ನ್ಯೂಸ್

ನೀರ್​ ದೋಸೆ ಹಾಕಿದ 'ಸಿರಿ'ಯಲ್ಲಿ ರಾಜ್​ ಬಿ.ಶೆಟ್ಟಿ!

ಬೆಂಗಳೂರು: ಕನ್ನಡ ಚಿತ್ರರಂಗದ ನಿರ್ದೇಶಕ, ಬರಹಗಾರ, ನಟ ರಾಜ್​ ಬಿ.ಶೆಟ್ಟಿ ಮತ್ತು ಸಿರಿ ರವಿಕುಮಾರ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಬಹುನಿರೀಕ್ಷಿತ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದ ಟ್ರೇಲರ್​ ಇಂದು ಅಧಿಕೃತವಾಗಿ ಅನಾವರಣಗೊಳ್ಳಲಿದೆ.

ಈ ಕುರಿತಂತೆ ಸಿನಿಪ್ರೇಕ್ಷಕರಲ್ಲಿ ಈ ಹಿಂದೆಯಿದ್ದ ನಿರೀಕ್ಷೆ ಈಗ ಮತ್ತಷ್ಟು ಹೆಚ್ಚಾಗಿದೆ. ಇದರ ನಡುವೆ ಚಿತ್ರತಂಡ ವಿಶೇಷವಾಗಿ ಚಿತದ್ರ ಪ್ರಚಾರ ಕಾರ್ಯವೊಂದರಲ್ಲಿ ಭಾಗಿಯಾಗಿದ್ದು, ಖಾಸಗಿ ಹೋಟೆಲ್​ನಲ್ಲಿ ನೀರ್​ ದೋಸೆ ಹಾಕಿ ಸಂಭ್ರಮಿಸಿದೆ.

ವಿಭಿನ್ನ ರೀತಿಯಲ್ಲಿ ಪ್ರಚಾರ ಕಾರ್ಯದಲ್ಲಿ ತೊಡಗಿರುವ "ಸ್ವಾತಿ ಮುತ್ತಿನ ಮಳೆ ಹನಿ" ತಂಡವು ಖಾಸಗಿ ಹೋಟೆಲ್​ನ ಸಹಯೋಗದೊಂದಿಗೆ ಸ್ಪೆಷಲ್​ ನೀರ್​ ದೋಸೆಯನ್ನು ಹಾಕುವ ಮುಖೇನ ಅದನ್ನು ವಿಶೇಷ ರೀತಿಯಲ್ಲಿ ಅನಾವರಣಗೊಳಿಸಿತು.

ಸಿನಿಮಾದ ನಾಯಕ ರಾಜ್ ಬಿ.ಶೆಟ್ಟಿ ಮತ್ತು ನಾಯಕಿ ಸಿರಿ ರವಿಕುಮಾರ್ ಹೋಟೆಲ್​ಗೆ​ ಆಗಮಿಸಿ, ವಿಶೇಷ ನೀರ್ ದೋಸೆಯನ್ನು ಖುದ್ದಾಗಿ ಬಹಿರಂಗಪಡಿಸಿದರು. ಈ ವೇಳೆ ಚಿತ್ರದ ತಾರೆಯರೊಂದಿಗೆ ಹೋಟೆಲ್​ನ ಇತರೆ ಸಿಬ್ಬಂದಿಗಳು ಕೂಡ ಪಾಲ್ಗೊಂಡರು.

ಸದ್ಯ ಹಾಡುಗಳ ಮೂಲಕವೇ ಚಿತ್ರಪ್ರೇಮಿಗಳ ಗಮನ ಸೆಳೆದಿರುವ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾ ಇದೇ ನವೆಂಬರ್​ 24 ರಂದು ರಾಜ್ಯಾದ್ಯಂತ ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್​ಗೆ ಸಜ್ಜಾಗಿದೆ. ಈ ಚಿತ್ರವನ್ನು ಸ್ಯಾಂಡಲ್​ವುಡ್​ನ ಮೋಹಕ ತಾರೆ, ನಟಿ ರಮ್ಯ ನಿರ್ಮಿಸಿದ್ದಾರೆ. ಇದು ಅವರ ಚೊಚ್ಚಲ ನಿರ್ಮಾಣವಾಗಿದೆ.