ನ್ಯೂಸ್

ಬ್ರಿಟನ್​ನಲ್ಲಿ ಟಾಟಾ ಸ್ಟೀಲ್​ ಹೂಡಿಕೆ; 1.25 ಶತಕೋಟಿ ಪೌಂಡ್​ ಹೂಡಿಕೆ ಸಾಧ್ಯತೆ!

ಲಂಡನ್: ಟಾಟಾ ಸ್ಟೀಲ್​ನೊಂದಿಗೆ 1.25 ಶತಕೋಟಿ ಪೌಂಡ್​ಗಳ (ಅಂದಾಜು 12,901 ಕೋಟಿ ರೂಪಾಯಿ) ಮೌಲ್ಯದ ಜಂಟಿ ಹೂಡಿಕೆಯ ಪ್ಯಾಕೇಜ್​ ಅನ್ನು ಬ್ರಿಟನ್​ ಪ್ರಕಟಿಸಿದೆ.

ಇದರಲ್ಲಿ 500 ಮಿಲಿಯನ್​ ಪೌಂಡ್​ಗಳ ಸರ್ಕಾರದ ಅನುದಾನವೂ ಸೇರಿದೆ. ವೇಲ್ಸ್​ನಲ್ಲಿ ದೇಶದ ಅತಿದೊಡ್ಡ ಉಕ್ಕಿನ ಘಟಕ ಸ್ಥಾಪಿಸಲು ಈ ಅನುದಾನ ಒದಗಿಸಲಾಗುತ್ತಿದೆ. ಇದರಿಂದ ಬ್ರಿಟನ್​ನಲ್ಲಿ ಉದ್ಯೋಗಾವಕಾಶಗಳ ಸೃಷ್ಟಿ, ಆರ್ಥಿಕತೆ ವರ್ಧನೆ ಹೆಚ್ಚಳ ನಿರೀಕ್ಷಿಸಲಾಗಿದೆ.

ಈ ಅನುದಾನವು ಬ್ರಿಟನ್​ ಇತಿಹಾಸದಲ್ಲಿಯೇ ಸರ್ಕಾರ ನೀಡಿರುವ ಅತಿದೊಡ್ಡ ಬೆಂಬಲದ ಪ್ಯಾಕೇಜ್​ ಆಗಿದೆ ಎನ್ನಲಾಗಿದೆ. ಬ್ರಿಟನ್​ ಉಕ್ಕಿನ ಉದ್ಯಮಕ್ಕೆ ನಿರ್ಣಾಯಕ ಣ ಎಂದು ಪರಿಗಣಿಸಲಾಗಿದೆ. ಈ ಒಪ್ಪಂದದ ಭಾಗವಾಗಿ, ಭಾರತೀಯ ಉಕ್ಕು ದೈತ್ಯ ಕಂಪನಿಯು 1.25 ಶತಕೋಟಿ ಪೌಂಡ್​ ಹೂಡಿಕೆ ಮಾಡುವ ನಿರೀಕ್ಷೆಯಿದೆ.