ನ್ಯೂಸ್

ಮಕ್ಕಳನ್ನು ಪಾಲನೆ ಮಾಡುವುದು ಪುಣ್ಯದ ಕೆಲಸ; ಪರಶುರಾಮ ಪೂಜಾರ

Haveri - Kariyappa Aralikatti

ರಾಣೆಬೆನ್ನೂರ: ಮಕ್ಕಳ ಪಾಲನೆ ಪೋಷಣೆ ಮಾಡುವುದು ಪುಣ್ಯದ ಕೆಲಸ ಎಂದು ತಾಪಂ ಸಹಾಯಕ ನಿರ್ದೇಶಕ ಪರಶುರಾಮ ಪೂಜಾರ ಹೇಳಿದರು.
ನಗರದ ತಾಪಂ ಸಭಾ ಭವನದಲ್ಲಿ ಗ್ರಾಮೀಣಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಗುರುವಾರ ಏರ್ಪಡಿಸಿದ್ದ ಶಿಶು ಪಾಲನಾ ಕೇಂದ್ರದ ಆರೈಕೆದಾರರ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ತಾಲೂಕಿನ ಹರನಗಿರಿ, ಸೋಮಲಾಪುರ, ರಾಹುತನಕಟ್ಟಿ, ಉಕ್ಕುಂದ, ಬಿಲ್ಲಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಪ್ರಾಥಮಿಕವಾಗಿ ಶಿಶು ಪಾಲನಾ ಕೇಂದ್ರಗಳನ್ನು ಪ್ರಾರಂಭಿಸಲಾಗುತ್ತಿದ್ದು, ಕೇಂದ್ರಗಳನ್ನು ನಿರ್ವಹಣೆ ಮಾಡಿಕೊಂಡು ಹೋಗಲು ಆರೈಕೆದಾರರನ್ನು ಗುರುತಿಸಿ ತರಬೇತಿ ನೀಡಲಾಗುತ್ತಿದೆ. ನರೇಗಾ ಕೂಲಿ ಕಾರ್ಮಿಕರು ತರಬೇತಿ ಸದುಪಯೋಗ ಪಡೆದುಕೊಂಡು ಆರೈಕೆದಾರರು ತಮ್ಮ ಮಕ್ಕಳಂತೆ ಕೇಂದ್ರಕ್ಕೆ ಬರುವ ಮಕ್ಕಳನ್ನು ಪಾಲನೆ ಮಾಡಬೇಕು ಎಂದರು.
ಶಿಶು ಅಭಿವೃದ್ಧಿ ಅಧಿಕಾರಿ ಶೋಭಾ, ತಾಲೂಕ ಸಹಾಯಕ ನಿರ್ದೇಶಕ ಡಿ.ಡಿ. ಗೊಂದಿ, ತಾಲೂಕು ಲೆಕ್ಕಾಧಿಕಾರಿ ಬಸವರಾಜ ಶಿಡೇನೂರ, ನರೇಗಾ ಸಂಚಾಲಕ ಮಾಲತೇಶ ಮಡಿವಾಳರ, ಪಿಡಿಒ ನಿಂಗರಾಜ ಲೆಕ್ಕಿಕೋನಿ, ಮಂಜುನಾಥ ಕೆ., ಕೆ.ಸಿ. ಅಜ್ಜೆವಡಿ ಮಠ, ತಾಲೂಕು ಐಈಸಿ ಸಂಯೋಜಕ ಕುಮಾರಯ್ಯ ಚಿಕ್ಕಮಠ, ಡಿ.ವಿ. ಅಂಗೂರ, ಪ್ರಕಾಶ ನಾಯಕರ, ಕಾಂತೇಶ ಐರಣಿ, ಪುಟ್ಟಪ್ಪ ಒಡೆಯರ, ಶ್ರೀನಿವಾಸ ಕೊಣ್ಣೂರ, ನಾಗಪ್ಪ ಪಾರ್ವತೇರ, ಚಂದ್ರಶೇಖರ ಮಠದ ಮತ್ತಿತರರು ಉಪಸ್ಥಿತರಿದ್ದರು.