ನ್ಯೂಸ್

S*X ಚಾಕೊಲೇಟ್ ಮಾರಾಟ! 1 ತಿಂಗಳಲ್ಲಿ ಈ ಜೋಡಿ ಗಳಿಸಿದ್ದೆಷ್ಟು ಗೊತ್ತಾ? ಕೇಳಿದ್ರೆ ದಂಗಾಗ್ತೀರಾ

ಇತ್ತೀಚಿನ ದಿನಗಳಲ್ಲಿ ಚಿತ್ರ-ವಿಚಿತ್ರ ರೀತಿಯ ಪ್ರಾಡೆಕ್ಟ್​ಗಳು ಮಾರುಕಟ್ಟೆಗೆ ಪ್ರವೇಶಿಸುತ್ತಿವೆ. ಅದರಲ್ಲಿ ಕೆಲವು ನಮ್ಮ ಗಮನಕ್ಕೆ ಬಂದರೆ, ಇನ್ನೂ ಕೆಲವು ಗಮನಕ್ಕೆ ಬಾರದಂತೆ ಹೋಗುತ್ತವೆ. ಒಂದಷ್ಟು ವಿಷಯಗಳ ಬಗ್ಗೆ ನಮಗೆ ಅರಿವು ಮೂಡವುದೇ ಈ ಸಾಮಾಜಿಕ ಜಾಲತಾಣದಿಂದ ಎಂದರೆ ಖಂಡಿತ ತಪ್ಪಾಗಲಾರದು. ಯಾಕಂದ್ರೆ, ಈ ವಿಷಯ ಕೂಡ ಎಲ್ಲರ ಗಮನಸೆಳೆದಿರುವುದು ಇದೇ ಸೋಷಿಯಲ್ ಮೀಡಿಯಾದಲ್ಲಿ ಹರಿದುಬಂದ ವರದಿ ಮೂಲಕವೇ.

ಇತ್ತೀಚಿನ ದಿನಗಳಲ್ಲಿ ಲೈಂಗಿಕ ಅರಿವು ನಿಧಾನವಾಗಿ ಅನೇಕರಲ್ಲಿ ಮೂಡುತ್ತಿದೆ. ಅದರ ಬಗ್ಗೆ ಹೆಚ್ಚಿನ ತಿಳುವಳಿಕೆ ಪಡೆಯುತ್ತಿದ್ದಾರೆ. ಜನರು ಈಗ ತಮ್ಮ ಕಾಳಜಿ, ನ್ಯೂನತೆಗಳು ಮತ್ತು ಅಗತ್ಯಗಳ ಬಗ್ಗೆ ಹೆಚ್ಚು ಮುಕ್ತರಾಗಿದ್ದಾರೆ. ಈ ಬೆನ್ನಲ್ಲೇ ಮಾರುಕಟ್ಟೆಯೂ ಸಹ ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ಹೊಸ ಹೊಸ ಪ್ರಾಡೆಕ್ಟ್​ಗಳನ್ನು ಜನರಿಗೆ ಪರಿಚಯಿಸುವಲ್ಲಿ ಮುಂಚೂಣಿಯಲ್ಲಿದೆ ಹಾಗೂ ವಿಸ್ತಾರಗೊಳ್ಳುತ್ತಿವೆ. ಲೈಂಗಿಕ ವಿಷಯವನ್ನೇ ತಮ್ಮ ವ್ಯಾಪಾರದ ಮೂಲ ಬಂಡವಾಳವನ್ನಾಗಿ ಮಾಡಿಕೊಂಡ ತಮಿಳುನಾಡಿನ ಪ್ರವೀಣ್ ಕೆ.ಆರ್ ಮತ್ತು ಸಿಂಧು ಜೋಡಿ ಹೊಸದೊಂದು ಸ್ಟಾರ್ಟ್‌ಅಪ್‌ ಚಾಲ್ತಿಗೆ ತಂದಿದ್ದಾರೆ.

ಬಗೆ ಬಗೆಯ ಸೆಕ್ಸ್​ ಚಾಕೊಲೇಟ್‌ಗಳ ಶ್ರೇಣಿಯೊಂದಿಗೆ ಬ್ರ್ಯಾಂಡ್ ಅನ್ನು ಪರಿಚಯಿಸಿರುವ ಈ ಜೋಡಿ, ಕೊಕೊಲೋವ್ ಚಾಕೊಲೇಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ತಿನಿಸಿನ ಪದಾರ್ಥಗಳನ್ನು ನೈಸರ್ಗಿಕ ಕಾಮೋತ್ತೇಜಕಗಳಿಂದ ತಯಾರಿಸಲಾಗುತ್ತದೆ ಎಂದು ತಿಳಿಸಿದ್ದಾರೆ. ಕೇವಲ ಒಂದು ತಿಂಗಳಲ್ಲಿ ಈ ಜೋಡಿ ಬರೋಬ್ಬರಿ 15 ಲಕ್ಷ ರೂ. ಆದಾಯ ಗಳಿಸಿದೆ ಎಂದು ವರದಿಯೊಂದು ಉಲ್ಲೇಖಿಸಿದೆ,(ಏಜೆನ್ಸೀಸ್).