ರಾಣೆಬೆನ್ನೂರ: ಮಾಸೂರಿನ ಯುವತಿ ಸ್ವಾತಿ ಬ್ಯಾಡಗಿ ಕೊಲೆ ಪ್ರಕರಣ ಖಂಡಿಸಿ ಹಾಗೂ ಆಕೆಯನ್ನು ಹತ್ಯೆಗೈದ ಆರೋಪಿಗಳಿಗೆ ಗಲ್ಲು ಶಿೆ ವಿಧಿಸುವ ಮೂಲಕ ಇಂಥ ಪ್ರಕರಣಗಳಿಗೆ ಕಡಿವಾಣ ಹಾಕಬೇಕು ಆಗ್ರಹಿಸಿ ಎಬಿವಿಪಿ ನೇತೃತ್ವದಲ್ಲಿ ವಿವಿಧ ಕಾಲೇಜ್ಗಳ ವಿದ್ಯಾಥಿರ್ಗಳು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು.
ನಗರದಲ್ಲಿ ಸ್ವಾತಿ ಕರ್ತವ್ಯ ನಿರ್ವಹಿಸುತ್ತಿದ್ದ ಖಾಸಗಿ ಆಸ್ಪತ್ರೆಯಿಂದ ಪ್ರತಿಭಟನೆ ಆರಂಭಿಸಿದ ವಿದ್ಯಾಥಿರ್ಗಳು ಹಳೇ ಪಿ.ಬಿ. ರಸ್ತೆ ಮೂಲಕ ಬಸ್ ನಿಲ್ದಾಣದ ವೃತ್ತಕ್ಕೆ ಬಂದು ಮಾನವ ಸರಪಳಿ ನಿಮಿರ್ಸಿ ವಾಹನ ಸಂಚಾರ ತಡೆದು ಪ್ರತಿಭಟಿಸಿದರು. ಆರೋಪಿ ನಯಾಜ್ ಸೇರಿ ಮೂವರು ಆರೋಪಿಗಳ ವಿರುದ್ಧ ಘೋಷಣೆ ಕೂಗಿ, ನಯಾಜ್ನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಅಮಾಯಕ ಯುವತಿಯನ್ನು ಬರ್ಬರವಾಗಿ ಹತ್ಯೆಗೈದ ನಯಾಜ್ ಸೇರಿ ಮೂವರಿಗೂ ಗಲ್ಲು ಶಿೆ ವಿಧಿಸಬೇಕು ಎಂದು ಆಗ್ರಹಿಸಿದರು.
ಸ್ವಾತಿ ನರ್ಸ್ ವೃತ್ತಿ ಮಾಡಿಕೊಂಡು ಜೀವನ ಮಾಡುತ್ತಿದ್ದಳು. ಅಂಥ ಯುವತಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇದರಿಂದ ಇಡೀ ಮಹಿಳಾ ಸಮಾಜ ಹಾಗೂ ವಿದ್ಯಾಥಿರ್ನಿಯರಲ್ಲಿ ಭಯ ಕಾಡಲಾರಂಭಿಸಿದೆ. ಆದ್ದರಿಂದ ಪೊಲೀಸರು ಈ ಪ್ರಕರಣದ ಆರೋಪಿಗಳ ವಿರುದ್ಧ ಗಲ್ಲು ಶಿೆ ಆಗುವಂತೆ ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಬೇಕು.
ನ್ಯಾಯಾಲಯವು ಯಾವ ಕಾರಣಕ್ಕೂ ಇವರಿಗೆ ಕ್ಷಮಾಪಣೆ ಮಾಡದೆ ಗಲ್ಲು ಶಿೆ ವಿಧಿಸಬೇಕು. ಆರೋಪಿಗಳ ಪರವಾಗಿ ಯಾವ ವಕೀಲರು ನ್ಯಾಯ ಮಂಡಿಸಬಾರದು. ನ್ಯಾಯಾಲಯ ಆರೋಪಿಗಳಿಗೆ ನೀಡುವ ಶಿೆ ಇತರರಿಗೆ ಎಚ್ಚರಿಕೆಯಾಗಬೇಕು. ರಾಜ್ಯ ಹಾಗೂ ದೇಶದಲ್ಲಿ ಇಂಥ ಪ್ರಕರಣ ಮುಂದುವರಿಯಬಾರದು ಆ ರೀತಿಯಲ್ಲಿ ಆರೋಪಿಗಳಿಗೆ ಶಿೆಯಾಗಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಬಂದ ಗ್ರೇಡ್&2 ತಹಸೀಲ್ದಾರ್ ಅರುಣ ಕಾರಗಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಡಾ. ಬಸವರಾಜ ಕೇಲಗಾರ, ಸಂಟನೆಯ ವಿಭಾಗೀಯ ಸಂಟನಾ ಕಾರ್ಯದಶಿರ್ ಮಣಿಕಂಠ ಕಳಸ, ರಾಜ್ಯ ಸಹಕಾರ್ಯದಶಿರ್ ಅಭಿಷೇಕ ದೊಡ್ಡಮನಿ, ರಾಜ್ಯ ಕಾರ್ಯಕಾರಿಣಿ ಸದಸ್ಯ ಅಭಿಲಾಷ ಬದಾಮಿ, ನಗರ ಕಾರ್ಯದಶಿರ್ ಪವನಕುಮಾರ ಇಟಗಿ, ನಗರ ಸಹ ಕಾರ್ಯದಶಿರ್ ಯಲ್ಲಮ್ಮ ಆರ್.ಎಂ., ಪ್ರಮುಖರಾದ ನಾಗರಾಜ ಕುರವತ್ತಿಗೌಡ್ರ, ನವೀನ ಜೆ.ಕೆ., ನಂದೀಶ ಪೂಜಾರ, ನಾಗರಾಜ ಮುದ್ದಪ್ಪಳವರ, ಹಷಿರ್ತಾ ಎಂ., ಶೃತಿ ಆರ್.ಎಂ., ಭರತ ದೂಳಿಹೊಳೆ ಸೇರಿ ನಗರದ ವಿವಿಧ ಕಾಲೇಜ್ನ ನೂರಾರು ವಿದ್ಯಾಥಿರ್ಗಳು ಪಾಲ್ಗೊಂಡಿದ್ದರು.