ನ್ಯೂಸ್

ದಿ. ದೇವರಾಜ ಅರಸು ಅವರ ತತ್ವಾದರ್ಶ ರೂಢಿಸಿಕೊಳ್ಳಿ; ಚಂಪಕ್ಕ

Haveri - Kariyappa Aralikatti

ರಾಣೆಬೆನ್ನೂರ: ದಿ. ದೇವರಾಜ ಅರಸು ಅವರು ಹಿಂದುಗಳ ವರ್ಗದವರ ಶ್ರಯೋಭಿವೃದ್ಧಿಗೆ ನಾನಾ ಬಗೆಯ ಯೋಜನೆಗಳನ್ನು ಜಾರಿಗೆ ತಂದು ಶ್ರಮಿಸಿದ್ದಾರೆ. ಅಂಥವರು ಇಂದಿಗೂ ಸಮಾಜದಲ್ಲಿ ಮಾದರಿಯಾಗಿದ್ದು ಇಂದಿನ ಯುವಪೀಳಿಗೆ ಅವರ ತತ್ವಾದರ್ಶಗಳನ್ನು ರೂಢಿಸಿಕೊಳ್ಳಬೇಕು ಎಂದು ನಗರಸಭೆ ಅಧ್ಯೆ ಚಂಪಕ್ಕ ಬಿಸಲಹಳ್ಳಿ ಹೇಳಿದರು.

ತಾಲೂಕು ಆಡಳಿತ, ತಾಪಂ, ನಗರಸಭೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಗರದ ತಾಪಂ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಮಾಜಿ ಸಿಎಂ ಡಿ. ದೇವರಾಜ ಅರಸು ಅವರ 110ನೇ ಜನ್ಮ ದಿನಾಚರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ನಗರಸಭೆ ಸದಸ್ಯ ಪುಟ್ಟಪ್ಪ ಮರಿಯಮ್ಮನವರ ಮಾತನಾಡಿ, ಅರಸು ಅಂಥವರಿಗೆ ಡಾ. ಅಂಬೇಡ್ಕರ್​ ಅವರ ಪ್ರಭಾವ ಬೀರಿದರು. ಸಮಾಜಕ್ಕೆ ತಿಳವಳಿಕೆ ನೀಡದೆ ಇರುವುದು, ಸಮಾಜದ ಏಳಿಗೆಗೆ ಕೆಲವೊಬ್ಬರು ಕಾರಣರಾದರು. ಇಂದಿನ ದಿನದಲ್ಲಿ ಆಥಿರ್ಕವಾಗಿ ಸಭಲತೆ ಸಾಧಿಸಲು ಏಕತೆ ಬರಬೇಕಾಗಿದೆ. ಎಲ್ಲರಿಗೂ ಅಧಿಕಾರ ಸಾಮಾನವಾಗಿ ಹಂಚಿಕೆಯಾಗಬೇಕು ಎಂಬುದು ಎಲ್ಲರ ಉದ್ದೇಶವಾಗಿದೆ ಎಂದರು.

ತಹಸೀಲ್ದಾರ್​ ಆರ್​.ಎಚ್​. ಭಾಗವಾನ್​ ಅಧ್ಯಕ್ಷತೆ ವಹಿಸಿದ್ದರು. ಸುಣಕಲ್ಲಬಿದರಿ ಅರಳಿ ಸಿದ್ದಲಿಂಗಪ್ಪ ಸರ್ಕಾರಿ ಕಾಲೇಜ್​ನ ಪ್ರಾಚಾರ್ಯ ಡಾ. ಎಸ್​.ಪಿ. ಗೌಡರ ಉಪನ್ಯಾಸ ನೀಡಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ರಾಜಣ್ಣ ಮೋಟಗಿ, ಕುರುಬ ಸಮಾಜದ ತಾಲೂಕು ಅಧ್ಯಕ್ಷ ಷಣ್ಮುಖಪ್ಪ ಕಂಬಳಿ, ನಗರಸಭೆ ಸದಸ್ಯ ಪ್ರಕಾಶ ಪೂಜಾರ, ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಗಾಯತ್ರಿ ಕೆ.ಎಚ್​., ತಾಪಂ ಇಒ ಪರಮೇಶ, ಬಿಇಒ ಶ್ಯಾಮಸುಂದರ ಅಡಿಗ, ಪ್ರಮುಖರಾದ ನೀಲಕಂಠಪ್ಪ ಕೂಸಗೂರ, ರಾಮಪ್ಪ ನಾಯಕ, ಹನುಮಂತಪ್ಪ ಕಬ್ಬಾರ, ರವೀಂದ್ರಗೌಡ ಪಾಟೀಲ ಹಾಗೂ ವಿವಿಧ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.