ಪುತ್ತೂರು: ಪ್ರಧಾನ ಮಂತ್ರಿ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ಯೋಜನೆಯಡಿ ಫಲಾನುಭವಿಗಳಿಗೆ ಆಹಾರ ಸಂಸ್ಕರಣ ದೃಷ್ಟಿಕೋನ ತರಬೇತಿ ಕಾರ್ಯಾಗಾರ ಪುತ್ತೂರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ನಡೆಯಿತು.
ತಾಲೂಕು ಯೋಜನಾಽಕಾರಿ ಸುಕನ್ಯಾ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಹರಿಪ್ರಸಾದ್ ಪಿ.ಎಂ.ಎಫ್.ಎಂ.ಇ ಯೋಜನೆಯ ಬಗ್ಗೆ ಮಾಹಿತಿ ನೀಡಿದರು. ತಾಪಂ ಸಹಾಯಕ ನಿರ್ದೇಶಕಿ ಶೈಲಜಾ ಭಟ್, ಈಶ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟ ಅಧ್ಯಕ್ಷೆ ಮೀನಾಕ್ಷಿ ಮಾತನಾಡಿದರು.
ಜಿಲ್ಲಾ ಸಂಪನ್ಮೂಲ ವ್ಯಕ್ತಿ ಡಾ.ಎ.ಎ.ಫಜಲ್ ಪಿ.ಎಂ.ಎಫ್.ಎಂ.ಇ ಯೋಜನೆಯ ಉದ್ದೇಶ, ಆನ್‌ಲೈನ್ ಅರ್ಜಿ, ಬೇಕಾಗಿರುವ ದಾಖಲಾತಿಗಳು, ಬ್ಯಾಂಕಿಂಗ್ ಸಾಲ ಸಹಾಯಧನ, ಆಹಾರ ಉತ್ಪನ್ನ ಚಟುವಟಿಕೆ ಕುರಿತು ತರಬೇತಿ ನೀಡಿದರು. ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಪಿ.ಎಂ.ಎ-.ಎಂ.ಇ ಯೋಜನೆಯಡಿ ಉತ್ಪನ್ನಗಳ ಮಾರುಕಟ್ಟೆ, ಬ್ರಾಂಡಿಂಗ್, ಲೇಬಲಿಂಗ್, ಎಂ.ಎಸ್.ಎಂ.ಇ, ಎಫ್.ಎಸ್.ಎಸ್.ಎ.ಐ, ಬಗ್ಗೆ ತರಬೇತಿ ನೀಡಿದರು. ಬ್ಯಾಂಕಿಂಗ್ ಸಾಲ ಸೌಲಭ್ಯದ ಬಗ್ಗೆ ಆರ್ಥಿಕ ಸಾಕ್ಷರತೆ ಕೇಂದ್ರದ ಗೀತಾ ಮಾಹಿತಿ ನೀಡಿದರು.
ಪುತ್ತೂರು, ಕಡಬ, ಬೆಳ್ತಂಗಡಿ, ಸುಳ್ಯ ತಾಲೂಕಿನ ಪಿ.ಎಂ.ಎಫ್.ಎಂ.ಇ ಫಲಾನುಭವಿಗಳು ಉಪಸ್ಥಿತರಿದ್ದರು. ದಿವ್ಯ ದೇವಚಳ್ಳ ಪ್ರಾರ್ಥಿಸಿದರು. ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಜಗತ್ ಕೆ. ಸ್ವಾಗತಿಸಿದರು. ಯುವ ವೃತ್ತಿಪರ ವಿನಿತ್ ವಿಶು ಮೋನಿಸ್ ಪ್ರಾಸ್ತವನೆಗೈದರು. ತಾಲೂಕು ವ್ಯವಸ್ಥಾಪಕಿ ನಳಿನಾಕ್ಷಿ ವಂದಿಸಿದರು. ವಲಯ ಮೇಲ್ವಿಚಾರಕಿ ನಮಿತಾ ಕೆ. ಕಾರ್ಯಕ್ರಮ ನಿರೂಪಿಸಿದರು.