ಎನ್.ಆರ್.ಪುರ: ಜಿಲ್ಲೆಯ ಎಲ್ಲೆಡೆ ಡೆಂೆ ಜ್ವರ ಕಾಣಿಸಿಕೊಳ್ಳುತ್ತಿರುವುದರಿಂದ ಅಂಗನವಾಡಿ ಕಾರ್ಯಕರ್ತೆಯರು ಮಕ್ಕಳನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು ಎಂದು ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾ ಬೆನ್ನಿ ಸಲಹೆ ನೀಡಿದರು.
ನಾಗಲಾಪುರ ಗ್ರಾಪಂಯಲ್ಲಿ ನಡೆದ ನಿಧಿ-1ರ ಅನುದಾನದಲ್ಲಿ 8 ಅಂಗನವಾಡಿಗಳಿಗೆ ಚಾಪೆ, ಬೆಡ್‌ಶೀಟ್ ವಿತರಣೆ ಹಾಗೂ
ನಿವೃತ್ತ ಅಂಗನವಾಡಿ ಕಾರ್ಯಕರ್ತೆಗೆ ಬೀಳ್ಕೊಡುಗೆ, ನೂತನ ಕಾರ್ಯದರ್ಶಿಗೆ ಸ್ವಾಗತಿಸುವ ಸಮಾರಂಭದಲ್ಲಿ ಮಾತನಾಡಿ, ಅಂಗನವಾಡಿ, ಮನೆಯ ಸುತ್ತ ನೀರು ನಿಲ್ಲದಂತೆ ಜಾಗ್ರತೆ ವಹಿಸಬೇಕು. ಸ್ವಚ್ಛತೆ ಬಗ್ಗೆ ಗಮನ ನೀಡಬೇಕು ಎಂದರು.
ಮುಂಡೊಳ್ಳಿ ಅಂಗನವಾಡಿಯಲ್ಲಿ 32 ವಷರ್ ಸೇವೆ ಸಲ್ಲಿಸಿ ನಿವೃತ್ತರಾದ ಶ್ಯಾಮಲಾ ಅವರು ಅದೇ ಅಂಗನವಾಡಿಯಲ್ಲಿ ತಮ್ಮ ವೃತ್ತಿ ಪ್ರಾರಂಭಿಸಿ ಇಲ್ಲೇ ನಿವೃತ್ತಿಯಾಗಿದ್ದಾರೆ. ವೃತ್ತಿಯಲ್ಲಿ ನಿವೃತ್ತಿಯಾದರೂ ಜೀವನದಲ್ಲಿ ನಿವೃತ್ತಿ ಎಂಬುದು ಇಲ್ಲ. ನಿಮ್ಮ ಸೇವೆಯನ್ನು ಬೇರೆ ಕ್ಷೇತ್ರದಲ್ಲೂ ತೊಡಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
8 ಅಂಗನವಾಡಿ ಕಾರ್ಯಕರ್ತೆಯರಿಗೆ ಚಾಪೆ, ಬೆಡ್‌ಶೀಟ್ ವಿತರಿಸಲಾಯಿತು. ಶ್ಯಾಮಲಾ ಅವರಿಗೆ ಸನ್ಮಾನಿಸಲಾಯಿತು. ನೂತನ ಕಾರ್ಯದರ್ಶಿ ಪ್ರಕಾಶ್ ಅವರಿಗೆ ಸ್ವಾಗತಿಸಲಾಯಿತು.
ಸಭೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಆಶಾ, ಪಿಡಿಒ ಪ್ರೇಮಕುಮಾರ್, ಗ್ರಾಪಂ ಸದಸ್ಯರು, ಅಂಗನವಾಡಿ ಶಿಕ್ಷಕಿಯರು, ಗ್ರಾಪಂ ಸಿಬ್ಬಂದಿ ಇದ್ದರು.