ಜಾನ್ ವಿಜಯ್​ 
ನ್ಯೂಸ್

ಡಾನ್ ವಿಜಯ್ : 12 ವರ್ಷಗಳ ಬಳಿಕ ಕನ್ನಡ ಚಿತ್ರರಂಗಕ್ಕೆ ಮರಳಿದ ಬಹುಭಾಷಾ ನಟ

ಪ್ರಮುಖ ಮುಖ್ಯಾಂಶಗಳು

  • ಪೃಥ್ವಿ, ಗಜಕೇಸರಿ ಬಳಿಕ ಮತ್ತೆ ಸ್ಯಾಂಡಲ್ ವುಡ್ ಗೆ ಬಂದ ತಮಿಳು ವಿಲನ್​
  • ತಮಿಳು, ಕನ್ನಡ ಸೇರಿ 120ಕ್ಕೂ ಚಿತ್ರಗಳಲ್ಲಿ ನಟಿಸಿರುವ ಜಾನ್ ವಿಜಯ್​
  • ಹಲ್ಕಾ ಡಾನ್ ಚಿತ್ರದಲ್ಲಿ ಮುಖ್ಯಭೂಮಿಕೆಯಲ್ಲಿ ನಟ, 30 ದಿನಗಳ ಶೂಟಿಂಗ್ ಡೇಟ್​
ಬೆಂಗಳೂರು: ಕಾಲಿವುಡ್‌ನಲ್ಲಿ ನಟ ಜಾನ್ ವಿಜಯ್ ದೊಡ್ಡ ಹೆಸರು. ‘ರಾವಣನ್’, ‘ಥಿಲ್ಲಾಂಗಡಿ’, ‘ಕಬಾಲಿ’, ‘ಸರ್ಪಟ್ಟ ಪರಂಬರೈ’ ಸೇರಿ 100ಕ್ಕೂ ಅಧಿಕ ತಮಿಳು ಚಿತ್ರಗಳಲ್ಲಿ ಪೋಷಕ, ವಿಲನ್ ಪಾತ್ರಗಳಲ್ಲಿ ಅವರು ನಟಿಸಿ ಮಿಂಚಿದ್ದಾರೆ. ಇನ್ನು ಜಾನ್ ವಿಜಯ್ ಕೇವಲ ತಮಿಳಿಗೆ ಮಾತ್ರ ಸೀಮಿತವಾಗಿಲ್ಲ. ಮಲಯಾಳಂ, ತೆಲುಗು ಸೇರಿ ಕನ್ನಡದಲ್ಲಿ ಪುನೀತ್ ರಾಜಕುಮಾರ್ ಅಭಿನಯದ ‘ಪೃಥ್ವಿ’, ಯಶ್ ನಟನೆಯ ‘ಗಜಕೇಸರಿ’ ಚಿತ್ರಗಳಲ್ಲಿ ನಟಿಸಿ, ಗಮನಸೆಳೆದಿದ್ದಾರೆ. ಇದೀಗ 12 ವರ್ಷಗಳ ಬಳಿಕ ಅವರು ಮತ್ತೆ ಸ್ಯಾಂಡಲ್‌ವುಡ್‌ನಲ್ಲಿ ಎಂಟ್ರಿ ಕೊಡುತ್ತಿದ್ದಾರೆ. ಪ್ರಮೋದ್ ಪಂಜು, ಅಮೃತಾ ಅಯ್ಯಂಗಾರ್ ನಟನೆಯ, ಚಲ ನಿರ್ದೇಶನದ ‘ಹಲ್ಕಾ ಡಾನ್’ ಚಿತ್ರದಲ್ಲಿ ಜಾನ್ ವಿಜಯ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಚಿತ್ರತಂಡವು ಅವರ ಪಾತ್ರ ಪರಿಚಯಿಸುವ ಸ್ಟ್ ಲುಕ್ ರಿವೀಲ್ ಮಾಡಿದೆ. ನಟನನ್ನು ಸ್ವಾಗತಿಸಿ ನಿರ್ಮಾಪಕ ಕೆ.