ನ್ಯೂಸ್

ವೈದ್ಯರು, ವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಟಾಸ್ಕ್ ಫೋಸ್೯;  ದಿನೇಶ್ ಗುಂಡೂರಾವ್

ಬೆಂಗಳೂರು: ಕರ್ತವ್ಯನಿರತ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ಹಾಗೂ ರಕ್ಷಣೆ ಒದಗಿಸುವ ಬಗ್ಗೆ ಟಾಸ್ಕ್ ಫೋಸ್೯ ರಚಿಸಲು ಸರ್ಕಾರ ನಿರ್ಧರಿಸಿದೆ.

ವಿಧಾನಸೌಧದಲ್ಲಿ ಕೋಲ್ಕತದ ಆರ್‌ಜಿಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯನಿರತ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ವೈದ್ಯರ ರಕ್ಷಣೆಗಾಗಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆಯೋಜಿಸಿದ್ದ ಸಭೆಯ ಬಳಿಕ ಸುದ್ದಿಗೋಷ್ಠಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಈ ಮಾಹಿತಿ ನೀಡಿದರು.

ಕರ್ತವ್ಯನಿರತ ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ಹಾಗೂ ರಕ್ಷಣೆಗೆ ಸಂಬಂಧಿಸಿದಂತೆ ಈಗಾಗಲೇ ಅನೇಕ ಕಾಯ್ದೆಗಳು ಇವೆ. ರಾಜ್ಯದಲ್ಲೂ ಕೂಡ ಒಂದು ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಆದಾಗ್ಯೂ ಈ ಕಾಯ್ದೆಗಳನ್ನು ಪರಾಮರ್ಶಿಸಿ ವರದಿ ಕೊಡಲು ಸಮಿತಿಯೊಂದನ್ನು ರಚಿಸಲಾಗುತ್ತದೆ ಎಂದರು.

ಈ ಸಮಿತಿಗೆ ಒಂದು ತಿಂಗಳ ಅವಧಿಯಲ್ಲಿ ವರದಿ ಕೊಡುವಂತೆ ಹೇಳಿದ್ದೇವೆ. ಆದರೆ, ಸಮಿತಿಗೆ ಯಾರನ್ನು ಅಧ್ಯಕ್ಷರನ್ನಾಗಿ ಮಾಡಬೇಕು ಎಂದು ಇನ್ನೂ ನಿರ್ಧರಿಸಿಲ್ಲ ಎಂದು ತಿಳಿಸಿದರು.

ಎಲ್ಲ ಆಯಾಮಗಳಲ್ಲೂ ವರದಿ

ಮಹಿಳಾ ವೈದ್ಯರು, ಅರೆ ವೈದ್ಯ ಸಿಬ್ಬಂದಿ ಕರ್ತವ್ಯನಿರ್ವಹಿಸುವ ಸ್ಥಳಗಳಲ್ಲಿ ಸಿಸಿಟಿವಿ, ರೆಸ್ಟ್ ಬ್ಯಾಂಡ್, ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ, ಪೊಲೀಸ್ ಹಾಗೂ ಭದ್ರತಾ ಸಿಬ್ಬಂದಿ ಜೊತೆ ಸಂಪರ್ಕ ಇಟ್ಟುಕೊಳ್ಳುವುದು, ಯರ್ ಸೇಫ್ಟಿ ,ಸೆಕ್ಯೂರಿಟಿ ನಾರ್ಮ್ಸ್ ಸೇರಿದಂತೆ ಸುರಕ್ಷತೆಗೆ ಸಂಬಂಧಿಸಿದಂತೆ ಸಲಹೆಗಳು ಬಂದಿವೆ. ಈ ಸಲಹೆಗಳನ್ನೂ ಪರಿಗಣಿಸಿ ಸಮಗ್ರ ವರದಿ ನೀಡಲು ಸಮಿತಿಯನ್ನು ಕೇಳಿದ್ದೇವೆ.

