ನ್ಯೂಸ್

ಅಕ್ರಮ ಸಂಬಂಧ ಶಂಕೆ; ಮಹಿಳೆ ಮತ್ತು ಇಬ್ಬರು ಪುರುಷರನ್ನು ಕಂಬಕ್ಕೆ ಕಟ್ಟಿಹಾಕಿ ಹಲ್ಲೆ| Thrashed

Thrashed: ಒಡಿಶಾದಲ್ಲಿ ಅನೈತಿಕ ಸಂಬಂಧದ ಶಂಕೆ ಹಿನ್ನೆಲೆ ಓರ್ವ ಮಹಿಳೆ ಮತ್ತು ಇಬ್ಬರು ಪುರುಷರನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಭೀಕರವಾಗಿ ಥಳಿಸಲಾಗಿದೆ. ತಕ್ಷಣ ಪೊಲೀಸರು ಮಧ್ಯ ಪ್ರವೇಶ ಮಾಡಿದ ಮೂವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಶನಿವಾರ (ಸೆ. 13) ವರದಿಯಾಗಿದೆ.

ಕಾಶಿಪುರ ಗ್ರಾಮದ ವಿವಾಹಿತ ಮಹಿಳೆಯಾಗಿದ್ದು, ಇಬ್ಬರು ಮಕ್ಕಳಿದ್ದಾರೆ. ಆ ಮಹಿಳೆ ಇಬ್ಬರು ಪುರುಷರೊಂದಿಗೆ ಮಯೂರ್ಭಂಜ್ ಜಿಲ್ಲೆಯ ಜಶಿಪುರ ವಾರದ ಮಾರುಕಟ್ಟೆಗೆ ಬೈಕ್‌ನಲ್ಲಿ ಹೋಗಿದ್ದರು ಎನ್ನಲಾಗಿದೆ. ಅವರು ವಾಪಸ್ ಬರುವಾಗ ಮಹಿಳೆಯ ಕುಟುಂಬ ಸದಸ್ಯರು ನೋಡಿದ್ದಾರೆ.

ಈ ಹಿನ್ನೆಲೆ ಇಬ್ಬರು ಪುರುಷರಲ್ಲಿ ಒಬ್ಬರಿಗೆ ಮಹಿಳೆ ಜೊತೆ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿ ಮೂವರನ್ನು ಕಂಬಕ್ಕೆ ಕಟ್ಟಿ ಭೀಕರವಾಗಿ ಥಳಿಸಿದ್ದಾರೆ. ಥಳಿಸಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸರು, ಮಹಿಳೆ ಮಾರುಕಟ್ಟೆಗೆ ಹೋಗಿದ್ದ ಪುರುಷರಲ್ಲಿ ಒಬ್ಬ ತನ್ನ ಅತ್ತೆ-ಮಾವನ ಕುಟುಂಬಕ್ಕೆ ತುಂಬಾ ಆಪ್ತನಾಗಿದ್ದನು ಮತ್ತು ಅವಳಿಗೆ ಸಹೋದರನಂತಿದ್ದನು ಎಂದು ಹೇಳಿದ್ದಾಳೆ. ಆದರೆ ನನ್ನ ತಂದೆ ಮತ್ತು ಚಿಕ್ಕಪ್ಪ ಹಾಗೂ ಇತರರು ಅವಳು ಅವನೊಂದಿಗೆ ಸಂಬಂಧ ಹೊಂದಿದ್ದಾಳೆಂದು ಅನುಮಾನಿಸಿ ಹಲ್ಲೆ ಮಾಡಿದ್ದಾರೆ. ಘಟನೆ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)