ಈ ಬಾರಿ ದಸರೆಗೆ ಹೆಚ್ಚು ಪ್ರವಾಸಿಗರು ಆಗಮಿಸಿದ್ದು, ಟಾಂಗಾಗಾಡಿಗಳಲ್ಲಿ ಕುಳಿತು ಅರಮನೆ ವೈಭವ, ದೀಪಾಲಂಕಾರ, ಆಹಾರಮೇಳ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡರು ಎಂದು ಮೈಸೂರು ಟಾಂಗಾವಾಲಾಗಳ ಸಂಘ ಅಧ್ಯಕ್ಷ ಫಯಾಜ್ ಅಹಮ್ಮದ್ ತಿಳಿಸಿದರು.
ದೀಪಾಲಂಕಾರ ಮುಂದುವರಿದಿರುವುದರಿಂದ ಟಾಂಗಾವಾಲಾಗಳಿಗೆ ಬೇಡಿಕೆ ಇದೆ. ಬಹುತೇಕ ಟಾಂಗಾವಾಲಾಗಳು ಈ ಬಾರಿ ದಸರೆಯಲ್ಲಿ ಉತ್ತಮವಾಗಿ ಸಂಪಾದನೆ ಮಾಡಿದ್ದಾರೆ. ಮುಂದಿವ ವರ್ಷವೂ ದಸರಾ ಇದೇ ರೀತಿ ಆಗಲಿ ಎಂದು ಬೇಡಿಕೊಳ್ಳುತ್ತೇನೆ.