ಪಿ.ಶ್ರೀಕಾಂತ್, ‘ಈ ಪಾತ್ರಕ್ಕೆ ಮೊದಲು ಮಲಯಾಳಂ ನಟ ಸೌಬಿನ್ ಸಾಹಿರ್‌ರನ್ನು ಸಂಪರ್ಕಿಸಿದ್ದೆವು. ‘ಮಂಜುಮ್ಮೆಲೆ ಬಾಯ್ಸ’, ‘ಕೂಲಿ’ ಚಿತ್ರದ ಯಶಸ್ಸಿನ ಬಳಿಕ ಅವರು ತುಂಬಾ ಬಿಜಿಯಾಗಿದ್ದರು. ಹಾಗಾಗಿ, ಅವರು ನಮಗೆ ಸಿಗಲಿಲ್ಲ. ಕಥೆಗೆ ಪೂರಕವಾಗಿ ನ್ಯಾಯ ಒದಗಿಸುವವರು ಯಾರು ಎಂದು ಯೋಚಿಸುವಾಗ ನಮಗೆ ಜಾನ್ ವಿಜಯ್ ನೆನಪಾದರು. ತಮಿಳಿನಲ್ಲಿ ಮಿಂಚಿರುವ ಅವರು ‘ಪೃಥ್ವಿ’, ‘ಗಜಕೇಸರಿ’ ಮೂಲಕ ಕನ್ನಡಕ್ಕೂ ಪರಿಚಿತರು. ಅವರನ್ನು ಸಂಪರ್ಕಿಸಿ, ಕಥೆ ಹೇಳಿದೆವು. ವಿಜಯ್‌ಗೆ ಕಥೆ ತುಂಬಾ ಇಷ್ಟವಾಗಿ ಬಿಜಿಯಿದ್ದರೂ, ಪಾತ್ರ ಮಾಡಲು ಒಪ್ಪಿಕೊಂಡರು. ಈ ಪಾತ್ರಕ್ಕೆ ಸಂಪೂರ್ಣ ನ್ಯಾಯ ಒದಗಿಸುತ್ತಾರೆ ಎಂಬ ನಂಬಿಕೆಯಿದೆ. ಸದ್ಯ ಜೂನ್ 6ರಂದು 27ರವರೆಗೆ ಬೆಂಗಳೂರಿನಲ್ಲಿ ನಡೆಯುವ ಶೂಟಿಂಗ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ. ಬಳಿಕ ಚಿತ್ರೀಕರಣ ಮಂಗಳೂರಿಗೆ ಶ್‌ಟಿ ಆಗಲಿದೆ. ಈ ಚಿತ್ರಕ್ಕಾಗಿ ಡಾನ್ ವಿಜಯ್ ಒಟ್ಟು 30 ದಿನಗಳ ಡೇಟ್ಸ್ ನೀಡಿದ್ದಾರೆ. ಈಗಾಗಲೇ 50ರಷ್ಟು ಶೂಟಿಂಗ್ ಪೂರ್ಣಗೊಂಡಿದೆ. ಜತೆ ಜತೆಗೆ ಪೋಸ್ಟ್-ಪ್ರೊಡಕ್ಷನ್‌ಗಳು ಕೂಡ ನಡೆಯುತ್ತಿವೆ. ಇದೇ ದಸರಾ ಹಬ್ಬಕ್ಕೆ ಕನ್ನಡ ಮತ್ತು ತೆಲುಗು ಭಾಷೆಯಲ್ಲಿ ಈ ಸಿನಿಮಾ ರಿಲೀಸ್ ಮಾಡಲಿದ್ದೇವೆ’ ಎಂದು ಹೇಳಿಕೊಂಡರು.