ನ್ಯೂಸ್

PHOTOS | ಸಂಪ್ರದಾಯ ಬದ್ಧ ವಿವಾಹಕ್ಕೆ ಮುಂದಾದ ಸ್ವರಾ ಭಾಸ್ಕರ್; ಇಲ್ಲಿದೆ ನೋಡಿ ವಿಭಿನ್ನ ವಿನ್ಯಾಸದ ಆಹ್ವಾನ ಪತ್ರಿಕೆ….

ನವದೆಹಲಿ: ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಸಮಾಜವಾದಿ ಪಕ್ಷದ ಫಹಾದ್ ಅಹ್ಮದ್ ಜತೆಗೆ ವಿವಾಹವಾಗಿದ್ದರು. ಇದು ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಇಬ್ಬರೂ ಕಳೆದ ಜನವರಿ 6 ರಂದು ವಿಶೇಷ ವಿವಾಹ ಕಾಯ್ದೆಯಡಿ ನ್ಯಾಯಾಲಯದಲ್ಲಿ ವಿವಾಹವಾಗಿದ್ದರು.

ಇದೀಗ ಸ್ವರಾ ಭಾಸ್ಕರ್ ಮತ್ತು ಫಹಾದ್ ಸಾಂಪ್ರದಾಯಿಕವಾಗಿ ವಿವಾಹವಾಗಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಕುರಿತ ಆಹ್ವಾನ ಪತ್ರಿಕೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತಿದೆ. ಇವರಿಬ್ಬರ ಸಾಂಪ್ರದಾಯಿಕ ವಿವಾಹ ದೆಹಲಿಯಲ್ಲಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಆಪ್ತರು ಮತ್ತು ಕುಟುಂಬ ಸದಸ್ಯರು ಭಾಗವಹಿಸಲಿದ್ದಾರೆ.

ವಿಶೇಷ ಆಹ್ವಾನ ಪತ್ರಿಕೆಯನ್ನು ಪ್ರತೀಕ್ ಮತ್ತು ಅನುಪಮ್ ಎಂಬುವವರು ವಿನ್ಯಾಸಗೊಳಿಸಿದ್ದಾರೆ. ಈ ಬಗ್ಗೆ ಪ್ರತೀಕ್ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಫೋಟೋ ಹಂಚಿಕೊಂಡಿದ್ದಾರೆ. ಸ್ವರಾ ಮತ್ತು ಫಹದ್ ಪ್ರತಿಭಟನೆಯ ಸಂದರ್ಭದಲ್ಲಿ ಹೇಗೆ ಭೇಟಿಯಾದರು? ನಂತರ ಪ್ರೀತಿ ಹೇಗೆ ಚಿಗುರಿತು? ಜತೆಗೆ ಮುಂಬೈ ಮತ್ತು ಮರೀನ್​ ಡ್ರೈವ್​ನ ನೆನಪು, ಸಿನಿಮಾ ಮೇಲಿನ ಪ್ರೀತಿ ಹಾಗೂ ನೆಚ್ಚಿನ ಗಾಲಿಬ್ ಎಂಬ ಬೆಕ್ಕನ್ನು ಕೇಂದ್ರೀಕರಿಸಿಕೊಂಡು ಆಮಂತ್ರಣ ಪತ್ರ ವಿನ್ಯಾಸಗೊಳಿಸಬೇಕೆಂದು ಹೇಳಿದ್ದರು ಎಂದು ಪ್ರತೀಕ್ ಮತ್ತು ಅನುಪಮ್ ಬರೆದುಕೊಂಡಿದ್ದಾರೆ.