ಪಂಚನಹಳ್ಳಿ: ಎಸ್.ಮಾದಾಪುರ ಗ್ರಾಪಂ ಅಧ್ಯಕ್ಷರಾಗಿ ಸುಶೀಲಬಾಯಿ ಉಪಾಧ್ಯಕ್ಷರಾಗಿ ಮಧುಕುಮಾರ್ ಆಯ್ಕೆಯಾಗಿದ್ದಾರೆ.
ಗ್ರಾಪಂ ಕಚೇರಿಯಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಎಸ್ಸಿ ಮಹಿಳೆಗೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಸುಶೀಲಬಾಯಿ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅಧ್ಯಕ್ಷೆಯಾಗಿ ಆಯ್ಕೆಯಾದರು. ಉಪಾಧ್ಯಕ್ಷ ಸ್ಥಾನಕ್ಕೆ ಕೆ.ಬಿ.ಯೋಗೀಶ್ ಹಾಗೂ ಮಧುಕುಮಾರ್ ನಾಮಪತ್ರ ಸಲ್ಲಿಸಿದ್ದರು. 10 ಸದಸ್ಯ ಬಲದ ಗ್ರಾಪಂನ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಯೋಗೀಶ್(2) ಮತಪಡೆದರೆ, ಮಧುಕುಮಾರ್(8)ಮತಗಳನ್ನು ಪಡೆದು ಚುನಾಯಿತರಾಗಿ ಆಯ್ಕೆಯಾದರು.
ಚುನಾವಣಾಧಿಕಾರಿಯಾಗಿ ಬೀರೂರು ಬಿಇಒ ಗಂಗಾಧರಪ್ಪ ಕಾರ್ಯನಿರ್ವಹಿಸಿದರು. ಗ್ರಾಪಂ ಸದಸ್ಯರಾದ ಆಶಾರಾಣಿ, ಕವಿತಾ, ಗಿರಿಜಮ್ಮ, ಸಮೀರಾಬಾನು, ದೇವರಾಜ್, ಕೆ.ಜಿ.ಲೋಕೇಶ್, ರಘು ಹಾಗೂ ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ, ಮುಖಂಡರಾದ ಮಲ್ಲಿಕಾರ್ಜುನ, ಕೆ.ಸಿ.ಲೋಹಿತ್ ಕುಮಾರ್, ಬೀರಪ್ಪ, ಧನಂಜಯ, ಅಶೋಕ, ಪುಟ್ಟಪ್ಪ, ಗೀತಾಜಗದೀಶ್,ಪಿಡಿಒ ಸ್ವಪ್ನ ಮತ್ತಿತರಿದ್ದರು.