ತೈಪೇಯಿ: ಸೋನಿ ಕಂಪನಿ ಬಿಡುಗಡೆ ಮಾಡಿರುವ ಹೊಚ್ಚ ಹೊಸ ಪ್ಲೇಸ್ಟೇಷನ್ 5 ಬಿಡುಗಡೆ ಮಾಡಿದ ಹೆಚ್ಚು ದಿನವೇನೂ ಆಗಿಲ್ಲ. ಆಗಲೇ ಔಟ್ ಆಫ್ ಸ್ಟಾಕ್! ಜಿನ್ ವು ಎಂಬಾತ ಪ್ಲೇ ಸ್ಟೇಷನ್ 5 ಗಾಗಿ ಹುಡುಕಾಡುತ್ತಿದ್ದಾಗ ಆದ ಅನುಭವವನ್ನು ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ. ಅದು ಹೀಗಿದೆ-
ತೈವಾನಿನ ಪ್ರಮುಖ ಆನ್ಲೈನ್ ಮಾರ್ಕೆಟ್ ತಾಣ 'Pchome'ನಲ್ಲೊಂದು ಜಾಹೀರಾತು ಗಮನಸೆಳೆಯಿತು. ಹೊಚ್ಚ ಹೊಸ ಪ್ಲೇಸ್ಟೇಷನ್ 5 ಮಾರಾಟಕ್ಕಿದೆ ಎಂಬುದಾಗಿತ್ತು ಅದು. ಸ್ವಂತಕ್ಕಾಗಿ ತೆಗೆದುಕೊಂಡ ಪ್ಲೇ ಸ್ಟೇಷನ್ 5 ಅನ್ನು ಯಾರೂ ಕೂಡಲೇ ಮಾರಾಟ ಮಾಡಲಾರರು. ಏನೋ ಇದೆ ಈ ಮಾರಾಟದ ಹಿನ್ನೆಲೆ ಎಂಬ ಸಂದೇಹದೊಂದಿಗೆ ಆ ವ್ಯಕ್ತಿಯ ಜತೆಗೆ ವ್ಯವಹಾರಕ್ಕೆ ಇಳಿದೆ. ನಮ್ಮ ಮಾತು ಕತೆ ಹೀಗಿತ್ತು -
ಇದನ್ನೂ ಓದಿ: ಹೆಂಡತಿಯನ್ನು ಮನೆ ತುಂಬಿಸುವ ಬದಲು ಕ್ವಾರಂಟೈನ್ ಕೇಂದ್ರಕ್ಕೋದ ವರ! ಕರೊನಾ ಇದ್ದಿದ್ದು ಗೊತ್ತಿದ್ದರೂ ಮುಂಜಾಗ್ರತೆ ವಹಿಸದ ವಧು
ಯಾಕೆ ಈ ಹೊಸ ಪ್ಲೇ ಸ್ಟೇಷನ್ 5 ಮಾರಾಟ ಮಾಡ್ತಿದ್ದೀರಿ? ಎರಡು ಕೊಂಡುಕೊಂಡ್ರಾ?
ಇಲ್ಲ, ಒಂದೇ ಖರೀದಿಸಿದ್ದು.
ಮತ್ತೆ ಯಾಕೆ ಮಾರಾಟ ಮಾಡ್ತಿದ್ದೀರಾ? ಎಂದು ಕೇಳಿದ ಕೂಡಲೇ ಆತನ ಕಂಗಳಲ್ಲಿ ನೋವು ಕಾಣಿಸಿತು. ಕಣ್ಣೀರು ತುಂಬಿಕೊಂಡು ಹೇಳಿದ..
ಪ್ಲೇ ಸ್ಟೇಷನ್ 5 ಮನೆಗೆ ಕೊಂಡೊಯ್ದೆ. ಹೆಂಡ್ತಿಗೆ ಏರ್ಪ್ಯೂರಿಫೈಯರ್ ಅಂತ ಹೇಳಿದೆ. ವಾರದಲ್ಲೇ ನನ್ನ ಕಳ್ಳಾಟ ಬಯಲಾಯಿತು. ಅದು ಏರ್ಪ್ಯೂರಿಫೈಯರ್ ಅಲ್ಲ ಅನ್ನೋದು ಹೆಂಡ್ತಿಗೆ ಗೊತ್ತಾಗಿ ಹೋಯಿತು. ವಾಪಸ್ ಕೊಡ್ತಿಯೋ ಇಲ್ವೋ ಅಂತ ರಾದ್ಧಾಂತ ಶುರು ಮಾಡಿದ್ದಾಳೆ. ಅದಕ್ಕೇ ಇದನ್ನು ಮಾರ್ತಾ ಇದ್ದೇನೆ..
ಅಂತೂ ಮಹಿಳೆಯೊಬ್ಬಳು ಈಗಲೂ ಪಿಎಸ್5 ಮತ್ತು ಏರ್ಪ್ಯೂರಿಫೈಯರ್ನ ವ್ಯತ್ಯಾಸ ಗುರುತಿಸ್ತಾಳೆ ಅಂದಂಗಾಯಿತು!
ಜಿನ್ ವು ಅವರ ಫೇಸ್ಬುಕ್ ಪೋಸ್ಟ್ಗೆ ಸಾಕಷ್ಟು ಮಂದಿ ಪ್ರತಿಕ್ರಿಯಿಸಿದ್ದು, ಬಹಳಷ್ಟು ಫನ್ನಿ ಕಮೆಂಟ್ಗಳೂ ಇವೆ ಅದ್ರಲ್ಲಿ...
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..