ನಭಕ್ಕೆ ನೆಗೆಯಲಿದೆ ಶೌಚಗೃಹ: ನಾಸಾದಿಂದ ನಾಳೆಯೇ ಮುಹೂರ್ತ ಫಿಕ್ಸ್
ಭಾರತಕ್ಕೆ 1.07 ಕೋಟಿ ತೆರಿಗೆ ಪಾವತಿ: ಟ್ರಂಪ್ ಅಥವಾ ಅವರ ಕಂಪನಿಗಳು 2017ರಲ್ಲಿ ಭಾರತದಲ್ಲಿ ಸುಮಾರು 1.07 ಕೋಟಿ ರೂಪಾಯಿ (1,45,400 ಡಾಲರ್) ತೆರಿಗೆ ಪಾವತಿಸಿವೆ ಎಂದೂ ಪತ್ರಿಕೆಯ ವರದಿ ತಿಳಿಸಿದೆ. ಭಾರತದಲ್ಲಿನ ವ್ಯವಹಾರಗಳಿಂದ ಟ್ರಂಪ್ 17 ಕೋಟಿ ರೂಪಾಯಿ (2.30 ಮಿಲಿಯನ್ ಡಾಲರ್) ಆದಾಯ ಗಳಿಸಿದ್ದಾರೆ ಎಂದು ವರದಿ ಹೇಳಿದೆ.