ಅಫ್ಘಾನಿಸ್ತಾನ: 280 ಜನರನ್ನು ಗಡ್ಡ ಬೆಳೆಸದ ಕಾರಣಕ್ಕೆ 280 ಜನರನ್ನು ತಾಲಿಬಾನ್ ಸರ್ಕಾರದ ನೈತಿಕ ಸಚಿವಾಲಯವು ಕೆಲಸದಿಂದ ವಜಾಗೊಳಿಸಿದೆ.
ತಾಲಿಬಾನ್ ಸರ್ಕಾರದ ನೈತಿಕ ಸಚಿವಾಲಯವು 280 ಜನರನ್ನು ಕೇವಲ ಗಡ್ಡ ಬೆಳೆಸಲು ವಿಫಲರಾದ ಕಾರಣ ಕೆಲಸದಿಂದ ವಜಾಗೊಳಿಸಿದೆ. ತಾಲಿಬಾನಿಗರ ಇಸ್ಲಾಮಿಕ್ ಕಾನೂನಿನಂತೆ ಅವರನ್ನು ವಜಾಗೊಳಿಸಲಾಗಿದೆ. ಅನೈತಿಕ ಕೃತ್ಯಗಳಿಗಾಗಿ ಕಳೆದ ವರ್ಷ 13,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ನೈತಿಕ ಸಚಿವಾಲಯದ ಯೋಜನೆ ಮತ್ತು ನಿಯಮಗಳ ನಿರ್ದೇಶಕ ಮೊಹಿಬುಲ್ಲಾ ಮೊಖ್ಲಿಸ್ ಅವರು, ಗಡ್ಡ ಬೆಳೆಸದೇ ಇದಿದ್ದಕ್ಕಾಗಿ ಭದ್ರತಾ ಪಡೆಗಳಲ್ಲಿ ಕರ್ತವ್ಯದಲ್ಲಿದ್ದ 281 ಸೈನಿಕರನ್ನು ವಜಾಗೊಳಿಸಲಾಗಿದೆ. ಕಳೆದ ವರ್ಷ ಅಫ್ಘಾನಿಸ್ತಾನದಲ್ಲಿ ಅನೈತಿಕ ಚಟುವಟಿಕೆಗಳಿಗಾಗಿ 13,000 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರನ್ನು 24 ಗಂಟೆಗಳ ಒಳಗೆ ಬಿಡುಗಡೆ ಮಾಡಲಾಯಿತು.
ಸಂಗೀತ ಕಲೆ ಮುಂತಾದ ಸಂಸ್ಕೃತಿಕ ಕಾರ್ಯಕ್ರಮಗಳಿಗೂ ನಿಷೇಧ ಹೇರಿರುವಂತೆ ಕಾಣುತ್ತಿದ್ದು, ಕಳೆದ ವರ್ಷ ಅಧಿಕಾರಿಗಳು 21,328 ಸಂಗೀತ ವಾದ್ಯಗಳನ್ನು ನಾಶಪಡಿಸಿದ್ದಾರೆ ಮತ್ತು ಸಾವಿರಾರು ಕಂಪ್ಯೂಟರ್ ಆಪರೇಟರ್‌ಗಳನ್ನು ಮಾರುಕಟ್ಟೆಗಳಲ್ಲಿ ಅನೈತಿಕ ಚಲನಚಿತ್ರಗಳನ್ನು ಮಾರಾಟ ಮಾಡುವುದನ್ನು ತಡೆದಿದ್ದಾರೆ ಎಂದು ಮೊಖ್ಲಿಸ್ ಹೇಳಿದ್ದಾರೆ. ಮಹಿಳೆಯರ ಮಾರಾಟದ 200 ಕ್ಕೂ ಹೆಚ್ಚು ಪ್ರಕರಣಗಳು ಮತ್ತು ಮಹಿಳೆಯರ ವಿರುದ್ಧದ ಹಿಂಸಾಚಾರದ 2,600 ಕ್ಕೂ ಹೆಚ್ಚು ಪ್ರಕರಣಗಳನ್ನು ತಡೆದಿದ್ದೇವೆ ಎಂದು ಮೊಖ್ಲಿಸ್ ಹೇಳಿದ್ದಾರೆ.
ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತದಿಂದಾಗಿ ಜನರ ಜೀವನವು ಶೋಚನೀಯವಾಗಿದೆ. ಮಹಿಳೆಯರ ಮೇಲೆ ಎಲ್ಲಾ ರೀತಿಯ ವಿಲಕ್ಷಣ ನಿರ್ಬಂಧಗಳನ್ನು ಹೇರುವ ಮತ್ತು ಅವರನ್ನು ಮನೆಯೊಳಗೆ ಬಂಧಿಸುವ ಸರ್ಕಾರವು ಈಗ ಪುರುಷರ ಮೇಲೂ ದೌರ್ಜನ್ಯವನ್ನು ಹೆಚ್ಚಿಸಿದೆ.