ಈ ವರದಿ ಆಧರಿಸಿ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಕಾಯ್ದೆ ಬಗ್ಗೆ ಜನರಿಗೆ ಮಾಹಿತಿ ಅಗತ್ಯ

ವೈದ್ಯಕೀಯ, ಅರೆವೈದ್ಯಕೀಯ ಸಿಬ್ಬಂದಿ ರಕ್ಷಣೆಗೆ ಈಗಾಗಲೇ ಕರ್ನಾಟಕ ಸರ್ಕಾರ ಕಾಯ್ದೆ ತಂದಿದ್ದು, ರಾಜ್ಯಪಾಲರು ಅದಕ್ಕೆ ಅನುಮೋದನೆ ನೀಡಿದ್ದಾರೆ. ಈ ಕಾಯ್ದೆ ಬಗ್ಗೆ ಜನರಿಗೆ ಮಾಹಿತಿ ನೀಡಬೇಕಿದೆ. ವೈದ್ಯಕೀಯ ಕಾಲೇಜು,ಆಸ್ಪತ್ರೆಗಳಲ್ಲಿ ಈ ಕಾಯ್ದೆ ಕುರಿತು ಜಾಗೃತಿ ಲಕ ಹಾಕಬೇಕಿದೆ ಎಂದರು.

ಆತಂಕ ಸೃಷ್ಟಿಸಿದ ಕೊಲೆ:

ಕೋಲ್ಕತ ವೈದ್ಯ ವಿದ್ಯಾರ್ಥಿನಿ ಘಟನೆ ಆತಂಕ ತಂದಿದೆ. ವೈದ್ಯರು,ಅರೆವೈದ್ಯಕೀಯ ಸಿಬ್ಬಂದಿ ಬೀದಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ವೈದ್ಯಕೀಯ ರಂಗದಲ್ಲಿ ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸುರಕ್ಷತೆ ಇಲ್ಲದಿದ್ದರೆ ಕಷ್ಟ. ಅವರು ಕೆಲಸ ಮಾಡುವುದು ಕಷ್ಟವಾಗುತ್ತದೆ. ಕೋಲ್ಕತ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ವೋಚ್ಚ ನ್ಯಾಯಾಲಯವೂ ಸ್ವಯಂಪ್ರೇರಿತ ದೂರು ದಾಖಲಿಸಿದೆ. ಹಾಗಾಗಿ ಹಾಗಾಗಿ ನಾವು ರಾಜ್ಯದಲ್ಲಿ ಕೈಗೊಳ್ಳಬಹುದಾದ ಕ್ರಮಗಳನ್ನು ಚಿಂತಿಸುತ್ತಿದ್ದೇವೆ. ರಾಜ್ಯದ ಎಲ್ಲ ವೈದ್ಯಕೀಯ, ಅರೆವೈದ್ಯಕೀಯ ಹಾಗೂ ಸಂಬಂಧಪಟ್ಟ ಸಂಘಟನೆಗಳ ಸಭೆ ನಡೆಸಲಾಗಿದೆ. ಎ್ಎಚ್‌ಎನ್, ನಾ, ಕೆಪಿಎಂಇಎ, ಆಯುಷ್, ಸರ್ಜಿಕಲ್ ಅಸೋಸಿಯೇಷನ್ ಸೇರಿದಂತೆ ಎಲ್ಲ ಸಂಘಟನೆಗಳ ಪ್ರತಿನಿಧಿಗಳೂ ಈ ಸಭೆಯಲ್ಲಿ ಭಾಗವಹಿಸಿದ್ದರು. ಅವರೆಲ್ಲರೂ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಉಗ್ರಪ್ಪ ವರದಿ ಶಿಫಾರಸು ಅಳವಡಿಕೆ

ವಿಧಾನ ಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ನೇತೃತ್ವದ ಸಮಿತಿ ಮಹಿಳೆಯರ ಮೇಲಿನ ಅತ್ಯಾಚಾರ,ದೌರ್ಜನ್ಯ, ಶೋಷಣೆ ತಡೆಗೆ ಸಂಬಂಧಿಸಿದಂತೆ ವರದಿ ಕೊಟ್ಟಿದೆ. ಆ ವರದಿಯ ಶಿಫಾರಸುಗಳನ್ನು ಕೂಡ ನಾವು ಬಳಸಿಕೊಳ್ಳುತ್ತೇವೆ. ವೈದ್ಯಕೀಯ ಕ್ಷೇತ್ರದಲ್ಲಿ ಏನು ಕ್ರಮ ತೆಗೆದುಕೊಳ್ಳಬಹುದು ಅದೆಲ್ಲವನ್ನೂ ಸರ್ಕಾರ ತೆಗೆದುಕೊಳ್ಳಲಿದೆ ಎಂದರು.

