ನ್ಯೂಸ್

ವೈಬ್ರೇಟರ್ ಕೇಳಿದಳು... ತಾಯಿಯ ಹೆಸರಲ್ಲಿ ಕೊಳಕು ಜೋಕ್ಸ್​, ಸ್ಟ್ಯಾಂಡಪ್​ ಕಾಮಿಡಿಯನ್ ವಿರುದ್ಧ ಭುಗಿಲೆದ್ದ ಆಕ್ರೋಶ! Swati Sachdeva

Swati Sachdeva : ಸ್ಟ್ಯಾಂಡಪ್​ ಕಾಮಿಡಿಯನ್ ಸ್ವಾತಿ ಸಚ್‌ದೇವ ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತಮಾಷೆಗಾಗಿ ಹೇಳಿದ ಮಾತುಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಟೀಕೆಗಳಿಗೆ ಗುರಿಯಾಗಿದೆ.

ತನ್ನ ಕೋಣೆಯಲ್ಲಿ ವೈಬ್ರೇಟರ್ (ಲೈಂಗಿಕ ಸಾಧನ) ಸಿಕ್ಕಾಗ ತನ್ನ ತಾಯಿ ಹೇಗೆ ಪ್ರತಿಕ್ರಿಯಿಸಿದಳು ಎಂಬುದರ ಕುರಿತು ಸ್ವಾತಿ ಸಚ್​ದೇವ್ ನೀಡಿದ ಹಾಸ್ಯಮಯ ಹೇಳಿಕೆಗಳು ಸಾಮಾಜಿಕ ಜಾಲತಾಣದಲ್ಲಿ ಕೋಲಾಹಲವನ್ನೇ ಸೃಷ್ಟಿಸಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಕ್ಲಿಪ್ ಒಂದು ಶನಿವಾರ ವೈರಲ್ ಆಗಿದ್ದು, ನೋಡುಗರಲ್ಲಿ ಆಕ್ರೋಶವನ್ನು ಹುಟ್ಟುಹಾಕಿದೆ.

ಕೆಲ ನೆಟ್ಟಿಗರು ಇದನ್ನು ತಮಾಷೆಯಾಗಿ ತೆಗೆದುಕೊಂಡರೆ, ಇನ್ನು ಕೆಲವರು ಪಾಲಕರನ್ನು ಗೇಲಿ ಮಾಡುವುದು ಮಿತಿ ಮೀರುತ್ತಿದೆ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ. ಸ್ವಾತಿ ಸಚ್‌ದೇವ ಅವರ ಹೇಳಿಕೆಗಳು ಹಾಸ್ಯಕ್ಕೆ ಮಿತಿ ಇರಬೇಕೇ ಅಥವಾ ಹಾಸ್ಯದ ಹೆಸರಿನಲ್ಲಿ ಏನೇನೋ ಹೇಳುವುದು ಸರಿಯೇ ಎಂಬ ಚರ್ಚೆಗೆ ಕಾರಣವಾಗಿವೆ.

ವಿಡಿಯೋದಲ್ಲಿ ಹೇಳಿರುವುದೇನು?

