ನ್ಯೂಸ್

PHOTOS | ಮಾಜಿ ಪ್ರಿಯಕರನಿಂದ ಕಿರುಕುಳ; ನೋವು ಹಂಚಿಕೊಂಡ ನಟಿ

ತಮಿಳುನಾಡು: ತಮಿಳು ಸಿನಿಮಾ ನಟಿ ಅನಿಕಾ ವಿಜಯ್ ವಿಕ್ರಮನ್ ತನ್ನ ಮಾಜಿ ಪ್ರಿಯಕರನಿಂದ ಹಲ್ಲೆಗೊಳಗಾಗಿದ್ದು ಮತ್ತು ಎದುರಾಗ ಕಿರುಕುಳವನ್ನು ತನ್ನ ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಅನಿಕಾ ವಿಜಯ್ ಹಂಚಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ವೈರಲ್ ಆಗಿದೆ. ಇದೇ ವೇಳೆ ತನಗೆ ಬೆದರಿಕೆಗಳು ಬರುತ್ತಿವೆ ಎಂದು ಬಹಿರಂಗ ಪಡಿಸಿದ್ದಾರೆ.

ಅನಿಕಾ ಹಂಚಿಕೊಂಡಿರುವ ಫೋಟೋಗಳನ್ನು ಗಮನಿಸಿದಾಗ ಆಕೆಯ ಮಾಜಿ ಪ್ರಿಯಕರ ಅಮಾನುಷವಾಗಿ ಕಿರುಕುಳ ನೀಡಿರುವುದು ಸ್ಪಷ್ಟವಾಗುತ್ತದೆ. ಅನಿಕಾಳ ಮುಖ ಹಾಗೂ ಕತ್ತಿನ ಭಾಗ ಗಾಯಗೊಂಡಿವೆ. ಅಲ್ಲದೆ ಕಣ್ಣಿನ ಸುತ್ತ ರಕ್ತ ಹೆಪ್ಪುಗಟ್ಟಿದೆ. ಈ ಘಟನೆಗಳನ್ನು ಮರೆಯೋಣ ಎಂದರೆ ನಿರಂತರವಾಗಿ ಬೆದರಿಕೆ ಕರೆ ಬರುತ್ತಿದ್ದು, ನನಗೆ ಮತ್ತು ನನ್ನ ಕುಟುಂಬವನ್ನು ಮಾನಹಾನಿ ಮಾಡಲಾಗುತ್ತಿದೆ ಎಂದು ತನ್ನ ನೋವು ತೋಡಿಕೊಂಡಿದ್ದಾರೆ.

ಮಾಜಿ ಪ್ರಿಯಕರನಿಂದಾದ ದೌರ್ಜನ್ಯವನ್ನು ಅನಿಕಾ ಬಹಿರಂಗಪಡಿಸಿ, ಇದೀಗ ಮತ್ತೆ ನಟನೆಗೆ ಮರಳಿದ್ದೇನೆ. ತನಗಾದ ಅನ್ಯಾಯದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. (ಏಜೆನ್ಸೀಸ್)