ಮಹಿಳೆ ಬಗ್ಗೆ ಗೌರವ ಭಾವನೆ ಅವಶ್ಯ

ಸಾಮಾಜಿಕ ವ್ಯವಸ್ಥೆಯಲ್ಲೂ ಸಾಕಷ್ಟು ಸಮಸ್ಯೆಗಳಿವೆ. ಮಹಿಳೆಯರನ್ನ ಕೆಟ್ಟ ದೃಷ್ಟಿಯಿಂದ ನೋಡುವುದು ದೌರ್ಬಲ್ಯ. ಪುರುಷ ಪ್ರಧಾನ ಸಮಾಜದಲ್ಲಿ ದೌರ್ಬಲ್ಯವಿದೆ. ವಿಶ್ವದ ಅನೇಕ ರಾಷ್ಟ್ರಗಳಲ್ಲಿ ಈ ಸಮಸ್ಯೆ ಇದೆ. ಮಹಿಳೆಯರ ಬಗ್ಗೆ ಗೌರವ ಭಾವನೆ ಬರಬೇಕು. ಅಂತಹ ಸ್ಥಿತಿ ಸಮಾಜದಲ್ಲಿರಬೇಕು. ಹಾಗಾದಾಗ ಮಾತ್ರ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗಲಿದೆ. ಆದರೆ ಅದು ಬಹಳ ಕಷ್ಟ ಎಂದು ಹೇಳಿದರು.

ಟಾಸ್ಕ್ ಫೋಸ್೯ ಸಮಿತಿಯಲ್ಲಿ ಆರೋಗ್ಯ,ವೈದ್ಯಕೀಯ ಇಲಾಖೆ ಅಧಿಕಾರಿಗಳು ಇರುತ್ತಾರೆ. ಹತ್ತು ಹನ್ನೆರಡು ಸಂಸ್ಥೆಗಳಿವೆ. ಆ ಸಂಸ್ಥೆಗಳ ಪ್ರತಿನಿಧಿಗಳನ್ನೂ ಟಾಸ್ಕ್ ಫೋಸ್೯  ಸದಸ್ಯರನ್ನಾಗಿ ಮಾಡಬೇಕಿದೆ ಎಂದು ದಿನೇಶ್ ಗುಂಡೂರಾವ್ ತಿಳಿಸಿದರು.

ಜಿಕಾ ವೈರಸ್ 9 ಪ್ರಕರಣ ವರದಿಯಾಗಿವೆ. ಶಿವಮೊಗ್ಗದಲ್ಲಿ 6 ಜಿಗಣಿಯಲ್ಲಿ 3 ಕೇಸ್ ಇವೆ. ಶಿವಮೊಗ್ಗದಲ್ಲಿ ಒಬ್ಬರು ಸಾವನ್ನಪ್ಪಿದ್ದಾರೆ. ಅವರು ಕೇವಲ ಜಿಕಾ ವೈರಸ್‌ನಿಂದ ಮೃತಪಟ್ಟಿಲ್ಲ. ಅವರಿಗೆ ಇತರೆ ಕಾಯಿಲೆಗಳೂ ಇದ್ದ ಕಾರಣ ಮೃತಪಟ್ಟಿದ್ದಾರೆ. ಜಿಕಾ ವೈರಸ್‌ನಿಂದ ಗರ್ಭಿಣಿಯರಿಗೆ ಸ್ವಲ್ಪ ಸಮಸ್ಯೆಯಾಗಬಹುದೇ ಹೊರತು ಅದು ಮರಣಾಂತಿಕ ಕಾಯಿಲೆ ಅಲ್ಲ. ಜಿಗಣಿಯಲ್ಲಿ ಗರ್ಭಿಣಿಯೊಬ್ಬರಿಗೆ ಜಿಕಾ ವೈರಸ್ ಬಂದಿತ್ತು. ಆದರೆ, ಅವರಿಗೆ ಹುಟ್ಟಿದ ಮಗು ಚನ್ನಾಗಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.