ನ್ಯೂಸ್

ಪುಸ್ತಕಗಳ ಕೈ ಹಿಡಿದರೆ ಭವಿಷ್ಯ ಉಜ್ವಲ; ಪ್ರಭುಲಿಂಗ

Haveri - Kariyappa Aralikatti

ರಾಣೆಬೆನ್ನೂರ: ವಿದ್ಯಾಥಿರ್ಗಳು ಓದುವ ಸಮಯದಲ್ಲಿ ಸರಿಯಾದ ಮಾರ್ಗದರ್ಶನದಲ್ಲಿ ಅಧ್ಯಯನ ಮಾಡಬೇಕು. ಪ್ರಾಮಾಣಿಕವಾಗಿ ಪುಸ್ತಕಗಳ ಕೈ ಹಿಡಿದರೆ ಮುಂದಿನ ಭವಿಷ್ಯದಲ್ಲಿ ಯಾರ ಕೈ&ಕಾಲು ಹಿಡಿಯುವ ಪರಿಸ್ಥಿತಿ ಬರುವುದಿಲ್ಲ ಎಂದು ಸಂಜೀವಿನಿ ಕಾಲೇಜ್​ ಪ್ರಾಚಾರ್ಯ ಪ್ರಭುಲಿಂಗ ಕೋಡದ ಹೇಳಿದರು.

ನಗರದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ ಏರ್ಪಡಿಸಿದ್ದ 2025&26ನೇ ಸಾಲಿನ ಪ್ರಥಮ ವರ್ಷದ ವಿದ್ಯಾಥಿರ್ಗಳ ಓರಿಯೆಂಟೇಷನ್​( ಸ್ವಾಗತ ) ಸಮಾರಂಭದ ಉದ್ಘಾಟಿಸಿ ಅವರು ಮಾತನಾಡಿದರು.

ಒಮ್ಮೆ ನೀವು ಯಶಸ್ಸು ಗಳಿಸಿದರೆ ಜೀವನದಲ್ಲಿ ಎಲ್ಲವೂ ನಿಮ್ಮನ್ನು ಹಿಂಬಾಲಿಸಿ ಬರುತ್ತದೆ. ಆದರೆ ಸಂತೋಷ, ವೈಭೋಗದ ಹಿಂದೆ ಓಡಿದರೆ ಯಶಸ್ಸು ಖಂಡಿತ ನಿಮ್ಮದಾಗುವುದು ಅಸಾಧ್ಯ. ಶಿಸ್ತು, ಕಠಿಣ ಪರಿಶ್ರಮ, ದೃಢಸಂಕಲ್ಪ, ಸಾಧಿಸುವ ಛಲ, ಏಕಾಗ್ರತೆ ಈ ಎಲ್ಲವನ್ನು ನಿಮ್ಮಲ್ಲಿ ಬೆಳಸಿಕೊಂಡಾಗ ಯಶಸ್ಸು ತಾನಾಗಿಯೇ ಒಲಿದು ಬರುತ್ತದೆ ಎಂದರು.

ಪ್ರಾಚಾರ್ಯ ಡಾ. ಎಸ್​.ಜಿ. ಮಾಕನೂರು ಅಧ್ಯಕ್ಷತೆ ವಹಿಸಿದ್ದರು.

ಡೀನ್​ ಅಕಾಡೆಮಿ ಡಾ. ಎಸ್​.ಎಫ್​. ಕೋಡದ, ಉಪನ್ಯಾಸಕರಾದ ಡಾ. ಎಂ.ಈ. ಶಿವಕುಮಾರ ಹೊನ್ನಾಳಿ, ಸಿ.ಎಂ. ಪರಮೇಶ್ವರಪ್ಪ, ಡಾ. ಬಿ. ಮಹೇಶ್ವರಪ್ಪ, ಡಾ. ಮುಜಿಬುಲ್ಲಾ ಖಾನ್​ ಗುತ್ತಲ, ದಿನೇಶ ಮಾಗನೂರ, ಡಾ. ಡಿ.ಎಸ್​. ವಿಶ್ವನಾಥ, ಪುಷ್ಪ ತೆಂಬದ, ಸಿ.ಎಂ. ಶ್ವೇತಾ, ಭಾವನಾ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.