ನ್ಯೂಸ್

ಸ್ವಾಮಿನಾಥನ್ ವರದಿ ಕೊಲೆ ಮಾಡಿದ ಸರ್ಕಾರಗಳು: ಪತ್ರಕರ್ತ ಪಿ. ಸಾಯಿನಾಥ್

ಬೆಂಗಳೂರು ರೈತರು ಪ್ರಗತಿ ಕಾಣಬಹುದಾದ ಸ್ವಾಮಿನಾಥನ್ ವರದಿಯನ್ನು 2004ರಲ್ಲಿ ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಯಿತು. ಈ ವರದಿಯನ್ನು ಕೇಂದ್ರದಲ್ಲಿ ಆಡಳಿತ ನಡೆಸಿದ ಯುಪಿಎ ಮತ್ತು ಎನ್‌ಡಿಎ ಸರ್ಕಾರಗಳು ವರದಿಯನ್ನು ಸಂಸತ್ತಿನಲ್ಲಿ ಚರ್ಚಿಸದೆ ಕೊಲೆ ಮಾಡಿವೆ ಎಂದು ಪತ್ರಕರ್ತ ಪಿ. ಸಾಯಿನಾಥ್ ಆರೋಪಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘ ಗುರುವಾರ ಅರಮನೆ ರಸ್ತೆಯಲ್ಲಿರುವ ಬಸಪ್ಪ ಕೊಂಡಜ್ಜಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ಪರ್ಯಾಯ ಕೃಷಿ ಧೋರಣೆಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

ಯುಪಿಎ ಸರ್ಕಾರವು ಚರ್ಚಿಸುವ ಗೋಜಿಗೆ ಹೋಗಿಲ್ಲ. ಇದೇ ವಿಚಾರವಾಗಿ ಅಧಿಕಾರಕ್ಕೆ ಬಂದಲ್ಲಿ ಸ್ವಾಮಿನಾಥನ್ ವರದಿ ಜಾರಿಗೊಳಿಸುವುದಾಗಿ ೋಷಿಸಿದ್ದ ಎನ್‌ಡಿಎ, ಅಧಿಕಾರಕ್ಕೆ ಬಂದ ಒಂದೇ ತಿಂಗಳಿನಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವರದಿ ಜಾರಿಯಾದರೆ, ಮಾರುಕಟ್ಟೆ ಅಲ್ಲೋಲ ಕಲ್ಲೋಲವಾಗಲಿದೆ ಎಂಬ ಹೇಳಿಕೆ ನೀಡಿ ಅಲ್ಲಿಗೇ ವರದಿ ವಿಚಾರವನ್ನು ಮಕಾಡೆ ಮಲಗಿಸಿತು ಎಂದು ಹೇಳಿದರು.

- ಟಿ. ಯಶವಂತ, ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿದೇಶದಲ್ಲಿ ಉದಾರೀಕಣ, ಖಾಸಗೀಕರಣ ಮತ್ತು ಜಾಗತೀಕರಣ ನೀತಿ ಆರಂಭವಾದ ನಂತರ ರೈತರು ದಿವಾಳಿಯಾಗಿದ್ದಾರೆ. ಇದಕ್ಕೆ ಪರ್ಯಾಯವಾಗಿ ಕೃಷಿ ಧೋರಣಗೆಗಳನ್ನು ರಚಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಲು ಈ ವಿಚಾರ ಸಂಕಿರಣ ಆಯೋಜಿಸಲಾಗಿದೆ.