ನ್ಯೂಸ್

ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಜತೆ ಕನ್ನಡದ ನಟ ವಸಿಷ್ಠ ಸಿಂಹ

ಬೆಂಗಳೂರು: ಸ್ಯಾಂಡಲ್‌ವುಡ್‌ ನಟ ವಸಿಷ್ಠ ಸಿಂಹ  ಕನ್ನಡದ ಜತೆಗೆ ಪರಭಾಷೆಯಲ್ಲಿಯೂ ಮಿಂಚುತ್ತಿದ್ದಾರೆ. ವಸಿಷ್ಠ ಸಿಂಹ ಇದೀಗ ಮತ್ತೆ ಟಾಲಿವುಡ್‌ನತ್ತ ಮುಖ ಮಾಡಿದ್ದಾರೆ. 2022ರಲ್ಲಿ ತೆರೆಕಂಡಿದ್ದ ಓದೆಲಾ ರೈಲ್ವೆ ಸ್ಟೇಷನ್‌ ಸಿನಿಮಾದ ಸೀಕ್ವೆಲ್‌ ವಾರಾಣಸಿಯಲ್ಲಿ ಸೆಟ್ಟೇರಿದೆ. ಈ ಚಿತ್ರದಲ್ಲಿ ವಸಿಷ್ಠಗೆ ತಮನ್ನಾ ಭಾಟಿಯಾ ನಾಯಕಿಯಾಗಿದ್ದಾರೆ.
ಗಾಯಕನಾಗಿ ತೆಲುಗು ಚಿತ್ರಕ್ಕೆ ಪರಿಚಿತರಾಗಿದ್ದ ವಸಿಷ್ಠ ಸಿಂಹ `ಓದೆಲಾ ರೈಲ್ವೆ ಸ್ಟೇಷನ್’ ಸಿನಿಮಾ ಮೂಲಕ ನಾಯಕನಾಗಿ ತೆಲುಗು ಸಿನಿಮಂದಿಯ ಹೃದಯ ಗೆದ್ದಿದ್ದಾರೆ.  
2022ರಲ್ಲಿ ಆಹಾ ಒಟಿಟಿಯಲ್ಲಿ ಬಿಡುಗಡೆಯಾಗಿದ್ದ ʻಓದೆಲಾ ರೈಲ್ವೆ ಸ್ಟೇಷನ್ʼ ಸಿನಿಮಾಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು. ಈ ಚಿತ್ರದಲ್ಲಿ ವಸಿಷ್ಠ ಸಿಂಹ ವಿಭಿನ್ನ ಪಾತ್ರದಲ್ಲಿ ಅಭಿನಯ ಮಾಡಿದ್ದರು. ತಿರುಪತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಧೋಬಿಯಾಗಿ ಮಿಂಚಿದ್ದಾರೆ. ಇದೂವರೆಗೂ ಮಾಡಿರದಂತಹ ವಿಶಿಷ್ಟ ಪಾತ್ರದಲ್ಲಿ ವಸಿಷ್ಠ ಕಾಣಿಸಿದ್ದಾರೆ. 
 ʻಓದೆಲಾ ರೈಲ್ವೆ ಸ್ಟೇಷನ್‌ ಪಾರ್ಟ್ 2ʼ ತಯಾರಾಗುತ್ತಿದೆ. ಅದರ ಭಾಗವಾಗಿ ಮಾ.2ರಂದು ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಿನಿಮಾದ ಮುಹೂರ್ತ ನೆರವೇರಿದೆ. ಮಿಲ್ಕ್​ ಬ್ಯೂಟಿ ತಮನ್ನಾ, ವಸಿಷ್ಠ ಸಿಂಹ ಫೋಟೋಗೆ ಪೋಸ್ ಕೊಟ್ಟಿದ್ದು, ಇದರಲ್ಲಿ ಹರಿಪ್ರಿಯ ಕೂಡ ಇದ್ದಾರೆ. ʻಓದೆಲಾ ರೈಲ್ವೆ ಸ್ಟೇಷನ್ʼ ಸೀಕ್ವೆಲ್​ನ ಶೂಟಿಂಗ್ ನಿನ್ನೆಯಿಂದನೇ ಪ್ರಾರಂಭವಾಗಿದೆ.

ʻ

.