ವಿವರಕ್ಕೆ ಬರುವುದಾದರೆ, ಇತ್ತೀಚೆಗೆ ಸ್ವಾತಿ ಸಚ್‌ದೇವ ಸ್ಟ್ಯಾಂಡ್-ಅಪ್ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ನನ್ನ ಅಮ್ಮ ಕೂಲ್​ ಮಾಮ್​ ಆಗಲು ಪ್ರಯತ್ನಿಸುತ್ತಾರೆ. ಇತ್ತೀಚೆಗೆ ನನ್ನ ತಾಯಿಯೊಂದಿಗೆ ಒಂದು ಆಸಕ್ತಿಕರ ಘಟನೆ ನಡೆಯಿತು. ಆಕೆಗೆ ಆಕಸ್ಮಿಕವಾಗಿ ಒಂದು ಸಾಧನ ಸಿಕ್ಕಿತು ಮತ್ತು ವಿಚಿತ್ರವಾದ ಶಬ್ಧ ಮಾಡಲು ಪ್ರಾರಂಭಿಸಿತು. ನನ್ನ ರೂಮ್​ನಲ್ಲಿ ಆಕೆ ವೈಬ್ರೇಟರ್ ನೋಡಿದಾಗ ಆ ಪದವನ್ನು ಗಟ್ಟಿಯಾಗಿ ಹೇಳಲು ಕೂಡ ಹಿಂಜರಿದಳು. ನನ್ನ ತಾಯಿ ಅದನ್ನು ಕೇಳುತ್ತಾಳೆ ಎಂಬುದು ನನಗೆ ಖಚಿತವಾಗಿತ್ತು. ಅವಳು ಅದನ್ನು ಗ್ಯಾಜೆಟ್, ಆಟಿಕೆ ಎಂದು ಕರೆಯಲು ಪ್ರಾರಂಭಿಸಿದಳು. ನಾನು, ‘ಅಮ್ಮ, ಅದು ಅಪ್ಪನದು ಎಂದು ಹೇಳಿದೆ. ಅದಕ್ಕೆ ಅವಳು, ಅಸಂಬದ್ಧವಾಗಿ ಮಾತನಾಡಬೇಡ, ಅವನ ಆಯ್ಕೆ ಏನು ಅನ್ನೋದು ನನಗೆ ತಿಳಿದಿದೆ ಎಂದರು. ಇದಾದ ಬಳಿಕ, ಅಮ್ಮ ವೈಬ್ರೇಟರ್​ ಅನ್ನು ಹೊರತೆಗೆದು ನನ್ನನ್ನು ಪ್ರಶ್ನಿಸಲು ಪ್ರಾರಂಭಿಸಿದರು. ಅಲ್ಲದೆ, ಅದನ್ನು ಜೋರಾಗಿ ಎಸೆದಾಗ ಬೆಡ್​ ಮೇಲೆ ಬಿದ್ದು, ಆನ್​ ಆಗಿ ವಿಚಿತ್ರ ಸೌಂಡ್​ ಬರಲು ಶುರುವಾಯ್ತು ಅದನ್ನು ನೋಡಿದ ಅಮ್ಮ ಅದನ್ನು ಆಫ್​ ಮಾಡುವಂತೆ ಕೇಳಿದರು ಎಂದು ಸ್ವಾತಿ ಹೇಳಿದ್ದಾರೆ.

ಈ ವಿಡಿಯೋ ಕ್ಲಿಪ್​ ಅನ್ನು ತಮ್ಮ ಯೂಟ್ಯೂಬ್​ ಚಾನೆಲ್​ನಲ್ಲಿ ಪೋಸ್ಟ್​ ಮಾಡಿದ್ದು, ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ವಿಡಿಯೋ ನೋಡಿದ ನೆಟ್ಟಿಗರು ಸ್ವಾತಿ ಜೋಕ್ಸ್​ಗೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ. ಕೆಲವರು ಇದನ್ನು ತಮಾಷೆಯಾಗಿ ತೆಗೆದುಕೊಂಡರೆ, ಇನ್ನು ಕೆಲವರು ಇದನ್ನು ತೀವ್ರವಾಗಿ ಟೀಕಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಕೆಲವರು ಹಾಸ್ಯದ ಹೆಸರಿನಲ್ಲಿ ಅಸಭ್ಯತೆಯನ್ನು ಪ್ರಚಾರ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಇನ್ನು ಕೆಲವರು ತಾಯಿಯ ಹೆಸರನ್ನು ಈ ರೀತಿ ಉಪಯೋಗಿಸುವ ಮೂಲಕ ಜನಪ್ರಿಯತೆ ಗಳಿಸುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ. ಇನ್ನು ಕೆಲವರು ಇದು ಹಾಸ್ಯವಲ್ಲ, ತಾಯಿಯನ್ನು ಅವಮಾನಿಸುವ ಒಂದು ಕೆಟ್ಟ ವ್ಯವಹಾರ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಅಂದಹಾಗೆ 1995ರಲ್ಲಿ ಜನಿಸಿದ ಸ್ವಾತಿ ಸಚ್‌ದೇವ, ಪ್ರಸಿದ್ಧ ಸ್ಟ್ಯಾಂಡ್-ಅಪ್ ಕಾಮಿಡಿಯನ್​, ತಮ್ಮ ಇನ್​​ಸ್ಟಾಗ್ರಾಂನಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಅವರು ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಪ್ರಸಾರವಾಗುವ "ಕಾಮಿಕ್‌ಸ್ತಾನ್" ಕಾರ್ಯಕ್ರಮದಲ್ಲಿಯೂ ಭಾಗವಹಿಸಿದ್ದಾರೆ. ಇಲ್ಲಿಯವರೆಗೆ 1,000ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಮುಖ್ಯವಾಗಿ ಪಾಪ್ ಸಂಸ್ಕೃತಿ ಮತ್ತು ದೈನಂದಿನ ಜೀವನದಂತಹ ವಿಷಯಗಳನ್ನು ಅವರು ಸದಾ ಅಣಕಿಸುತ್ತಾರೆ. (ಏಜೆನ್ಸೀಸ್​)