ನ್ಯೂಸ್

PHOTOS | ಹಿಂದು ಸಂಪ್ರದಾಯದಂತೆ ಮತ್ತೊಮ್ಮೆ ಮದುವೆಯಾಗುತ್ತಿರುವ ಸ್ವರಾ ಭಾಸ್ಕರ್; ಹಳದಿ ಶಾಸ್ತ್ರದ ಸಂಭ್ರಮದಲ್ಲಿ ಬಾಲಿವುಡ್ ನಟಿ

ನವದೆಹಲಿ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸಮಾಜವಾದಿ ಪಕ್ಷದ ಫಹಾದ್ ಅಹ್ಮದ್ ಜತೆಗೆ ವಿವಾಹವಾಗಿದ್ದರು. ಇದು ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇಬ್ಬರೂ ಕಳೆದ ಜನವರಿ 6 ರಂದು ವಿಶೇಷ ವಿವಾಹ ಕಾಯ್ದೆಯಡಿ ನ್ಯಾಯಾಲಯದಲ್ಲಿ ವಿವಾಹವಾಗಿದ್ದರು.

ಸ್ವರಾ ಭಾಸ್ಕರ್ ಅವರ ಕುಟುಂಬದವರ ಆಸೆಯಂತೆ ಫಹಾದ್ ಜೊತೆಗೆ ಹಿಂದೂ ಸಂಪ್ರದಾಯದಂತೆ ಮದುವೆಯಾಗುತ್ತಿದ್ದಾರೆ. ಈ ಹೀಗಾಗಿ ತಮ್ಮ ಪ್ರೀತಿಯನ್ನು ಹೇಳುವ ಮಾದರಿಯಲ್ಲಿ ವಿಶೇಷ ವಿನ್ಯಾಸದ ಲಗ್ನ ಪತ್ರಿಕೆಯನ್ನೂ ವಿನ್ಯಾಸಗೊಳಿಸಿದ್ದರು. ಇದರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದೀಗ ತಮ್ಮ ಸಂಪ್ರದಾಯಬದ್ಧ ಮದುವೆಗೂ ಮುನ್ನ ಹಳದಿ ಶಾಸ್ತ್ರದಲ್ಲಿ ಸ್ವರಾ ಭಾಸ್ಕರ್ ಹಾಗೂ ಫಹಾದ್ ಅಹ್ಮದ್ ಪಾಲ್ಗೊಂಡಿದ್ದಾರೆ. ಸದ್ಯ ಸಮಾಜಿಕ ಜಾಲತಾಣದಲ್ಲಿ ಫೋಟೋಗಳು ಸದ್ದು ಮಾಡುತ್ತಿವೆ.