ರಸ್ತೆ ಅಭಿವೃದ್ಧಿಗೆ ಆಗ್ರಹಿಸಿ ಕುಂಬಾರಕೇರಿ ಭಾಗದ ಜನರು ಕೆ.ಮಾಯಣ್ಣ ಗೌಡ ಅವರಿಗೆ ಮನವಿ ಸಲ್ಲಿಸಿದರು.ರಘುವೀರ್ ಸಿಂಗ್, ಶರತ್ ಮರಿಯಪ್ಪ. ಎಸ್.ಪಿ.ಶೇಷಾದ್ರಿ, ಚಂದ್ರಕಾಂತ್, ಹಾಲೇಶ್, ರಾಜಶೇಖರ್ ಮುಂತಾದವರಿದ್ದರು.  
ನ್ಯೂಸ್

ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ

ಅರವಿಂದ ಅಕ್ಲಾಪುರ

ಶಿವಮೊಗ್ಗ: ನಗರ ಪಾಲಿಕೆ ವ್ಯಾಪ್ತಿಯ ವಾರ್ಡ್ ನಂ.30ರಲ್ಲಿ ಕುಂಬಾರಕೇರಿ ಎಡ ಮತ್ತು ಬಲಭಾಗದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ರಸ್ತೆಗಳ ಅಭಿವೃದ್ಧಿಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಸೀಗೆಹಟ್ಟಿ ನಾಗರಿಕರ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ಸ್ಥಳೀಯರು ಪಾಲಿಕೆ ಆಯುಕ್ತ ಕೆ.ಮಾಯಣ್ಣ ಗೌಡ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಮಕ್ಕಳು, ಮಹಿಳೆಯರು, ವಯೋವೃದ್ಧರು ರಸ್ತೆಯಲ್ಲಿ ಓಡಾಡುವುದೇ ಕಷ್ಟವಾಗುತ್ತಿದೆ. ಮಳೆಗಾಲದ ಸಂದರ್ಭ ಇದೇ ರಸ್ತೆಯಿಂದ ಸಾಕಷ್ಟು ಅಧ್ವಾನ ಉಂಟಾಗಿತ್ತು. ಪಾಲಿಕೆಯಿಂದ ಈ ರಸ್ತೆಗಳ ಡಾಂಬರೀಕರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು

ಪ್ರಮುಖರಾದ ಶರತ್ ಮರಿಯಪ್ಪ, ಜಿ.ವೀರೇಶ್, ಚಂದ್ರಕಾಂತ್, ರವಿ, ಎಸ್.ಪಿ.ಶೇಷಾದ್ರಿ, ಎಸ್.ಪಿ.ಕೇಶವ, ಹಾಲೇಶ್, ರಘುವೀರ್‌ಸಿಂಗ್, ತಿಪ್ಪೇಶ್, ಹಾಲೇಶ್, ಮನೋಹರ್, ನಂಜುಂಡಪ್ಪ, ಮಂಜುನಾಥ್, ರಾಜಶೇಖರ್, ಮಲ್ಲಿಕಾರ್ಜುನ್ ಇತರರಿದ್ದರು.