ನ್ಯೂಸ್

ಕಾವೇರಿ ನದಿ ತೀರವನ್ನು ಸಂರಕ್ಷಿತ ಕೃಷಿ ಪ್ರದೇಶವೆಂದು ಘೋಷಿಸಿ ರಕ್ಷಣೆ, ಹೊಸ ಕಾನೂನು ಜಾರಿಗೆ ಚಿಂತನೆ; ತಮಿಳುನಾಡು ಸಿಎಂ ಪಳನಿಸ್ವಾಮಿ

ತಮಿಳುನಾಡು: ಕಾವೇರಿ ನದಿ ತೀರವನ್ನು ಸಂರಕ್ಷಿತ ಕೃಷಿ ಪ್ರದೇಶವೆಂದು ಘೋಷಿಸಿ ರಕ್ಷಿಸಲಾಗುವುದು ಎಂದು ತಮಿಳುನಾಡು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಹೇಳಿದ್ದಾರೆ.

ಈ ಬಗ್ಗೆ ಕಾನೂನು ಕಾನೂನು ತಜ್ಞರ ಜತೆ ಚರ್ಚಿಸಿ, ಹೊಸ ಕಾನೂನು ಜಾರಿಗೊಳಿಸಲಾಗುವುದು. ಈ ಸನ್ನಿವೇಶವನ್ನು ನಾನು ಮುಖ್ಯಮಂತ್ರಿಯಾಗಿ ನೋಡುತ್ತಿಲ್ಲ, ಬದಲಾಗಿ ಒಬ್ಬ ರೈತನಾಗಿ ಗಮನಿಸುತ್ತಿದ್ದೇನೆ ಎಂದಿದ್ದಾರೆ.

ಕಾವೇರಿ ನದಿ ತೀರದಲ್ಲಿ ಹೈಡ್ರೋಕಾರ್ಬನ್ ಯೋಜನೆಯನ್ನು ನಾವು ಅನುಮತಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ಕಾವೇರಿ ನದಿ ನೀರು ಹಂಚಿಕೆ ಬಗ್ಗೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳು ಹಿಂದಿನಿಂದಲೂ ಜಗಳವಾಡುತ್ತ ಬಂದಿವೆ.

ಕಾವೇರಿ ನೀರು ಹಂಚಿಕೆ ಬಗ್ಗೆ ಸುಪ್ರೀಂ ಕೋರ್ಟ್​ನವರೆಗೂ ಎರಡೂ ಸರ್ಕಾರಗಳು ಎಡತಾಕಿವೆ. ಕರ್ನಾಟಕ ರಾಜ್ಯದ ಹಲವು ಯೋಜನೆಗಳಿಗೆ ತಮಿಳುನಾಡು ಕೊಕ್ಕೆ ಹಾಕುತ್ತಲೇ ಇದೆ. (ಏಜೆನ್ಸೀಸ್​)