ನವದೆಹಲಿ: ದೇಶದ ನಗರಗಳ 2020ನೇ ಸಾಲಿನ ಸ್ವಚ್ಛತಾ ಶ್ರೇಣಿಯನ್ನು ಕೇಂದ್ರ ಸರ್ಕಾರ ಇಂದು ಪ್ರಕಟಿಸಿದ್ದು, ಸತತ ನಾಲ್ಕನೇ ವರ್ಷವೂ ಇಂದೋರ್ ದೇಶದ ನಂ.1 ಸ್ವಚ್ಛ ನಗರ ಎಂಬ ಸ್ಥಾನವನ್ನು ಉಳಿಸಿಕೊಂಡಿದೆ. ನಂತರದ ಸ್ಥಾನದಲ್ಲಿ ಸೂರತ್ ಮತ್ತು ನವಿ ಮುಂಬಯಿ ಗಳಿವೆ. ಛತ್ತೀಸ್ ಗಢ ಸ್ವಚ್ಛ ರಾಜ್ಯ ಎಂಬ ಕೀರ್ತಿಗೆ ಭಾಜನವಾಗಿದೆ. ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 11ನೇ ಸ್ಥಾನದಲ್ಲಿದೆ.
ಶ್ರೇಣಿ ವ್ಯವಸ್ಥೆಯಲ್ಲಿ ರಾಷ್ಟ್ರಮಟ್ಟ, ರಾಜ್ಯಮಟ್ಟ, ವಲಯ ಮಟ್ಟದ ಶ್ರೇಣಿಗಳನ್ನು ಸರ್ಕಾರ ಘೋಷಿಸಿದೆ. ಇದರಂತೆ, ಹತ್ತು ಲಕ್ಷ ಜನಸಂಖ್ಯೆಗಿಂತ ಹೆಚ್ಚಿರುವ ನಗರಗಳ ರಾಷ್ಟ್ರಮಟ್ಟದ ಶ್ರೇಣಿಯ ಟಾಪ್ 10 ರ ಪಟ್ಟಿಯಲ್ಲಿ ಗುಜರಾತ್ನ ಸೂರತ್(2), ಅಹಮದಾಬಾದ್(5), ರಾಜ್ ಕೋಟ್(6) ವಡೋದರಾ (10) ನಗರಗಳಿವೆ. ಈ ಪಟ್ಟಿಯಲ್ಲಿ ಬೆಂಗಳೂರು 37ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಕಾಡುಗಳ್ಳ ವೀರಪ್ಪನ್ ಸಹಚರ ಬಿಲವೇಂದ್ರನ್ ಸಾವು
ಪ್ರಧಾನಿ ನರೇಂದ್ರ ಮೋದಿಯವರು ಈ ವಾರ್ಷಿಕ ಸರ್ವೇಯನ್ನು 2016ರಲ್ಲಿ ಪರಿಚಯಿಸಿದ್ದರು. ಈ ಕಾರ್ಯಕ್ರಮದ ಲೈವ್ ಸ್ಟ್ರೀಮಿಂಗ್ Swachh Bharat Urban (@SwachhBharatGov) ಪ್ರಸಾರವಾಗಲಿದೆ. ಮೊದಲ ಆವೃತ್ತಿಯ ಟಾಪ್ ಶ್ರೇಣಿಯನ್ನು ಮೈಸೂರು ಗೆದ್ದರೆ, ನಂತರ 2017,2018,2019ರಲ್ಲಿ ಸತತ ಮೂರು ವರ್ಷ ಇಂದೋರ್ ಅಗ್ರಸ್ಥಾನಿಯಾಗಿ ಮುಂದುವರಿದಿತ್ತು.